Asianet Suvarna News Asianet Suvarna News

ಮಳೆಗಾಲದಲ್ಲಿ ಮಕ್ಕಳ ಮೇಲೆ ನಿಗಾ ಹೀಗಿರಲಿ!

ಹೊರಗೆ ಜೋರಾಗಿ ಸುರಿವ ಮಳೆ, ಮನೆಯೊಳಗೆ ವಿನಾಕಾರಣ ಅಳುವ ಕೂಸು. ಮಗುವಿಗೆ ತನಗೇನಾಗ್ತಿದೆ ಅಂತ ಹೇಳಲು ಬರಲ್ಲ. ಅನಾರೋಗ್ಯದ ಕಿರಿಕಿರಿ ಸಹಿಸಲೂ ಅದಕ್ಕೆ ಕಷ್ಟ. ಇಂಥ ಸಂದರ್ಭ ಬರದ ಹಾಗೆ ಮಗುವನ್ನು ನೋಡಿಕೊಳ್ಳೋದು ಹೇಗೆ, ಮಳೆಗಾಲದಲ್ಲಿ ಮಕ್ಕಳ ಆರೈಕೆ ಹೇಗಿರಬೇಕು ಅನ್ನುವ ಬಗ್ಗೆ ತಜ್ಞವೈದ್ಯರು ಇಲ್ಲಿ ಮಾಹಿತಿ ನೀಡಿದ್ದಾರೆ.

How to take care of your kids during monsoon
Author
Bangalore, First Published Aug 19, 2019, 3:23 PM IST

ಡಾ. ಕಿಶೋರ್‌ ಕುಮಾರ್‌

ಶಿಶುತಜ್ಞರು, ಕ್ಲೌಡ್‌ನೈನ್‌ ಗ್ರೂಪ್‌

1. ವಿಟಮಿನ್‌ ಸಿ ಅಧಿಕವಾಗಿರುವ ಆಹಾರವನ್ನು ಮಗುವಿಗೆ ಹೆಚ್ಚು ಕೊಡಿ. ಸೀಬೆಹಣ್ಣು, ಪಪ್ಪಾಯಿ, ಆರೆಂಜ್‌ ರಸ, ಕಿವಿ, ಬ್ರಕೋಲಿ, ಪಿಂಕ್‌ ಬಣ್ಣ ದ್ರಾಕ್ಷಿ ಇತ್ಯಾದಿಗಳಲ್ಲಿ ವಿಟಮಿನ್‌ ಸಿ ಪ್ರಮಾಣ ಅಧಿಕವಿದೆ. ಕಾಳು, ಒಣಹಣ್ಣುಗಳು ರೋಗ ಸಾಧ್ಯತೆ ಹೆಚ್ಚಿರುವ ಈ ಸೀಸನ್‌ನಲ್ಲಿ ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲವು.

2. ಆರಿಹೋಗಿರುವ ಆಹಾರ, ತಂಗಳು ಇತ್ಯಾದಿಗಳನ್ನು ಖಂಡಿತಾ ಮಗುವಿಗೆ ನೀಡಬೇಡಿ. ಹದ ಬಿಸಿಯ ತಾಜಾ ಆಹಾರ ನೀಡಿ. ಹೊರಗಿನ ಫುಡ್‌ಗೆ ಮಗು ಬೇಡಿಕೆ ಇಡಬಹುದು. ಆದರೆ ಕೊಡಿಸೋದು ಖಂಡಿತಾ ಬೇಡ. ಡೆಂಗ್ಯೂ, ವೈರಲ್‌ ಫಿವರ್‌ ಹಾವಳಿ ಹೆಚ್ಚುತ್ತಲೇ ಇದೆ. ಸ್ವಚ್ಛವಿಲ್ಲದ ಹೊರಗಿನ ಆಹಾರ ಮಗುವಿಗೆ ಹಾನಿಕರ.

ಸೊಳ್ಳೆಗಳು ಕೆಲವರಿಗೆ ಮಾತ್ರ ಹೆಚ್ಚು ಕಚ್ಚುವುದೇಕೆ?

3. ಕುದಿಸಿ ಆರಿಸಿದ ನೀರನ್ನೇ ಕೊಡಿ. ಹಾಲಿಗೆ ನೀರು ಸೇರಿಸುವಾಗಲೂ ಕುದಿಸಿ ಆರಿಸಿದ ನೀರನ್ನೇ ಸೇರಿಸಿ.

4. ಮಗುವಿಗೆ ಎದೆಹಾಲು ನೀಡುತ್ತಿದ್ದರೆ, ಎದೆಹಾಲಿನ ಪ್ರಮಾಣ ಮಗುವಿಗೆ ಬೇಕಾಗುವಷ್ಟುಇದ್ದರೆ ಹೊರಗಿನ ಆಹಾರ ನೀಡೋದು ಬೇಡ. ತಾಪಮಾನ ಹೆಚ್ಚಿರಲಿ, ಮಗುವಿಗೆ ನೀರಿನ ಅವಶ್ಯಕತೆ ಇದೆ ಅಂತ ನಿಮಗನಿಸಿದರೂ ಯಾವುದೇ ಆಹಾರ ನೀಡೋದು ಬೇಡ. ಮಗು ಕೇಳಿದಾಗಲೆಲ್ಲ ಎದೆ ಹಾಲನ್ನೇ ನೀಡಿದರೆ ಸಾಕು.

How to take care of your kids during monsoon

5. ಮಗು ಓಡಾಡುವ ಜಾಗ ಸ್ವಚ್ಛವಾಗಿರಲಿ, ಒಣಗಿರಲಿ.

6. ಮನೆಯ ಪರಿಸರ ಶುದ್ಧವಾಗಿರಲಿ. ಮನೆಯೊಳಗೆ, ಗಾರ್ಡನ್‌ನಲ್ಲಿ ಪಾಟ್‌ಗಳಿದ್ದರೆ ನೀರು ನಿಲ್ಲದ ಹಾಗೆ ನೋಡಿಕೊಳ್ಳಿ. ಮನೆಯ ಸುತ್ತಮುತ್ತ ಸ್ವಚ್ಛವಾಗಿರಲಿ, ನೀರು ನಿಂತರೆ ಸೊಳ್ಳೆ ಹುಟ್ಟಿಕೊಳ್ಳುತ್ತೆ. ಆ ಬಗ್ಗೆ ಹುಷಾರಾಗಿರಿ.

ಡೆಂಘೀ ಜ್ವರ; ಭಯ ಬೇಕಾಗಿಲ್ಲ, ನಿರ್ಲಕ್ಷ್ಯ ಬೇಡ!

7. ಮಗು ಮಳೆ ನೀರಲ್ಲಿ ಆಟವಾಡಿ ಬಂದ ಕೂಡಲೇ ತಲೆ, ಮೈ ಚೆನ್ನಾಗಿ ಒರೆಸಿ.

8. ತಾಯಿಗೆ ನೆಗಡಿ, ಜ್ವರ ಇದ್ದರೂ ಎದೆಹಾಲು ನೀಡುವುದು ನಿಲ್ಲಿಸಬೇಡಿ. ಜ್ವರ, ನೆಗಡಿ ಎದೆಹಾಲಿನ ಮೂಲಕ ತಾಯಿಯಿಂದ ಮಗುವಿಗೆ ಬರುತ್ತೆ ಅನ್ನುವುದು ತಪ್ಪು ಕಲ್ಪನೆ. ಅದು ವಾತಾವರಣದ ಮೂಲಕ ಹರಡುತ್ತದೆ.

9. ಮಗುವಿಗೆ ಹಠಾತ್ತನೆ ನೆಗಡಿ, ಜ್ವರ ಬಂದರೆ ನೀಡುವಂಥ ಮೆಡಿಸಿನ್‌ಗಳನ್ನು ಮೊದಲೇ ತಂದಿಟ್ಟುಕೊಳ್ಳಿ.

10. ಗಾಢ ಬಣ್ಣದ ಉಡುಗೆಗಳು ಆದಷ್ಟುಬೇಡ. ತಿಳಿ ಬಣ್ಣದ ಹತ್ತಿ ಉಡುಪನ್ನು ಮಗುವಿಗೆ ಹಾಕಿ. ಗಾಢಬಣ್ಣದತ್ತ ಸೊಳ್ಳೆಗಳು ಆಕರ್ಷಿತವಾಗುವುದು ಹೆಚ್ಚು.

Follow Us:
Download App:
  • android
  • ios