Asianet Suvarna News Asianet Suvarna News

ಮಕ್ಕಳಿಲ್ಲದಿರಬಹುದು. ಹಾಗಂಥ ದತ್ತು ಪಡಯೋದು ಅಷ್ಟೆಲ್ಲಾ ಸುಲಭವಲ್ಲ!

ಮಕ್ಕಳಿಲ್ಲವೆಂದ್ರೆ ಕುಟುಂಬ ಪರಿಪೂರ್ಣವಲ್ಲವೆಂದು ಭಾರತೀಯರು ನಂಬುತ್ತಾರೆ. ಕುಟುಂಬ ಮುಂದುವರೆಸುವ ಉದ್ದೇಶದಿಂದ ಮಕ್ಕಳನ್ನು ಪಡೆಯಲು ಮುಂದಾಗ್ತಾರೆ. ಮಕ್ಕಳನ್ನು ದತ್ತು ಪಡೆದು ಅವರಿಗೆ ಆಸರೆಯಾಗುವ ಕುಟುಂಬಗಳು ಸಾಕಷ್ಟಿದೆ. ಆದ್ರೆ ಭಾರತದ ಕಾನೂನು ಕಠಿಣವಾಗಿದೆ. 
 

How To Adopt A Child In India
Author
First Published Dec 13, 2022, 2:09 PM IST

ಮನೆಯಲ್ಲೊಂದು ಮಗುವಿದ್ರೆ ಅದ್ರ ಖುಷಿಯೇ ಬೇರೆ. ಮಕ್ಕಳು ಮನೆಯ ಸಂತೋಷವನ್ನು ದುಪ್ಪಟ್ಟು ಮಾಡ್ತಾರೆ. ಪ್ರತಿಯೊಬ್ಬ ದಂಪತಿ ಮಗುವನ್ನು ಪಡೆಯುವ ಬಯಕೆ ಹೊಂದಿರುತ್ತಾರೆ. ಆದ್ರೆ ಎಲ್ಲರಿಗೂ ಸಂತಾನ ಭಾಗ್ಯ ಇರೋದಿಲ್ಲ. ಕೆಲ ಕಾರಣಗಳಿಂದಾಗಿ ಮಕ್ಕಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಂಥ ದಂಪತಿ ಮಕ್ಕಳನ್ನು ದತ್ತು ಪಡೆಯುವ ನಿರ್ಧಾರಕ್ಕೆ ಬರುತ್ತಾರೆ. ದಂಪತಿ ಮಾತ್ರವಲ್ಲ ಕೆಲ ಸಿಂಗಲ್ ಮಹಿಳೆ ಅಥವಾ ಪುರುಷ ಕೂಡ ಮಕ್ಕಳನ್ನು ದತ್ತು ಪಡೆಯುತ್ತಾರೆ. ಮಕ್ಕಳನ್ನು ದತ್ತು ಪಡೆಯುವ ಆಲೋಚನೆಯಲ್ಲಿ ನೀವಿದ್ದರೆ ಭಾರತದಲ್ಲಿ ಮಕ್ಕಳನ್ನು ದತ್ತು ಪಡೆಯಲು ಯಾವೆಲ್ಲ ನಿಯಮವಿದೆ ಎಂಬುದನ್ನು ನಾವು ಹೇಳ್ತೆವೆ, ತಿಳಿದುಕೊಳ್ಳಿ.

ಭಾರತ (India) ದಲ್ಲಿ ಮಗುವನ್ನು ದತ್ತು (Adoption) ಪಡೆಯುವುದು ಹೇಳಿದಷ್ಟು ಸುಲಭವಲ್ಲ. ದತ್ತು ಪಡೆಯುವ ವಿಧಾನ ಸ್ವಲ್ಪ ಕಷ್ಟದಿಂದ ಕೂಡಿದೆ.  ದತ್ತು ತೆಗೆದುಕೊಳ್ಳು ಪ್ರಕ್ರಿಯೆಯು ಪೂರ್ಣಗೊಳ್ಳಲು ಸುಮರು 2 ರಿಂದ 3 ವರ್ಷಗಳು ಬೇಕಾಗುತ್ತದೆ. ಇದೇ ಕಾರಣಕ್ಕೆ ಅನೇಕರು ದತ್ತು ಪಡೆಯುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಭಾರತದಲ್ಲಿ ಸುಮಾರು 3 ಕೋಟಿ 10 ಲಕ್ಷ ಅನಾಥ ಮಕ್ಕಳಿದ್ದಾರೆ. ದತ್ತು ತೆಗೆದುಕೊಳ್ಳುವ ವಿಧಾನ ಭಾರತದಲ್ಲಿ ಸುಲಭವಾಗಿದ್ದರೆ ಅನೇಕರು ಬಹುಬೇಗ ಮಕ್ಕಳನ್ನು ದತ್ತು ಪಡೆಯಬಹುದಿತ್ತು. ಇದ್ರಿಂದ ಅನಾಥ ಮಕ್ಕಳಿಗೆ ಕುಟುಂಬ (Family) ಸಿಗ್ತಿತ್ತು. ಮಕ್ಕಳಾಗದವರಿಗೆ ಮಕ್ಕಳು ಸಿಗ್ತಿದ್ದರು. ಕಾನೂನು ಕಠಿಣವಾಗಿರುವ ಕಾರಣ ಐದು ವರ್ಷದಲ್ಲಿ ಕೇವಲ 16,353 ಮಕ್ಕಳನ್ನು ಮಾತ್ರ ದತ್ತು ಪಡೆಯಲು ಸಾಧ್ಯವಾಗ್ತಿದೆ. ಭಾರತದಲ್ಲಿರುವ ಪ್ರತಿಯೊಬ್ಬರೂ, ಭಾರತೀಯ ನಾಗರಿಕರು, ಎನ್‌ಆರ್‌ಐಗಳು ಮತ್ತು ವಿದೇಶಿ ಪ್ರಜೆಗಳು ಮಗುವನ್ನು ದತ್ತು ಪಡೆಯಬಹುದು. ಆದರೆ ಅದಕ್ಕಾಗಿ ಅವರು ಮೊದಲು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ ಮಾಡಿದ ನಿಯಮಗಳನ್ನು  ಪಾಲನೆ ಮಾಡಬೇಕು. ವಿವಿಧ ರೀತಿಯ ನಾಗರಿಕರಿಗೆ ವಿವಿಧ ನಿಯಮಗಳಿವೆ. 

ವರದಕ್ಷಿಣೆ ಬಗ್ಗೆ ಭಾರತದ ಕಾನೂನು ಹೇಳೋದೇನು? ಹೆಣ್ಣು ಮಕ್ಕಳಿಗೆ ಗೊತ್ತಿರಬೇಕಿವು!

ದತ್ತು ಪಡೆಯಲಿರುವ ನಿಯಮಗಳು : ವಿವಾಹಿತ ದಂಪತಿ ಮದುವೆಯಾದ 2 ವರ್ಷಗಳ ನಂತರ ಮಗುವನ್ನು ದತ್ತು ಪಡೆಯಬಹುದು. 
ದತ್ತು ಪಡೆದ ಮಗುವಿನ ಪೋಷಕರಿಗೆ ಯಾವುದೇ ಮಾರಣಾಂತಿಕ ಕಾಯಿಲೆ ಇರಬಾರದು.
ಒಂಟಿ ಮಹಿಳೆ ಹುಡುಗ ಅಥವಾ ಹುಡುಗಿಯನ್ನು ದತ್ತು ಪಡೆಯಬಹುದು. ಆದ್ರೆ ಒಂಟಿ ಪುರುಷ  ಗಂಡು ಮಕ್ಕಳನ್ನು ಮಾತ್ರ ದತ್ತು ಪಡೆಯಬಹುದು.
ದಂಪತಿ, ಹುಡುಗ ಅಥವಾ ಹುಡುಗಿ ಇವರಲ್ಲಿ ಯಾರನ್ನಾದ್ರೂ ದತ್ತು ಪಡೆಯಬಹುದು.
ಮಗುವನ್ನು ದತ್ತು ತೆಗೆದುಕೊಳ್ಳುವ ಸಮಯದಲ್ಲಿ ಪೋಷಕರ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು.
ತಂದೆ- ತಾಯಿ ಹಾಗೂ ಮಕ್ಕಳ ವಯಸ್ಸು ಕನಿಷ್ಟ 25 ವರ್ಷಗಳಷ್ಟು ಅಂತರವಿರಬೇಕು. 
ಮಕ್ಕಳನ್ನು ದತ್ತು ಪಡೆಯಲು ಪತಿ - ಪತ್ನಿ ಇಬ್ಬರ ಒಪ್ಪಿಗೆ ಮುಖ್ಯವಾಗುತ್ತದೆ. 

ದತ್ತು ಪಡೆಯಲು ಬೇಕು ದಾಖಲೆ : ದತ್ತು ಪಡೆದ ಕುಟುಂಬದ ಫೋಟೋ, ಕುಟುಂಬದಲ್ಲಿನ ಸದಸ್ಯರ ಸಂಖ್ಯೆಯ ಬಗ್ಗೆ ಮಾಹಿತಿ, ನಿಮ್ಮ ಮತ್ತು ನಿಮ್ಮ ಪತ್ನಿಯ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್. ಜನನ ಪ್ರಮಾಣಪತ್ರದಂತಹ ಜನ್ಮ ದಿನಾಂಕದ ಪುರಾವೆ, ಗಂಡ ಹೆಂಡತಿಯ ವೈದ್ಯಕೀಯ ಪ್ರಮಾಣಪತ್ರ, ವಿಚ್ಛೇದನ ಪಡೆದಿದ್ದರೆ ಅದರ  ಪತ್ರ, ಬ್ಯಾಂಕ್ ವಿವರಗಳನ್ನು ನೀಡಬೇಕಾಗುತ್ತದೆ. ಅಲ್ಲದೆ ದತ್ತು ಪಡೆಯುವ ವೇಳೆ ಇಬ್ಬರು ವ್ಯಕ್ತಿಗಳ ಸಾಕ್ಷ್ಯ ಬೇಕಾಗುತ್ತದೆ. ಈಗಾಗಲೇ ಮಕ್ಕಳನ್ನು ಹೊಂದಿರುವ ದಂಪತಿ ದತ್ತು ಪಡೆಯುತ್ತಿದ್ದರೆ, ಆ ಮಗುವಿನ ವಯಸ್ಸು 5 ವರ್ಷ ಮೇಲ್ಪಟ್ಟಿದ್ದರೆ ಮಗುವಿನ ಒಪ್ಪಿಗೆ ಪತ್ರವನ್ನು ಕೂಡ ನೀಡಬೇಕಾಗುತ್ತದೆ. 

Indian Laws: ವಿಚ್ಛೇದನಕ್ಕೆ ಮೊದಲೇ ಇದನ್ನು ತಿಳಿದಿಟ್ಟುಕೊಳ್ಳಿ

ಮಕ್ಕಳನ್ನು ದತ್ತು ಪಡೆಯುವ ನಿಯಮವನ್ನು ಸಡಿಲಗೊಳಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಮಕ್ಕಳ ಆರೈಕೆ ಮತ್ತು ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳ ಪಾತ್ರವನ್ನು ಹೆಚ್ಚಿಸುವ ಸಂಬಂಧ ತಿದ್ದುಪಡಿ ಮಾಡಲಾದ ಕಾನೂನು, ಸುಪ್ರೀಂ ಕೋರ್ಟ್‌ನ ಆದೇಶದಂತೆ ಸೆಪ್ಟೆಂಬರ್ 1, 2022 ರಿಂದ ಜಾರಿಗೆ ಬಂದಿದೆ. ಈಗ ಸ್ಥಳೀಯ ನ್ಯಾಯಾಲಯದ ಬದಲಿಗೆ, ಜಿಲ್ಲಾ ಮ್ಯಾಜಿಸ್ಟ್ರೇಟ್  ಮಗುವನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಆದೇಶ ನೀಡಬಹುದು. ಆದ್ರೆ ಅನಾಥ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ದತ್ತು ಮಕ್ಕಳ ದಾಖಲೆ ಅತಿ ಕಡಿಮೆ ಇದೆ. ಮಕ್ಕಳ ಸಂಖ್ಯೆ 2188 ಇದ್ದರೆ ದತ್ತು ಪಡೆಯಲು ಇಚ್ಛಿಸುತ್ತಿರುವ ದಂಪತಿ ಸಂಖ್ಯೆ 31000 ಇದೆ. ಹಾಗಾಗಿ ಮೂರ್ನಾಲ್ಕು ವರ್ಷ ಕಾಯುವ ಪರಿಸ್ಥಿತಿ ನಿರ್ಮಾಣವಾಗ್ತಿದೆ. 

Follow Us:
Download App:
  • android
  • ios