ವಾರಕ್ಕೆ ಎಷ್ಟು ಬಿಯರ್‌ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು?

ಬಿಯರ್ ಕೆಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಮಿತವಾಗಿ ಸೇವಿಸಬೇಕು. ಅತಿಯಾದ ಸೇವನೆಯು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

In One Week Drinking how much beer safe for health san

ಮಾನವ ಸಂಸ್ಕೃತಿಯಲ್ಲಿ ಅತ್ಯಂತ ದೀರ್ಘಕಾಲದಿಂದ ಇರುವ ಡ್ರಿಂಕ್‌ ಎಂದರೆ ಅದು ಬಿಯರ್‌. ಇದು ಕೆಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಇದು ಮಿತಿ ಮೀರಬಾರದು. ಹಾಗಿದ್ದಲ್ಲಿ ಮಾತ್ರವೇ ಗಂಭೀರವಾದ ಆರೋಗ್ಯ ಅಪಾಯಕ್ಕೆ ಎಡೆ ಮಾಡಿಕೊಡದೆ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಅತಿಯಾಗಿ ಬಿಯರ್ ಕುಡಿಯುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಆದ್ದರಿಂದ ನೀವು ಎಷ್ಟು ಸೇವಿಸುತ್ತೀರಿ ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯ. ನಿಮ್ಮ ಸೇವನೆಯನ್ನು ಮಿತವಾಗಿ ಇಟ್ಟುಕೊಳ್ಳುವ ಮೂಲಕ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಬಿಯರ್‌ ಸೇವನೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಬಿಯರ್ ಒಂದು ಆಲ್ಕೊಹಾಲ್ಯುಕ್ತ ಪಾನೀಯ. ನೀರು, ಹಾಪ್ಸ್ ಮತ್ತು ಯೀಸ್ಟ್ ಜೊತೆಗೆ ಬಾರ್ಲಿಯಂತಹ ಏಕದಳ ಧಾನ್ಯಗಳನ್ನು ಚೆನ್ನಾಗಿ ಹುದುಗಿಸುವ ಮೂಲಕ ತಯಾರಿಸಲಾಗುತ್ತದೆ. ಆಲ್ಕೋಹಾಲ್ ಬೈ ವಾಲ್ಯೂಮ್ (ABV) ಮೂಲಕ, ಇದು ಸಾಮಾನ್ಯವಾಗಿ 4% ರಿಂದ 6% ABV ವರೆಗೆ ಇರುತ್ತದೆ. ಈಗ ಬಿಯರ್‌ನಲ್ಲಿಯೇ ಹೆಚ್ಚಿನ ಆಲ್ಕೋಹಾಲ್‌ ಕಂಟೆಂಟ್‌ಗಳಿರುವ ಸ್ಟ್ರಾಂಗ್‌ ಬಿಯರ್‌ಗಳು ಲಭ್ಯವಿದೆ.

ರಾಷ್ಟ್ರೀಯ ಆರೋಗ್ಯ ಸೇವೆ (NHS) ಆಲ್ಕೋಹಾಲ್ ಯುನಿಟ್‌ಗಳನ್ನು ಡ್ರಿಂಕ್‌ನಲ್ಲಿನ ಶುದ್ಧ ಆಲ್ಕೋಹಾಲ್ ಪ್ರಮಾಣವನ್ನು ಉತ್ತಮವಾಗಿ ಪ್ರತಿನಿಧಿಸುವ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ. ಒಂದು ಯುನಿಟ್‌ 10ml ಅಥವಾ 8g ಶುದ್ಧ ಆಲ್ಕೋಹಾಲ್‌ಗೆ ಸಮಾನವಾಗಿರುತ್ತದೆ, ಇದು ಸರಾಸರಿ ವಯಸ್ಕರು ಒಂದು ಗಂಟೆಯಲ್ಲಿ ಚಯಾಪಚಯಗೊಳ್ಳುವ ಪ್ರಮಾಣವಾಗಿದೆ.

ಶಿಫಾರಸು ಮಾಡಲಾದ ಮಿತಿಗಳು: ಜನರು ತಮ್ಮ ಸಾಮಾನ್ಯ ಕುಡಿಯುವಿಕೆಯ ಭಾಗವಾಗಿ ವಾರಕ್ಕೆ 14 ಯೂನಿಟ್‌ಗಳಿಗಿಂತ ಹೆಚ್ಚು ಹೊಂದಿರಬಾರದು ಎಂದು NHS ಮಾರ್ಗಸೂಚಿಗಳು ಸೂಚಿಸುತ್ತವೆ. ಇದು ಪುರುಷರು ಹಾಗೂ ಮಹಿಳೆಯರು ಇಬ್ಬರಿಗೂ ಅನ್ವಯಿಸುತ್ತದೆ. ಈ 14 ಯುನಿಟ್‌ಗಳು ಹಲವು ದಿನಗಳ ಕಾಲ ವಿಸ್ತರಣೆ ಆಗಿರಬೇಕು, ವಾರದಲ್ಲಿ ಎರಡು ಬಾರಿ ಆಲ್ಕೋಹಾಲ್‌ ಇಲ್ಲದ ದಿನ ಇರಬೇಕು. 14 ಯುನಿಟ್‌ಗಳು ಸರಿಸುಮಾರು ಆರು ಪಿಂಟ್‌ ಬಿಯರ್‌ಗಳ ಸರಾಸರಿ ಸಾಮರ್ಥ್ಯ ಎಂದು ಅಂದಾಜು ಮಾಡಲಾಗುತ್ತದೆ.  ವಾರದಲ್ಲಿ ಈ ಮಟ್ಟದಲ್ಲಿ ಕುಡಿಯುತ್ತಿದ್ದರೆ ಮೂರು ದಿನಗಳು ಅಥವಾ ಅದಕ್ಕಿಂತ ಹೆಚ್ಚು ದಿನದಲ್ಲಿ ಸ್ಪೇಸ್ ಡ್ರಿಂಕ್ಸ್ ಆಗುತ್ತದೆ. ಆರೋಗ್ಯಕ್ಕೆ ನಿಮ್ಮ ಒಟ್ಟಾರೆ ಅಪಾಯವನ್ನು ಕಡಿಮೆ ಮಾಡಲು ವಾರದಲ್ಲಿ ಕೆಲವು ದಿನವನ್ನು ಆಲ್ಕೋಹಾಲ್‌ ಸೇವನೆ ಮಾಡದೇ ಇರುವ ದಿನವಾಗಿ ಪರಿಗಣಿಸಬೇಕು.

ಸ್ವಲ್ಪ ಪ್ರಮಾಣದಲ್ಲಿ ಬಿಯರ್ ಸೇವನೆಯು ಕೆಲವು ಧನಾತ್ಮಕ ಆರೋಗ್ಯ ಫಲಿತಾಂಶ ನೀಡುತ್ತದೆ ಎಂದ ಸಂಶೋಧನೆ ಹೇಳಿದೆ. ಅದರಲ್ಲೂ ಸಣ್ಣ ಪ್ರಮಾಣದಲ್ಲಿ ಬಿಯರ್‌ ಸೇವೆನೆ,ಹೃದ್ರೋಗ ಮತ್ತು ಆಸ್ಟಿಯೊಪೊರೋಸಿಸ್ನಂತಹ ವಿವಿಧ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯ ರಕ್ತನಾಳದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಪಾತ್ರ ವಹಿಸುತ್ತದೆ. ಏಕೆಂದರೆ, ಇದು HDL ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ, ಇದನ್ನು ಸಾಮಾನ್ಯವಾಗಿ "ಉತ್ತಮ" ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ಇದು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಒರಿಜಿನಲ್‌ ಚಾಯ್ಸ್‌ ವಿಸ್ಕಿ ಮಾಲೀಕರಿಂದ ಕರ್ನಾಟಕದಲ್ಲಿ 600 ಕೋಟಿ ವೆಚ್ಚದ ಹೊಸ ಪ್ಲ್ಯಾಂಟ್‌!

ಸಣ್ಣ ಪ್ರಮಾಣದಲ್ಲಿ ಬಿಯರ್‌ ಸೇವೆ ಆರೋಗ್ಯ ಪ್ರಯೋಜನ ನೀಡಿದರೂ, ಭಾರೀ ಪ್ರಮಾಣದಲ್ಲಿ ಸೇವನೆ ಆರೋಗ್ಯ ಸಮಸ್ಯೆಗಳನ್ನು ತರುವುದು ಈಗಾಗಲೇ ಗೊತ್ತು. ಹಲವಾರು ಅಧ್ಯಯನಗಳು ಮತ್ತು ಆರೋಗ್ಯ ಸಂಸ್ಥೆಗಳ ಆಧಾರದ ಮೇಲೆ, ಶಿಫಾರಸು ಮಾಡಲಾದ ಮಿತಿಗಳಿಗಿಂತ ಹೆಚ್ಚಿನ ಸೇವನೆಯು ಕೆಲವು ತೀವ್ರವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ. ಇದು ಇನ್ನೂ ಆಲ್ಕೋಹಾಲ್ ಆಗಿದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ವರದಿಯ ಪ್ರಕಾರ ಆಲ್ಕೊಹಾಲ್-ಸಂಬಂಧಿತ ಕ್ಯಾನ್ಸರ್ಗಳ ಗಮನಾರ್ಹ ಪ್ರಮಾಣವು ಲಘು ಮತ್ತು ಮಧ್ಯಮ ಸೇವನೆಯೊಂದಿಗೆ ಸಹ ಸಂಭವಿಸುತ್ತದೆ.ಅಲ್ಲದೆ, ಬಿಯರ್ ಮೂತ್ರವರ್ಧಕವಾಗಿದೆ, ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು, ತಲೆನೋವು, ಆಯಾಸ ಮತ್ತು ಒಣ ಬಾಯಿಯಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಬಿಯರ್ ನಿಮಗೆ ಆರಂಭದಲ್ಲಿ ನಿದ್ದೆ ಬರುವಂತೆ ಮಾಡಬಹುದಾದರೂ, ಇದು ನಿದ್ರೆಯ ಚಕ್ರಗಳನ್ನು ಅಡ್ಡಿಪಡಿಸುತ್ತದೆ, ಇದು ಕಳಪೆ ನಿದ್ರೆಯ ಗುಣಮಟ್ಟ ಮತ್ತು ಹಗಲಿನ ಅರೆನಿದ್ರಾವಸ್ಥೆಗೆ ಕಾರಣವಾಗುತ್ತದೆ. 

ವಿಸ್ಕಿ ವರ್ಲ್ಡ್‌ ಅವಾರ್ಡ್‌ನಲ್ಲಿ ಚಿನ್ನ ಗೆದ್ದ Indri Diwali Collector Edition 2024 ಭಾರತದಲ್ಲಿ ರಿಲೀಸ್‌, ಬೆಲೆ ಎಷ್ಟು?
 

Latest Videos
Follow Us:
Download App:
  • android
  • ios