ಮರಳುಗಾಡಿನ ದೇಶಗಳಾದ ಯುಎಇ, ಒಮಾನ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಹಲವು ಪ್ರದೇಶಗಳಲ್ಲಿ ಜನಜೀವನ ಹೀಗೆಯೇ ಇದೆ. ಹಲವು ನಿಬಂಧನೆಗಳಿವೆ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ನಿಜವಾಗಲೂ ದುಬೈ ಹೇಗಿದೆ. ವ್ಯಕ್ತಿಯೊಬ್ಬರು ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಹಲವು ವರ್ಷಗಳಿಂದ, ದುಬೈ ಭಾರತೀಯರಿಗೆ ದೇಶದ ಹೊರಗೆ ಸೆಟಲ್ ಆಗಲು ಮತ್ತು ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಬೆಳೆಯಲು ಅನುಕೂಲಕರ ತಾಣವಾಗಿದೆ. ಇತ್ತೀಚೆಗೆ, ದುಬೈನಲ್ಲಿ ವಾಸಿಸುವ ಭಾರತೀಯ ವ್ಯಕ್ತಿಯೊಬ್ಬರು ಹವಾಮಾನದಿಂದ ಹಿಡಿದು ಎಮಿರೇಟ್‌ನಲ್ಲಿ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರವರೆಗೆ ದುಬೈ ಬಗ್ಗೆ ಹಲವಾರು ಮಾಹಿತಿಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ದುಬೈ ಅಂದ್ರೆ ಯಾವಾಗಲೂ ಸಿಕ್ಕಾಪಟ್ಟೆ ಬಿಸಿಲು ಅಂತಾನೇ ಎಲ್ಲರೂ ತಿಳಿದುಕೊಂಡಿದ್ದಾರೆ. ಆದ್ರೆ ದುಬೈನಲ್ಲಿ ಯಾವಾಗಲೂ ಬಿಸಿಲಿರುವುದಿಲ್ಲ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಮಾತ್ರ ಸಿಕ್ಕಾಪಟ್ಟೆ ಬಿಸಿಲು. 40 °C ವರೆಗಿನ ತಾಪಮಾನವನ್ನು ಹೊಂದಿರುತ್ತದೆ. ಇತರ ತಿಂಗಳುಗಳು, ಹವಾಮಾನವು ಸಾಕಷ್ಟು ಅನುಕೂಲಕರವಾಗಿರುತ್ತದೆ. ಮಾತ್ರವಲ್ಲ ದುಬೈನಲ್ಲಿ ಅಲ್ಕೋಹಾಲ್ ನಿಷೇಧಿಸಲಾಗಿಲ್ಲ. ಮುಸ್ಲಿಮೇತರರು ಪರವಾನಗಿ ಪಡೆದ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಅಲ್ಕೋಹಾಲ್ ತೆಗೆದುಕೊಳ್ಳಲು ಅನುಮತಿಸಲಾಗಿದೆ. ಮನೆಯಲ್ಲಿ ವೈಯಕ್ತಿಕ ಬಳಕೆಗಾಗಿ, ಅಲ್ಕೋಹಾಲ್ ಪರವಾನಗಿಗಾಗಿ ಅರ್ಜಿ ಸಲ್ಲಿಸಿದರೆ ಸಾಕು ಎಂದಿದ್ದಾರೆ.
ಉದ್ಯಮಿ ಬಳಿ ಇದೆ ಅತೀ ದುಬಾರಿ ಪ್ಯೂರ್ ವೈಟ್ ಗೋಲ್ಡ್ ಬೆಂಜ್ ಕಾರು, ಇದರ ಬೆಲೆ 20.91 ಕೋಟಿ!
ಅನೇಕರು ಅಂದುಕೊಂಡಿರುವಂತೆ, ಎಲ್ಲಾ ವಲಸಿಗರು ದುಬೈನಲ್ಲಿ ವಿಚಿತ್ರ ಜೀವನಶೈಲಿಯನ್ನು ನಡೆಸುತ್ತಿಲ್ಲ. ಬಹುತೇಕರು ನಿಯಮಿತ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ, ಬಿಸಿನೆಸ್ ಮತ್ತು ಆರೋಗ್ಯ ಸೇವೆಯಲ್ಲಿ ಉದ್ಯೋಗಗಳನ್ನು ಮಾಡುತ್ತಿರುವ ಅನೇಕ ವಲಸಿಗರು ಇದ್ದಾರೆ. ಮತ್ತು ನಿಮ್ಮ ಆದಾಯಕ್ಕೆ ಅನುಗುಣವಾಗಿ ಇಲ್ಲಿ ಸಾಧಾರಣ ಜೀವನಶೈಲಿಯನ್ನು ಬದುಕಲು ಸಾಧ್ಯವಿದೆ ಎಂದು ವ್ಯಕ್ತಿ ಬರೆದಿದ್ದಾರೆ.
ಅಷ್ಟೇ ಅಲ್ಲ ನಗರದಲ್ಲಿ ಮಾತನಾಡುವ ಏಕೈಕ ಭಾಷೆ ಅರೇಬಿಕ್ ಅಲ್ಲ ಎಂದು ಸಹ ಅವರು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ ಇದು ಕೊನೆಯದು ಮತ್ತು ಮುಖ್ಯವಾದುದು, ದುಬೈ ಒಂದು ನಗರ, ದೇಶವಲ್ಲ. ಇದು ಯುಎಇ ಮೂಲದ ನಗರ ಎಂದು ರೋಹಿತ್ ಮಚಾಂಡ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ದುಬೈ ಮಹಿಳಾ ಸ್ನೇಹಿ ನಗರವಾಗಿದೆ.. UAE ಲಿಂಗ ಸಮಾನತೆಯನ್ನು ಉತ್ತೇಜಿಸಲು ಉತ್ಸುಕವಾಗಿದೆ. ಮಹಿಳೆಯರು ಈಗ ಉದ್ಯೋಗದಲ್ಲಿದ್ದಾ.ಪುರುಷರಂತೆ ಅದೇ ಕಾನೂನು ಹಕ್ಕುಗಳನ್ನು ಆನಂದಿಸುತ್ತಾರೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ವ್ಯಕ್ತಿ ತಿಳಿಸಿದ್ದಾರೆ. ಈ ಪೋಸ್ಟ್ ಸದ್ಯ ಎಲ್ಲೆಡೆ ವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.
ದುಬೈ ಪ್ರವಾಹ; 2 ವರ್ಷದ ಮಳೆ ಒಂದೇ ದಿನ ಬೀಳಲು ಮೋಡಬಿತ್ತನೆ ಕಾರಣವೇ? ಅಥವಾ..?
'ನಾನು ದುಬೈಯನ್ನು ಪ್ರೀತಿಸುತ್ತೇನೆ ಮತ್ತು ನೀವು ಹೇಳಿರುವುದರಲ್ಲಿ ಹೆಚ್ಚಿನದನ್ನು ಒಪ್ಪುತ್ತೇನೆ. ಆದರೆ ಇಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಕಡಿಮೆಯಿದೆ. ಮಹಿಳೆಯರು ವಾಹನ ಚಲಾಯಿಸಬಹುದು ಮತ್ತು ಹೆಚ್ಚಿನ ಕೆಲಸಗಳನ್ನು ಮಾಡಬಹುದು. ಆದರೆ ಇದೆಲ್ಲವನ್ನೂ ಗಂಡಸಿನ ಅನುಮತಿ ಪಡೆದ ನಂತರವಷ್ಟೇ ಆಗಿರುತ್ತದೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ಪ್ರತಿದಿನ ಹೊಸದನ್ನು ಕಲಿಯಿರಿ. ಯುಎಇ ಒಂದು ರೀತಿಯ ಮಿನಿ ದೇಶಗಳ ಸಂಘಟಿತವಾಗಿದೆ ಎಂದು ನಾನು ಭಾವಿಸಿದ್ದೆ' ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು.
