Asianet Suvarna News Asianet Suvarna News

Eyes And Personality: ನಿಮ್ಮ ಕಣ್ಣು ನಿಮ್ ಬಗ್ಗೆ ಏನ್ ಹೇಳತ್ತೆ ನೋಡಿ..

ಮುಖ ಮನಸ್ಸಿನ ಕನ್ನಡಿ ಅನ್ನೋದು ನಿಜ. ಈ ವಿಚಾರದಲ್ಲಿ ಕಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಕೆಲವೊಂದು ಸಮಯದಲ್ಲಿ ಎದುರಿಗಿರುವವರು ಸುಳ್ಳು ಹೇಳುತ್ತಿದ್ದರೂ ಅವರ ಕಣ್ಣು ಸತ್ಯ ಹೇಳುತ್ತಿರುತ್ತದೆ.  ಈ ಎಲ್ಲ ವಿಷಯಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಇದನ್ನು ಹೊರತುಪಡಿಸಿ ಕಣ್ಣಿನ ಆಕಾರವೂ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ. 
 

Here is what your shape of eyes tell about your personality
Author
Bangalore, First Published Jan 8, 2022, 9:43 AM IST

ಒಬ್ಬ ವ್ಯಕ್ತಿಯ (person) ಕಣ್ಣುಗಳನ್ನು ನೋಡಿ ಬರೀ ಆತನ ಭಾವನೆಗಳನ್ನು (feelings) ಅರ್ಥ ಮಾಡಿಕೊಳ್ಳುವುದು ಮಾತ್ರವಲ್ಲ, ಅವನ ವ್ಯಕ್ತಿತ್ವದ (personality) ಬಗ್ಗೆ ಕಣ್ಣುಗಳ ಆಕಾರ ನೋಡಿ ಕಂಡು ಹಿಡಿಯಬಹುದು. ಕಣ್ಣು ಹೇಗಿದ್ದರೆ ಏನರ್ಥ ನೋಡೋಣ.

 ಬಾದಾಮಿ (almond) ಆಕಾರದ ಕಣ್ಣುಗಳು
 ಬಾದಾಮಿಯ ಆಕಾರದ ಕಣ್ಣುಗಳನ್ನು (eyes)  ಹೊಂದಿರುವ ಜನರು ಹೆಚ್ಚಾಗಿ ಬೆಚ್ಚಗಿನ (warm) ವ್ಯಕ್ತಿತ್ವ ಹೊಂದಿರುತ್ತಾರೆ.  ನಿಮಗೇನಾದರೂ ಈ ಬಾದಾಮಿಯ ಆಕಾರದ ಕಣ್ಣುಗಳು ಇವೆ ಎಂದಾದರೆ ನೀವು ಬೇರೆಯವರಿಂದ  ಹೆಚ್ಚು ಪ್ರೀತಿಸಲು ಪಡುತ್ತೀರಿ (loved),  ಜೊತೆಗೆ ಇತರರಿಗೆ ಸಹಾಯ ಮಾಡಲು ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಪಡುತ್ತೀರಿ. ನೀವು ಸ್ವಲ್ಪ ಮಟ್ಟಿಗೆ ನಿಗೂಢ (mysterious) ವ್ಯಕ್ತಿತ್ವ ಹೊಂದಿದವರು ಆಗಿರಬಹುದು.  ಈ ಕಾರಣದಿಂದಾಗಿ ನೀವು ಬೇರೆಯವರಿಗೆ  ಅರ್ಥವಾಗದೆ ಉಳಿದು ಬಿಡಬಹುದು.  ಆದಷ್ಟು ಯಾವುದೇ ವಿಚಾರದ ಬಗ್ಗೆ  ತುಂಬಾ ಯೋಚನೆ (think) ಮಾಡುವುದನ್ನು ಕಡಿಮೆ ಮಾಡಿ.  ಆಗಾಗ ಸ್ವಲ್ಪ ಸಮಯದ ಕಾಲ ವಿರಾಮ (brake) ತೆಗೆದುಕೊಳ್ಳಿ. 

 ಸಣ್ಣ (small) ಕಣ್ಣುಗಳು
 ಸಣ್ಣ ಕಣ್ಣುಗಳನ್ನು ಉಳ್ಳ ವ್ಯಕ್ತಿಗಳು ಹೆಚ್ಚಾಗಿ  ಅವರ ಜೀವನದ ಮೇಲೆ ಗುರಿಯ ಬಗ್ಗೆ ಹೆಚ್ಚು ಕೇಂದ್ರೀಕೃತವಾಗಿ (focused) ಇರುತ್ತಾರೆ.  ನೀವೇನಾದರೂ ಸಣ್ಣ ಕಣ್ಣುಗಳನ್ನು ಹೊಂದಿದ್ದರೆ ನಿಮ್ಮ ಜೀವನದಲ್ಲಿ ವಿಮರ್ಶಾತ್ಮಕ (critical) ಹಾಗೂ ವಿಶ್ಲೇಷಣಾತ್ಮಕ (analytical) ಮತ್ತು ಗಂಭೀರ ದೃಷ್ಟಿಕೋನವನ್ನು ಹೊಂದಿದ್ದೀರಿ ಎಂದು ಹೇಳಬಹುದು.  ನಿಮ್ಮ ಗುಂಪಿನಲ್ಲಿ ನೀವೇ ಹೆಚ್ಚಿನ ಬುದ್ಧಿವಂತ (smart) ವ್ಯಕ್ತಿಯಾಗಿರಬಹುದು ಕೆಲವೊಮ್ಮೆ ಸಂಕೀರ್ಣ (complex) ಸಮಸ್ಯೆಗಳನ್ನು ಪರಿಹರಿಸಲು ಜನರು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ.  ಇನ್ನು ಕೆಲವರು ನಿಮ್ಮಲ್ಲಿ ಭಾವನೆಗಳಿಗೆ ಅವಕಾಶವಿಲ್ಲ ಎಂದು ಭಾವಿಸಿರಬಹುದು,  ಆದರೆ  ಅದು ಸತ್ಯವಲ್ಲ. 

 ಉಬ್ಬಿದ ಕಣ್ಣುಗಳು (Bulging eyes)
 ಇಂತಹ ಕಣ್ಣು ಹೊಂದಿರುವ ವ್ಯಕ್ತಿಗಳು ಹೆಚ್ಚು  ದಯೆಯನ್ನು (kind) ಹೊಂದಿರುತ್ತಾರೆ. ಜೊತೆಗೆ ಇವರು ಬಹಳ ಸಿಹಿಯಾದ ವ್ಯಕ್ತಿಯಾಗಿರುತ್ತಾರೆ.  ನಿಮ್ಮ ಸುತ್ತಮುತ್ತಲು  ಸ್ನೇಹಿತರು ಮತ್ತು ಕುಟುಂಬದ  ಸಣ್ಣ ಗುಂಪನ್ನು ನೀವು ಹೊಂದಿರುತ್ತೀರಿ. ಈ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಹಾಗೂ ನೀವು ಅವರನ್ನು ಎಂದಿಗೂ ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ. 

 ಆಳವಾದ ಕಣ್ಣುಗಳು (Deep-set eyes)

ನೀವು ನಿಮ್ಮ ಕಣ್ಣಿನ ಸಾಕೆಟ್ ಗಳಲ್ಲಿ ಸ್ವಲ್ಪ ಹೆಚ್ಚು ಆಳವಾಗಿ ಕಣ್ಣುಗಳನ್ನು ಹೊಂದಿದ್ದೀರಾ? ಹಾಗಾದರೆ ನೀವು ಏಕಾಂಗಿಯಾಗಿ ಮೋಜು ಮಾಡಲು ಇಷ್ಟ ಪಡುವಂತಹ ವ್ಯಕ್ತಿಯಾಗಿರುತ್ತೀರಿ.  ಹೊರಗಿನ ಪ್ರಪಂಚಕ್ಕೆ ನೀವು ಸ್ವಲ್ಪ ನಿಗೂಢ ವ್ಯಕ್ತಿ ಎಂದು ಅನಿಸಬಹುದು. ಆದರೂ ಕೂಡ ಇದರಲ್ಲಿ ನಕಾರಾತ್ಮಕವಾಗಿ ಚಿಂತಿಸುವ ಅಗತ್ಯವಿಲ್ಲ.  ನೀವು ರೋಮ್ಯಾಂಟಿಕ್ ವ್ಯಕ್ತಿಯಾಗಿರುತ್ತೀರಿ ಹಾಗೂ ಯಾರೊಂದಿಗಾದರೂ ಹೆಚ್ಚು ಹೊಂದಿಕೊಂಡಿರಿ ಎಂದಾದರೆ ನಿಮ್ಮ ಬಗೆಗಿನ ಸಂಪೂರ್ಣ ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತೀರಿ. 

 ದುಂಡಗಿನ ಕಣ್ಣುಗಳು (Round eyes)
 ನೀವು ದುಂಡಗಿನ ಕಣ್ಣುಗಳನ್ನು ಹೊಂದಿದ್ದೀರಿ ಎಂದಾದರೆ ಹೆಚ್ಚು ಸೃಜನಶೀಲತೆಯಿಂದ (creative) ತುಂಬಿರುವ ವ್ಯಕ್ತಿಯಾಗಿರುತ್ತೀರಿ. ಮುಕ್ತವಾಗಿ ಭಾವನೆಗಳನ್ನು ಹಂಚಿಕೊಳ್ಳುವವರು. ಭಾವನಾತ್ಮಕ ಮತ್ತು ಉತ್ಸಾಹಭರಿತ ವ್ಯಕ್ತಿ ಎಂದು ಹೇಳಬಹುದು.  ನೀವು ಆಕರ್ಷಣೀಯ ವ್ಯಕ್ತಿಯಾಗಿರುವ ಕಾರಣ ಎಷ್ಟು ದೊಡ್ಡ ಗುಂಪಿನಲ್ಲಿದ್ದರೂ ಕೂಡ  ಬೇಗ ಇತರರ ಗಮನ  ನಿಮ್ಮತ್ತ ಸೆಳೆದುಕೊಳ್ಳುತ್ತೀರಿ. 

 ನೀವು ಈ ಮೇಲಿನ ಯಾವ ರೀತಿಯ ಕಣ್ಣುಗಳನ್ನು ಹೊಂದಿದ್ದೀರಿ ಎಂದು ಪರೀಕ್ಷಿಸಿಕೊಳ್ಳಿ. ಆಗ ನಿಮ್ಮ ವ್ಯಕ್ತಿತ್ವದ ಬಗ್ಗೆ ನಿಮ್ಮ ಕಣ್ಣುಗಳು ಹೇಳುವ ವಿಚಾರಗಳು ಎಷ್ಟರ ಮಟ್ಟಿಗೆ ಸತ್ಯ ಎಂಬುದು ನಿಮಗೆ ಅರ್ಥವಾಗುತ್ತದೆ.

Follow Us:
Download App:
  • android
  • ios