ಮದ್ವೆ ಆಗದೆ ಸಿಂಗಲ್ ಆಗಿರೋದು ಬೆಸ್ಟಾ?

How to stay happy without getting married?
Highlights

ವಯಸ್ಸು 23ರ ಗಡಿ ದಾಟಿದರೆ ಸಾಕು ಸುತ್ತಮುತ್ತಲಿನ ಜನ ಯಾವಾಗ ನಿಮಗೆ ಮದುವೆ ಎಂಬುದರ ಬಗ್ಗೆ ಖಾತುರರಾಗಿರುತ್ತಾರೆ. ವಯಸ್ಸು 25 ಆಯಿತು ಇನ್ನು ಮದುವೆ ಆಗಿಲ್ವಾ? ಬೇಗ ಮದುವೆ ಮಾಡ್ಲೇಬೇಕು ಎಂಬೆಲ್ಲ ಪ್ರಶ್ನೆ. ಆದರೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಮದುವೆಯನ್ನೇ ಜೀವನದ ಮುಖ್ಯವಾದ ಗುರಿ ಎಂದು ಯಾಕೆ ಮಾಡಿದ್ದಾರೆ ಎಂದು ಅರ್ಥವಾಗೋದಿಲ್ಲ. ಜೀವನ ಎಂದರೆ ಮದುವೆ  ಮಾತ್ರ ಅಲ್ಲ, ಸಾದಿಸುವುದೂ ಇನ್ನೂ ಇದೆ ಗೊತ್ತಾ?

ಮದುವೆಯಾಗಬೇಕಾ? ಬೇಡ್ವಾ? ಆಗೋದಾದ್ರೋ ಯಾವಾಗ ಆಗಬೇಕು? ಆಧುನಿಕ ಯುವಜನರನ್ನು ಕಾಡೋ ಮಿಲಿಯನ್ ಡಾಲರ್ ಪ್ರಶ್ನೆ ಇದು. ಆದರೆ, ಒಂಟಿ ಒಂಟಿಯಾಗಿರುವುದರಲ್ಲಿಯೂ ಇದೆ ಮಜಾ. ಏಕೆ?

ಒಂಟಿ ಒಂಟಿಯಾಗಿರುವುದೂ ಬೆಸ್ಟ್ ಐಡಿಯಾ, ಏಕೆ ಇಲ್ಲಿ ಓದಿ...

  • ಕೆಲವರಿಗೆ ಸ್ವತಂತ್ರವಾಗಿರೋದು ಇಷ್ಟ. ಆದರೆ ಮದುವೆಯಾದರೆ ಕೆಲವೊಮ್ಮೆ ಕಟ್ಟು ಪಾಡುಗಳಿಗೆ ಸಿಕ್ಕಿ ತಮ್ಮ ಕನಸಿನ ರೆಕ್ಕೆಯನ್ನು ಕತ್ತರಿಸಿ ಇಡಬೇಕಾಗುತ್ತದೆ. ಅದಕ್ಕಿಂತ ಮದುವೆಯಾಗದೆ ನಿಮ್ಮಷ್ಟಕ್ಕೆ ನಿಮ್ಮ ಕನಸುಗಳ ಬೆನ್ನೇರಿ ಹೋಗೋದು ಉತ್ತಮ. 
  • ಮದುವೆಯಲ್ಲಿ ವಿರಸವೂ ಹೆಚ್ಚಾಗಿ ಇರುತ್ತವೆ. ಕೆಲವೊಮ್ಮೆ ಅದು ಡಿವೋರ್ಸ್‌ವರೆಗೂ ತಲುಪುತ್ತದೆ. ಅವಾಗ ಸಮಾಜದಲ್ಲಿ ಯಾರು ನಿಮ್ಮ ಬಳಿ ಯಾಕೆ ಹೀಗಾಯ್ತು ಎಂದು ಕೇಳಲು ಬರೋದಿಲ್ಲ. ಮದುವೆಯಾದ ವ್ಯಕ್ತಿ ಜೀವನ ಪೂರ್ತಿ ನಿಮ್ಮ ಜೊತೆ ಇರುತ್ತಾನೆ ಎಂಬ ನಂಬಿಕೆ ನಿಮಗೆ ಇರದಿದ್ರೆ, ಮದುವೆ ಆಗೋದಾದರೂ ಯಾಕೆ. 
  • ನೀವು  ಲವ್ ಮಾಡುತ್ತಿದ್ದರೆ ಆ ವ್ಯಕ್ತಿಯನ್ನು ಕೂಡಲೇ ಮದುವೆಯಾಗಿ, ಸೆಟಲ್ ಆದರೆ ಚೆನ್ನಾಗಿರುತ್ತೇವೆಂದು ಕೊಂಡರೆ ತಪ್ಪು. ಯಾಕೆಂದರೆ ಲವ್ ಮಾಡಿ ಮದುವೆಯಾದ ಎಷ್ಟೋ ಜನರ ಜೀವನ ಹಾಳಾಗಿ ಹೋಗಿದೆ. 
  • ಯಾರೇನೆಂದು ಗೊತ್ತೇ ಇಲ್ಲದ ವ್ಯಕ್ತಿ ಜೊತೆ ಜೀವನ ಪೂರ್ತಿ ಕೊರಗುತ್ತ ಇರೋದಕ್ಕಿಂತ ನಿಮ್ಮನ್ನು ನೀವು ಪ್ರೀತಿಸಿ ಜೀವನವನ್ನು ಸಂತೋಷವಾಗಿ ಕಳೆಯೋದು ಬೆಸ್ಟ್. 
  • ನಿಮ್ಮ ಬೆಸ್ಟ್ ಫ್ರೆಂಡ್ಸ್ ಮದುವೆಯಾದ ಮೇಲೆ ಉಂಟಾದ ಸಮಸ್ಯೆ, ಕಿರುಕುಳ ಅಥವಾ ಯಾಂತ್ರಿಕ ಜೀವನ, ಡಿವೋರ್ಸ್ ಬಗ್ಗೆ ಹೇಳಿದಾಗ ಅದಕ್ಕಿಂತ ಏಕಾಂಗಿಯಾಗಿ ಜೀವನ ಎಂಜಾಯ್ ಮಾಡುವುದು ಉತ್ತಮ ಎಂದು ನಿಮಗೆ ಖಂಡಿತವಾಗಿಯೂ ಅನಿಸದೇ ಇರದು. 
  • ಮದುವೆಯಾಗಲೆಂದೇ ನಾವು ಹುಟ್ಟಿಲ್ಲ. ಅದು ನಮ್ಮ ಸಮಾಜ ಮದುವೆಯಾಗಲೇಬೇಕು ಅದೇ ನಮ್ಮ ಜೀವನದ ಕೊನೆಯ ಘಟ್ಟ ಎಂಬುದನ್ನು ಬಿಂಬಿಸಿದೆ. ಮದುವೆ ಎಂಬುದು ಯುನಿವರ್ಸಿಟಿಯಂತೆ. ನಿಮಗಿಷ್ಟ ಇದ್ದರೆ ಸೇರಬಹುದು. ಮದುವೆ ಆಗದೆ ಇದ್ದರೂ ನೀವು ನೆಮ್ಮದಿಯಾಗಿ, ಸ್ವಾತಂತ್ರವಾಗಿ ಬದುಕಲು ಸಾಧ್ಯ. 
loader