Asianet Suvarna News Asianet Suvarna News

Smartphone And Personality: ಮೊಬೈಲ್‌ನ್ನು ಹೇಗೆ ಹಿಡಿದುಕೊಳ್ಳುತ್ತೀರಿ ಎಂಬುದು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ

ಇವತ್ತಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ (Smartphone) ಅನ್ನು ಬಳಸದವರಿಲ್ಲ. ಎಲ್ಲಿ ಹೋದ್ರೂ ಎಲ್ಲರೂ ಮೊಬೈಲ್‌ (Mobile)ನ್ನು ಸ್ಕ್ರಾಲ್ ಮಾಡುತ್ತಿರುತ್ತಾರೆ. ಆದರೆ ಸ್ಮಾರ್ಟ್‌ಫೋನ್‌ನ್ನು ಕೈಯಲ್ಲಿ ಹಿಡಿದು ಬಳಸುವ ರೀತಿ ಒಬ್ಬರಿಂದ ಮತ್ತೊಬ್ಬರಿಗೆ ವಿಭಿನ್ನವಾಗಿರುತ್ತದೆ. ಸ್ಮಾರ್ಟ್‌ಫೋನ್ ಅನ್ನು ನೀವು ಹೇಗೆ ಹಿಡಿದುಕೊಳ್ಳುವ ರೀತಿ ನಿಮ್ಮ ವ್ಯಕ್ತಿತ್ವ (Personality)ವನ್ನು ಹೇಳುತ್ತದೆ ಅನ್ನೋದು ನಿಮಗೆ ಗೊತ್ತಾ ?

How You Hold Your Smartphone Says Your Personality
Author
Bengaluru, First Published Jan 12, 2022, 11:00 AM IST

ಇದು ಸ್ಮಾರ್ಟ್‌ಫೋನ್ ಜಮಾನ. ಎಷ್ಟು ಶ್ರೀಮಂತರಾದ್ರೂ, ಬಡವರಾದ್ರೂ ಎಲ್ಲರ ಕೈಯಲ್ಲಿ ಸ್ಮಾರ್ಟ್‌ಪೋನ್ ಒಂದು ಇದ್ದೇ ಇರುತ್ತದೆ. ಸಭೆ, ಸಮಾರಂಭ, ಮದುವೆ ಹೀಗೆ ಎಲ್ಲಿಗೆ ಹೋದರೂ ಜನರು ಮೊಬೈಲ್‌ ಸ್ಕ್ರಾಲ್ ಮಾಡುವುದನ್ನು ನೋಡಬಹುದು. ಸೆಲ್ಫೀ, ಗೇಮ್, ಹಾಡು ಕೇಳುವುದು ಹೀಗೆ ನಾನಾ ನೆಪದಲ್ಲಿ ಜನರು ಮೊಬೈಲ್‌ನಲ್ಲಿ ಮುಳುಗಿರುತ್ತಾರೆ. ಸೋಷಿಯಲ್ ಮೀಡಿಯಾಗಳು ಬಂದ ನಂತರ ಜನರು ಅದರಲ್ಲೇ ಹೆಚ್ಚು ಸಮಯ ಕಳೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಎಲ್ಲಾ ಹೊತ್ತು ರೀಲ್ಸ್, ವೀಡಿಯೋ ನೋಡುತ್ತಾ ಕುಳಿತುಬಿಡುತ್ತಾರೆ. ಆದರೆ ಮೊಬೈಲ್ ಹಿಡಿದುಕೊಳ್ಳುವ ರೀತಿ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಸ್ಮಾರ್ಟ್‌ಫೋನ್ ಅನ್ನು ನಾವು ಹೇಗೆ ಹಿಡಿದುಕೊಳ್ಳುತ್ತೇವೆ, ಹೇಗೆ ಹಿಡಿದುಕೊಂಡು ಬಳಸುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ 

ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಇನ್ನೊಂದು ಕೈಯ ಹೆಬ್ಬೆರಳಿನಿಂದ  ಸ್ಕ್ರಾಲ್ ಮಾಡುವುದು
ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಇನ್ನೊಂದು ಕೈಯ ಹೆಬ್ಬೆರಳಿನಿಂದ ಮೊಬೈಲ್ ಸ್ಕ್ರೀನ್‌ ಸ್ಕ್ರಾಲ್ ಮಾಡುವುದು ಹಲವರ ಅಭ್ಯಾಸ. ನೀವು ನಿಮ್ಮ ಮೊಬೈಲ್‌ನ್ನು ಈ ರೀತಿ ಬಳಸುತ್ತಿದ್ದರೆ, ನೀವು ಸಮಂಜಸ ಮತ್ತು ಬುದ್ಧಿವಂತ ವ್ಯಕ್ತಿ ಎಂದರ್ಥ. ನೀವು ಮೊದಲು ಪರಿಸ್ಥಿತಿಯನ್ನು ವಿಶ್ಲೇಷಿಸಿ ಮತ್ತು ನಂತರ ಯಾವುದೇ ಹೆಜ್ಜೆಯನ್ನು ತೆಗೆದುಕೊಳ್ಳುತ್ತೀರಿ. ಇದು ನೀವು ಜೀವನದಲ್ಲಿ ಜಾಗರೂಕರಾಗಿ ಹೆಜ್ಜೆಯಿಡುವಂತೆ ಮಾಡುತ್ತದೆ. ಮತ್ತು ನೀವು ಈಗಾಗಲೇ ಎಲ್ಲಾ ಸಂದರ್ಭಗಳ ಬಗ್ಗೆ ಯೋಚಿಸಿರುವ ಕಾರಣ ಇತರರಿಗೆ ಮೋಸ ಮಾಡಲು ಕಷ್ಟವಾಗುತ್ತದೆ. ಆದರೆ, ಪ್ರೀತಿಯ ವಿಷಯಕ್ಕೆ ಬಂದಾಗ ನಿಮ್ಮ ಪ್ರಮುಖ ಕೊರತೆ ಬರುತ್ತದೆ. ಪ್ರೀತಿಯ ವಿಷಯಕ್ಕೆ ಬಂದಾಗ ನೀವು ಯೋಚಿಸದೆ, ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. 

Face Reading: ಮುಖ ನೋಡಿ ವ್ಯಕ್ತಿಯ ವ್ಯಕ್ತಿತ್ವ ಹೇಳಬಹುದು!

ಮೊಬೈಲ್‌ ಬಳಸುವಾಗ ಎರಡೂ ಕೈಗಳನ್ನು ಬಳಸುವುದು
ನಿಮ್ಮ ಮೊಬೈಲ್‌ (Mobile) ಫೋನ್ ಅನ್ನು ನೀವು ಈ ರೀತಿ ಬಳಸುತ್ತಿದ್ದರೆ, ನೀವು ಚುರುಕು ವ್ಯಕ್ತಿತ್ವ (Personality)ದವರು ಎಂದರ್ಥ. ತ್ವರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ಉತ್ತಮರು. ವೇಗವಾಗಿ ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳುವುದು ನಿಮಗೆ ಸಮಸ್ಯೆಯಲ್ಲ. ನೀವು ಹೊಸ ಪರಿಸ್ಥಿತಿಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ, ಪ್ರೀತಿಯ ವಿಷಯಗಳಲ್ಲಿ, ನಿಮ್ಮ ದಕ್ಷತೆಯು ಕಾರ್ಯರೂಪಕ್ಕೆ ಬರುವುದಿಲ್ಲ. ನಿಮ್ಮ ದೃಢವಾದ ವ್ಯಕ್ತಿತ್ವದಿಂದಾಗಿ ನೀವು ಕೆಲವೊಮ್ಮೆ ನಿಮ್ಮೊಂದಿಗೆ ಇರುವ ವ್ಯಕ್ತಿಗೆ ಹತ್ತಿರವಾಗುವುದನ್ನು ತಪ್ಪಿಸಿಕೊಳ್ಳುತ್ತೀರಿ.

ಒಂದು ಕೈಯಲ್ಲಿ ಫೋನ್ ಹಿಡಿದು ಹೆಬ್ಬೆರಳಿನಿಂದದ ಸ್ಕ್ರೋಲಿಂಗ್ ಮಾಡುವುದು
ನೀವು ಈ ವ್ಯಕ್ತಿಯಾಗಿದ್ದರೆ ನಿಮ್ಮ ಆತ್ಮವಿಶ್ವಾಸ (Confidence)ದ ಮಟ್ಟ ಅದ್ಭುತವಾಗಿದೆ. ಜೀವನದಲ್ಲಿ ಎಷ್ಟೇ ಸವಾಲುಗಳು ಬಂದರೂ ನೀವು ಅದನ್ನು ಸಮರ್ಥವಾಗಿ ಎದುರಿಸಬಲ್ಲಿರಿ. ನೀವು ಎಲ್ಲವನ್ನೂ ಬುದ್ಧಿವಂತಿಕೆಯಿಂದ ಮಾಡುತ್ತೀರಿ ಮತ್ತು ಇದು ಫಲಿತಾಂಶಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಆದರೆ ಪ್ರೀತಿಯ ವಿಷಯಕ್ಕೆ ಬಂದಾಗ, ವ್ಯಕ್ತಿಯನ್ನು ತಿಳಿದುಕೊಳ್ಳಲು ನಿಮ್ಮ ಸಮಯ (Time)ವನ್ನು ತೆಗೆದುಕೊಳ್ಳಲು ನೀವು ಇಷ್ಟಪಡುತ್ತೀರಿ. ಇದರಿಂದಾಗಿ ಕೆಲವೊಮ್ಮೆ ನಿಮ್ಮನ್ನು ರಿಸರ್ವ್‌ಡ್‌ ವ್ಯಕ್ತಿ ಎಂದು ಜನರು ಭಾವಿಸುತ್ತಾರೆ.

Eyes And Personality: ನಿಮ್ಮ ಕಣ್ಣು ನಿಮ್ ಬಗ್ಗೆ ಏನ್ ಹೇಳತ್ತೆ ನೋಡಿ..

ಒಂದು ಕೈಯ ತೋರು ಬೆರಳನ್ನು ಕೆಳಗೆ ಸ್ಕ್ರಾಲ್ ಮಾಡಲು ಮತ್ತು ಇನ್ನೊಂದು ತೋರುಬೆರಳನ್ನು ಮೊಬೈಲ್ ಹಿಡಿಯಲು ಬಳಸುವುದು
ಮೊಬೈಲ್‌ನ್ನು ನೀವು ಈ ರೀತಿ ಬಳಸುತ್ತಿದ್ದರೆ, ಜೀವನದಲ್ಲಿ ನೀವು ಆಗಾಗ ಕಾರ್ಯಗತಗೊಳಿಸುವ ಅನೇಕ ಉತ್ತಮ ಮತ್ತು ಸೃಜನಶೀಲ ವಿಚಾರಗಳನ್ನು ನೀವು ಹೊಂದಿದ್ದೀರಿ ಎಂದರ್ಥ. ನೀವು ಏಕಾಂತವನ್ನು ಇಷ್ಟಪಡುತ್ತೀರಿ. ಈ ಮೂಲಕ ಹೊಸ ಹೊಸ ಯೋಜನೆಗಳನ್ನು ಸಿದ್ಧಪಡಿಸಲು ಇಷ್ಟಪಡುತ್ತೀರಿ. ನಿಮ್ಮ ಪ್ರೀತಿ (Love)ಯ ಜೀವನದಲ್ಲಿ, ನೀವು ನಾಚಿಕೆಪಡುತ್ತೀರಿ ಮತ್ತು ಇದು ಹೊಸ ಸಂಪರ್ಕಗಳು ಮತ್ತು ಸಂಬಂಧಗಳು ರೂಪುಗೊಳ್ಳುವುದನ್ನು ತಡೆಯುತ್ತದೆ.

Follow Us:
Download App:
  • android
  • ios