ಬಾಯಿಗೂ ರುಚಿ, ದೇಹಕ್ಕೂ ಹಿತವಾದ ಓಟ್ಸ್ ದೋಸೆ

ವಿಧವಿಧವಾಗಿ ಈಗಿರ ಆಹಾರ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ ಆಹಾರ ಪದಾರ್ಥವೆಂದರೆ ಓಟ್ಸ್. ಬೆಳಗ್ಗೆ ತಿಂಡಿ, ಸಂಜೆ ಸ್ನ್ಯಾಕ್ಸ್‌ಗೂ ಇದು ಓಕೆ. 

ಸುಲಭವಾಗಿ ಮಾಡಬಹುದಾದ, ರುಚಿಯಾದ ಓಟ್ಸ್ ದೋಸೆ ರೆಸಿಪಿ ಇಲ್ಲಿದೆ....

Instant Oats Dosa

ಬೇಕಾಗುವ ಸಾಮಾಗ್ರಿಗಳು

-   ಮುಕ್ಕಾಲು ಕಪ್ ಓಟ್ಸ್

-  ಅರ್ಧ ಕಪ್ ಅಕ್ಕಿ ಇಟ್ಟು

-  ಕಾಲು ಕಪ್ ರವೆ

-  ಅರ್ಧ ಕಪ್ ಮೊಸರು

-1 ಚಮಚ ಸಣ್ಣದಾಗಿ ತುರಿದ ಶುಂಠಿ

- ಸಣ್ಣದಾಗಿ ಹೆಚ್ಚಿರುವ ಕೊತ್ತಂಬರಿ ಸೊಪ್ಪು

- ಅರ್ಧ ಚಮಚ  ಮೆಣಸಿನ ಪುಡಿ

- ಸಣ್ಣಗೆ ಹೆಚ್ಚಿರುವ ಮೆಣಸಿನ ಕಾಯಿ 

- ಅರ್ಧ ಈರುಳ್ಳಿ

- 1 ಚಮಚ ಉಪ್ಪು

- 3 ಕಪ್ ನೀರು

ಮಾಡುವ ವಿಧಾನ:

ಮುಕ್ಕಾಲು ಕಪ್ ಓಟ್ಸ್ ಅನ್ನು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ. ಅದಕ್ಕೆ ಅಕ್ಕಿ ಇಟ್ಟು, ರವೆ, ಮೊಸರು, ಶುಂಠಿ, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಈರುಳ್ಳಿ, ಉಪ್ಪು ಮತ್ತು 3 ಕಪ್ ನೀರು ಸೇರಿ. 20 ನಿಮಿಷ ನೆನೆಯಲು ಬಿಡಿ. ನಂತರ ಕಾದ ಕಾವಲಿಗೆ ಹಾಕಿ. ರುಚಿ ರುಚಿಯಾದ ಓಟ್ಸ್ ದೋಸೆ ರೆಡಿ.

Latest Videos
Follow Us:
Download App:
  • android
  • ios