Asianet Suvarna News Asianet Suvarna News

ತುಟ್ಟಿಯಾದ ಮಗಳ ಮದ್ವೆ?: ಒಂದೇ ಬಟ್ಟೆಯಲ್ಲಿ ತಿರುಗಾಡ್ತಿದ್ದಾರೆ ನೀತಾ!

ಸರಳತಯೆ ಪಾಠ ಅಂಬಾನಿ ಸಾಮ್ರಾಜ್ಯದ ಮಹಾರಾಣಿ| ಮುಕೇಶ್ ಪತ್ನಿ ನೀತಾ ಅಂಬಾನಿ ಸರಳತೆಗೆ ಉದಾಹರಣೆ| 2 ದಿನ ಒಂದೇ ಬಟ್ಟೆ ತೊಟ್ಟ ಮುಕೇಶ್ ಪತ್ನಿ ನೀತಾ ಅಂಬಾನಿ| ಐಪಿಎಲ್ ಹರಾಜಿಗೂ ಅದೇ ಬಟ್ಟೆ, ಅಂಬಾನಿ ಸ್ಕೂಲ್‌ ಭೇಟಿಗೂ ಅದೇ ಬಟ್ಟೆ

Nita Ambani Lesson of Simplicity By Repeating Outfits
Author
Bengaluru, First Published Dec 22, 2018, 12:28 PM IST
  • Facebook
  • Twitter
  • Whatsapp

ಮುಂಬೈ(ಡಿ.22): ಮುಕೇಶ್ ಅಂಬಾನಿ ಅಂದ್ರೇನು?, ಅಂಬಾನಿ ಸಾಮ್ರಾಜ್ಯ ಅಂದ್ರೇನು?, ಇನ್ನು ಕುಬೇರನ ಪತ್ನಿ ಅಂದ್ಮೇಲೆ ಅಲ್ಲಿ ಮಾತಾಡೋದೆನಿದೆ ಹೇಳಿ?. ಆದರೆ ಮುಕೇಶ್ ಪತ್ನಿ ನೀತಾ ಅಂಬಾನಿ ಕುರಿತು ಮಾತಾಡೋ ವಿಷಯ ಇಲ್ಲೊಂದಿದೆ.

ಇತ್ತೀಚಿಗಷ್ಟೇ 700 ಕೋಟಿ ರೂ. ವೆಚ್ಛ ಮಾಡಿ ತಮ್ಮ ಮಗಳ ಮದುವೆ ಮಾಡಿದ್ದ ರಿಲಯನ್ಸ್ ಇಂಡಸ್ಟ್ರಿ ಒಡೆಯ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ, ಸ್ವರ್ಗವೇ ನಾಚುವಂತ ಮದುವೆ ಮಾಡುವ ಮೂಲಕ ಇಡೀ ಜಗತ್ತು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು.

ಮುಕೇಶ್ ಅಂಬಾನಿ ಅಂದ್ಮೇಲೆ ಹಣಕ್ಕೇನು ಕೊರತೆ ಅಲ್ಲವೇ?. ಲಕ್ಷಾಂತರ ಕೋಟಿ ರೂ. ಒಡೆಯರಾಗಿರುವ ಮುಕೇಶ್ ತಮ್ಮ ಪತ್ನಿ ಇಚ್ಛಿಸಿದರೆ ಇಂದ್ರ ಲೋಕವನ್ನೇ ಭೂಮಿಗೆ ತರಬಲ್ಲರು.

ಆದರೆ ಆಗರ್ಭ ಶ್ರೀಮಂತರಾಗಿದ್ದೂ ತಮ್ಮ ಶ್ರೀಮಂತಿಕೆಯನ್ನು ಮುಕೇಶ್ ಆಗಲಿ ಪತ್ನಿ ನೀತಾ ಅಂಬಾನಿ ಆಗಲಿ ಎಂದೂ ಪ್ರದರ್ಶಿಸಿದವರಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವುದು ಅವರ ಮೂಲ ಗುಣ.

ಅದರಂತೆ ಶುಕ್ರವಾರ ನೀತಾ ಅಂಬಾನಿ ಧಿರುಭಾಯಿ ಅಂಬಾನಿ ಇಂಟರನ್ಯಾಶನಲ್ ಸ್ಕೂಲ್‌ಗೆ ಭೇಟಿ ನೀಡಿದ್ದರು. ಈ ವೇಳೆ ನೀತಾ ಅಂಬಾನಿ ಗುರುವಾರ ಐಪಿಎಲ್ ಹರಾಜು ಸಮಾರಂಭದಲ್ಲಿ ತೊಟ್ಟಿದ್ದ ಬಟ್ಟೆಯನ್ನೇ ತೊಟ್ಟಿದ್ದು, ಮಾಧ್ಯಮಗಳ ಕಣ್ಣು ಕಕ್ಕುವಂತಾಗಿತ್ತು.

ಭಾರತದಲ್ಲಿ ಅದೆಷ್ಟೋ ಕೋಟಿ ಜನ ಇಂದು ತೊಟ್ಟ ಬಟ್ಟೆಯನ್ನೇ ನಾಳೆಯೂ ತೊಡುವ ಅನಿವಾರ್ಯತೆಯಲ್ಲಿ ಬದುಕುತ್ತಾರೆ. ಇದಕ್ಕೆ ಕೇವಲ ಆರ್ಥಿಕ ಕಾರಣವಷ್ಟೇ ಅಲ್ಲ, ಬದಲಿಗೆ ಬಿಡುವಿಲ್ಲದ ಕೆಲಸ ಇತ್ಯಾದಿ ಕಾರಣಗಳೂ ಉಂಟು.

ಆದರೆ ಅಂಬಾನಿ ಸಾಮ್ರಾಜ್ಯದ ಮಹಾರಾಣಿ ನೀತಾ ಅಂಬಾನಿ ಕೂಡ ಸಾಮಾನ್ಯರಂತೆ ೨ ದಿನ ಒಂದೇ ಬಟ್ಟೆ ತೊಟ್ಟಿದ್ದು ಮಾತ್ರ ಸುದ್ದಿಯಾಗಿದೆ. ಇದು ನೀತಾ ಅವರ ಸರಳತೆಗೂ ಸಾಕ್ಷಿ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಜೀವನವೆಲ್ಲ ಕೂಡಿಟ್ಟು ಮದ್ವೆ ಮಾಡೋರಿಗೆ ಅಂಬಾನಿ ಮನೆ ಮದುವೆ ಪಾಠ!

Follow Us:
Download App:
  • android
  • ios