ಬಿಕ್ಕಳಿಸಿ, ಬಿಕ್ಕಳಿಸಿ ಸುಸ್ತಾಗಿದ್ಯಾ? ಇದಕ್ಕಿನ್ನು ಫುಲ್ ಸ್ಟಾಪ್ ಇಡಿ

ಪ್ರತಿಯೊಬ್ಬರಿಗೆ ಒಂದಲ್ಲಾ ಒಂದು ಬಾರಿ ಬಿಕ್ಕಳಿಕೆ ಬರುತ್ತದೆ. ಇದು ಕಡಿಮೆಯಾಗುವವರೆಗೂ ಅಹಿತಕರ ಭಾವನೆಯನ್ನು ಎದುರಿಸಲೇಬೇಕಾಗುತ್ತದೆ. ದೇಹದ ವಪೆ ಎಂಬ ಪದರ ಕಲವೊಮ್ಮೆ ಆಕಸ್ಮಾತಾಗಿ ಸಂಕುಚಿತಗೊಂಡಾಗ, ಗಾಳಿ ಸ್ಫೋಟಿಸಿ ಹೊರಬೀಳುವಂತೆ ಆಗುತ್ತದೆ ಹಾಗು ಆ ಧ್ವನಿ ಮುಚ್ಚಿಕೊಳ್ಳುವುದೇ ಬಿಕ್ಕಳಿಕೆ.

Hows to stop hiccups

ಹಿಂದಿನ ಕಾಲದಲ್ಲಿ ಬಿಕ್ಕಳಿಸಿದಾಗ ಹುಟ್ಟಿದ ಆಸ್ಪತ್ರೆ ಅಥವಾ ನಮ್ಮನ್ನು ಯಾರೋ ನೆನಪಿಸಿಕೊಳ್ಳುತ್ತಾರೆಂದು ಸುಮ್ಮನಾಗುತ್ತಿದ್ದರು. ಕೆಲವೊಂದು ಬಾರಿ ಬಿಕ್ಕಳಿಕೆಯಿಂದ ಬಹಳ ಕಿರಿಕಿರಿ ಉಂಟು ಮಾಡುತ್ತದೆ. ಇದನ್ನು ಕಂಟ್ರೋಲ್ ಮಾಡಲು ಇಲ್ಲಿವೆ ಸಿಂಪಲ್ ಟಿಪ್ಸ್...

  • ಒಂದು ಚಮಚ ಸಕ್ಕರೆ ಅಥವ ಜೀನುತುಪ್ಪ ಸೇವಿಸಿ.
  • ಒಂದು ಕೈ ಬೆರಳಿನಿಂದ ಮತ್ತೊಂದು ಕೈನ ಅಂಗೈಯನ್ನು ಜೋರಾಗಿ ಒತ್ತಿ.
  • ನಾಲಿಗೆಯನ್ನು ಹೊರ ಹಾಕಿ ನಿಧಾನವಾಗಿ ಉಸಿರಾಡಿ.
  • ಸಣ್ಣ ಶುಂಠಿ ಚೂರನ್ನು ಜಗಿಯಿರಿ. 
  • ನೀರಿಗೆ ಏಲಕ್ಕಿಯನ್ನು ಸೇರಿಸಿ ಕುಡಿಯಿರಿ.
  • ಸುದೀರ್ಫ ಉಸಿರನ್ನು ಒಳಗೆಳೆದುಕೊಂಡು ನಿಧಾನಕ್ಕೆ ಬಿಡಿ.
  • ಹೆದರಿಸುವುದರಿಂದ, ಗಾಬರಿಗೊಂಡು ಬಿಕ್ಕಳಿಕೆ ನಿಲ್ಲುತ್ತದೆ.
  • ಏಕಾಗ್ರತೆಯನ್ನು ಬೇರೆಡೆಗೆ ಬದಲಾಯಿಸುವುದರಿಂದಲೂ ಬಿಕ್ಕಿಳಿಕೆಗೆ ಸ್ಟಾಪ್ ಬೀಳುತ್ತೆ.
Latest Videos
Follow Us:
Download App:
  • android
  • ios