ಮಾನವನ ಆರೋಗ್ಯಕ್ಕೆ ವರದಾನ ಈರುಳ್ಳಿ : ಪಟ್ ಅಂತ ಸಮಸ್ಯೆ ನಿವಾರಿಸುವ ಸಾಮರ್ಥ್ಯ

First Published 25, Mar 2018, 4:47 PM IST
Impressive Benefits Of Onions
Highlights

ಈರುಳ್ಳಿ ಹೆಚ್ಚು ಆರೋಗ್ಯಕಾರಿ ಗುಣಗಳನ್ನು ಹೊಂದಿರುವಂತಹ ಆಹಾರ ವಸ್ತುವಾಗಿದೆ. ಇದನ್ನು ಅನೇಕ ರೀತಿಯಾದ ಆರೋಗ್ಯ ಸಮಸ್ಯೆಗಳಿಗೆ ಔಷಧವಾಗಿ ಬಳಕೆ ಮಾಡಲಾಗುತ್ತದೆ.

ಈರುಳ್ಳಿ ಹೆಚ್ಚು ಆರೋಗ್ಯಕಾರಿ ಗುಣಗಳನ್ನು ಹೊಂದಿರುವಂತಹ ಆಹಾರ ವಸ್ತುವಾಗಿದೆ. ಇದನ್ನು ಅನೇಕ ರೀತಿಯಾದ ಆರೋಗ್ಯ ಸಮಸ್ಯೆಗಳಿಗೆ ಔಷಧವಾಗಿ ಬಳಕೆ ಮಾಡಲಾಗುತ್ತದೆ.

ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆ, ಡಯಾಬಿಟಿಸ್, ಅಸ್ತಮಾ, ಕೆಮ್ಮು ಸೇರಿದಂತೆ ವಿವಿಧ ರೀತಿಯಾದ ಸಮಸ್ಯೆಗಳಿಗೆ ಔಷಧವಾಗಿ ಬಳಕೆ ಮಾಡಲಾಗುತ್ತದೆ. ಇದೊಂದು ನಿಸರ್ಗದಿಂದ ದೊರೆತಂತಹ ಅತ್ಯಮೂಲ್ಯವಾದ ಗಿಫ್ಟ್ ಆಗಿದೆ.

ಇದನ್ನು ಸುಮಾರು 7 ಸಾವಿರ ವರ್ಷಗಳ ಹಿಂದಿನಿಂದಲೂ ಕೂಡ ಮನುಷ್ಯ ಆಹಾರವಾಗಿ ಬಳಕೆ ಮಾಡುತ್ತಿದ್ದಾನೆ. ಏಷ್ಯಾದ ಅನೇಕ ಭಾಗಗಳಲ್ಲಿ ಈರುಳ್ಳಿಯನ್ನು ಬೆಳೆಯಲಾಗುತ್ತದೆ.

ಈರುಳ್ಳಿಯ ಆರೋಗ್ಯದ ಲಾಭಗಳು

*ದೇಹದ ಶಕ್ತಿ ಸಾಮರ್ಥ್ಯವನ್ನು ವೃದ್ಧಿಸುವ ಸಾಮರ್ಥ್ಯ ಈರುಳ್ಳಿಯಲ್ಲಿರುತ್ತದೆ.

*ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ಅಡಕವಾಗಿರುತ್ತದೆ.

*ಹೃದಯ ಸಂಬಂಧೀ ಸಮಸ್ಯೆಗಳನ್ನು ನಿವಾರಣೆ ಮಾಡುವ ಸಾಮರ್ಥ್ಯ ಈರುಳ್ಳಿಯಲ್ಲಿರುತ್ತದೆ.

*ಡಯಾಬಿಟೀಸ್ ನಿಯಂತ್ರಣದಲ್ಲಿರಿಸುವ ಸಾಮರ್ಥ್ಯ ಈರುಳ್ಳಿಯಲ್ಲಿದೆ.

*ಜೇನುಹುಳು ಕಚ್ಚಿದಾಗ ಆಗುವ ನೋವನ್ನು ನಿವಾರಣೆ ಮಾಡಲು ಈರುಳ್ಳಿ ರಸವನ್ನು ಹಚ್ಚಬೇಕು.

*ಕ್ಯಾನ್ಸರ್ ತಡೆಯುತ್ತದೆ : ಈರುಳ್ಳಿಯಲ್ಲಿ ಕ್ಯಾನ್ಸರ್ ತಡೆಯುವಂತಹ ಸಾಮರ್ಥ್ಯವು ಅಡಕವಾಗಿದೆ.

*ಹುಳುಕಡ್ಡಿ ಸಮಸ್ಯೆಯನ್ನು ನಿವಾರಿಸಲು ಕೂಡ ಈರುಳ್ಳಿ ರಸವನ್ನು ಹಚ್ಚಬಹುದಾಗಿದೆ.

*ಆಕ್ನೇ ನಿವಾರಿಸುವಲ್ಲಿ ಆಲಿವ್ ಎಣ್ಣೆ, ಈರುಳ್ಳಿ ರಸ ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ ಹಚ್ಚಿದಲ್ಲಿ ಉತ್ತಮ ರಿಸಲ್ಟ್ ಪಡೆಯಬಹುದಾಗಿದೆ.

*ಕೆಮ್ಮು ನಿವಾರಿಸುವಲ್ಲಿ  ಈರುಳ್ಳಿ ರಸದೊಂದಿಗೆ ಜೇನು ಸೇರಿಸಿ ಹಚ್ಚಿದಲ್ಲಿ ಬೆಸ್ಟ್ ರಿಸಲ್ಟ್ ದೊರೆಯುತ್ತದೆ.

*ಲೈಂಗಿಕ ಸಮಸ್ಯೆಗಳಿಗೂ ಕೂಡ ಈರುಳ್ಳಿ ಬಳಕೆ ಪ್ರಯೋಜನಕಾರಿ

*ರಕ್ತ ಹೀನತೆ ಸಮಸ್ಯೆಯನ್ನೂ ನಿವಾರಣೆ ಮಾಡುತ್ತದೆ.

*ಹೊಟ್ಟೆ ನೋವಿನ ಸಮಸ್ಯೆಯಲ್ಲಿ ಈರುಳ್ಳಿ ಬಳಕೆ ಮಾಡಬಹುದು.

*ಮೂತ್ರ ಸಂಬಂಧಿ ಸಮಸ್ಯೆಗಳನ್ನು ನಿವಾರಣೆ ಮಾಡಲೂ ಕೂಡ ಈರುಳ್ಳಿಯನ್ನು ಬಳಕೆ ಮಾಡಬಹುದಾಗಿದೆ.

*ಅಸ್ತಮಾ ನಿವಾರಣೆ : ಇದರಲ್ಲಿರುವ ಸಲ್ಫರಿಕ್ ಆಸಿಡ್ ಅಸ್ತಮಾ ಸಮಸ್ಯೆಯಲ್ಲಿ ನಿವಾರಿಸಲು ಉತ್ತಮ ಮೆಡಿಸಿನ್ ಆಗಿ ಕಾರ್ಯ ನಿರ್ವಹಿಸುತ್ತದೆ.

*ಕೂದಲಿಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುವಲ್ಲಿಯೂ ಕೂಡ ಈರುಳ್ಳಿಯನ್ನು ಬಳಕೆ ಮಾಡಿ ಬೆಸ್ಟ್ ರಿಸಲ್ಟ್ ಪಡೆಯಬಹುದಾಗಿದೆ.

loader