ಅಸ್ಥಿಮಜ್ಜೆಯನ್ನು ದಾನ ಮಾಡುವ ಕ್ರಮ ಹೇಗೆ? ಇಂಥ ದಾನದಿಂದ ದಾನಿಯ ಆರೋಗ್ಯ ಸ್ಥಿತಿ ಸಹಜವಾಗಿಯೇ ಇರುತ್ತದೆಯೇ? ತಿಳಿಸಿಕೊಡಿ.
1) ನನ್ನ ವಯಸ್ಸು 34. ಆದಷ್ಟುಉಪಕಾರಿಯಾಗಿ ಬದುಕಲು ನಿರ್ಧರಿಸಿದ್ದೇನೆ. ಅಸ್ಥಿಮಜ್ಜೆಯನ್ನು ದಾನ ಮಾಡುವ ಕ್ರಮ ಹೇಗೆ? ಇಂಥ ದಾನದಿಂದ ದಾನಿಯ ಆರೋಗ್ಯ ಸ್ಥಿತಿ ಸಹಜವಾಗಿಯೇ ಇರುತ್ತದೆಯೇ? ತಿಳಿಸಿಕೊಡಿ.
-ನವೀನ್ ಜಂಗುಳಿ ದಾವಣಗೆರೆ
ಉತ್ತರ: ನಿಮ್ಮದು ಒಳ್ಳೆಯ ನಿರ್ಧಾರ. ಅಸ್ಥಿಮಜ್ಜೆ ದಾನಕ್ಕೆ ಎರಡು ಮಾರ್ಗಗಳಿವೆ. ಮೊದಲನೆಯದ್ದು ಹಲವು ದಶಕಗಳಿಂದ ಜಾರಿಯಲ್ಲಿರುವ ‘ನೇರ ಅಸ್ಥಿಮಜ್ಜೆ ದಾನ'. ದಾನಿ ಒಂದು ದಿನದ ಮಟ್ಟಿಗೆ ಆಸ್ಪತ್ರೆಯಲ್ಲಿ ದಾಖಲಾಗಬೇಕು. ಆತನ ಅಸ್ಥಿಮಜ್ಜೆಗೆ ಅರಿವಳಿಕೆ ನೀಡಲಾಗುತ್ತದೆ. ಸಣ್ಣರಂಧ್ರದ ಮೂಲಕ ಪೃಷ್ಠದ ಭಾಗದಿಂದ ಬ್ಲಡ್ ಸ್ಟೆಮ್ ಸೆಲ್‌ಗಳನ್ನು ಸಂಗ್ರಹಿಸಲಾಗುತ್ತದೆ. ಇನ್ನೊಂದು ವಿಧಾನ, ಪಿಬಿಎಸ್‌ಸಿ (ಪೆರಿಫೆರಲ್ ಬ್ಲಡ್ ಸ್ಟೆಮ್ ಸೆಲ್). ಇದು ಸಾಮಾನ್ಯ ರಕ್ತದಾನದಂತೆಯೇ ಇರುತ್ತದೆ. ಈ ಕ್ರಮದಲ್ಲಿ ನಾಲ್ಕು ಅಥವಾ ಐದು ಜಿಸಿಎಸ್‌ಎಫ್ ಲಸಿಕೆ ಪಡೆಯಬೇಕಿದ್ದು, ಪೆರಿಫೆರಲ್ ರಕ್ತದಲ್ಲಿ ಬ್ಲಡ್ ಸ್ಟೆಮ್ ಸೆಲ್ ಅಂಶ ಹೆಚ್ಚಲು ನೆರವಾಗುತ್ತದೆ. ಒಟ್ಟಾರೆ ಸಂಪೂರ್ಣ ದಾನ ಪ್ರಕ್ರಿಯೆ ಮೂರರಿಂದ ನಾಲ್ಕು ತಾಸು ನಡೆಯಲಿದೆ. ಇನ್ನು ಇಂಥ ದಾನಗಳಿಂದ ದಾನಿಗಳಿಗೆ ಕೆಲವು ಗಂಟೆಗಳ ವರೆಗೆ ಸುಸ್ತು, ತೂಕಡಿಕೆ, ದೇಹದಲ್ಲಿ ನೋವು, ತಲೆನೋವು ಕಾಣಿಸಿಕೊಳ್ಳಬಹುದಷ್ಟೇ. ಇವನ್ನು ‘ಪ್ಯಾರಾಸೆಟಮೊಲ್' ಪಡೆಯುವ ಮೂಲಕ ಗುಣಪಡಿಸಿಕೊಳ್ಳಬಹುದು. ಈ ದಾನದಿಂದ ಭವಿಷ್ಯದಲ್ಲೂ ಪ್ರತಿಕೂಲ ಪರಿಣಾಮಗಳೇನೂ ಇರುವುದಿಲ್ಲ. ಎಂದಿನಂತೆ ಸಹಜಜೀವನ ನಡೆಸಬಹುದು.
ಡಾ.ಸುನಿಲ್ ಭಟ್, ಗ್ರಂಥಿ ತಜ್ಞ(ಕನ್ನಡ ಪ್ರಭ)
Click Here : ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
