ವ್ಯಕ್ತಿಯಿಂದ ವ್ಯಕ್ತಿಗೆ ನಿದ್ದೆಯ ಅವಧಿ ಬದಲಾಗುತ್ತಿರುತ್ತೆ. ದಿನದಲ್ಲಿ ಅತಿ ಹೆಚ್ಚು ಅಂದರೆ 11 ಗಂಟೆ ನಿದ್ದೆ ಮಾಡುವವರದ್ದು ಒಂದು ವರ್ಗ. ಬರೀ 5 ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ದೆಹೋಗುವವರೂ ಇದ್ದಾರೆ. ಉಳಿದವರು 6 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡುವುದನ್ನು ರೂಢಿಸಿಕೊಂಡಿರುತ್ತಾರೆ. ಆರೋಗ್ಯವಂತರಾಗಿರಬೇಕು ಅಂದರೆ 6 ರಿಂದ 8 ಗಂಟೆ ನಿದ್ದೆ ಮಾಡಬೇಕು. ಇಡೀ ದಿನಕ್ಕೆ ಬೇಕಾದ ಉಲ್ಲಾಸ ಇದರಿಂದ ಸಿಗುತ್ತದೆ.