ಮಕ್ಕಳಿಗೆ ಬೇರೆಲ್ಲ ಆಹಾರಗಳಿಗಿಂತ ಬೆಳಗಿನ ಉಪಹಾರ ತುಂಬಾನೇ ಮುಖ್ಯ. ಉಪಹಾರ ಚೆನ್ನಾಗಿದ್ದರೆ ಮಕ್ಕಳು ಆರೋಗ್ಯಕರವಾಗಿ, ಸ್ಟ್ರಾಂಗ್ ಆಗಿ ಬೆಳೆಯಲು ಸಾಧ್ಯವಾಗುತ್ತದೆ. ಜೊತೆಗೆ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯವಾಗುತ್ತದೆ. ಅಷ್ಟಕ್ಕೂ ಮಕ್ಕಳಿಗೆ ಬೆಳಿಗನ ಉಪಹಾರಕ್ಕೆ ಏನು ಕೊಟ್ಟರೊಳಿತು?

- ಮಕ್ಕಳಿಗೆ ಓಟ್ಸ್ ನೀಡಬಹುದು. ಓಟ್ಸ್ ಜೊತೆಗೆ ಬಾಳೆಹಣ್ಣನ್ನು ಸಣ್ಣದಾಗಿ ಕತ್ತರಿಸಿ, ಅದರ ಜೊತೆಗೆ ಜೇನನ್ನು ಸೇರಿಸಿ ನೀಡಿದರೆ ಮಕ್ಕಳಿಗೂ ಖುಷಿಯಾಗುತ್ತದೆ. ಆರೋಗ್ಯಕಾರಿಯೂ ಹೌದು.
- ಗೋಧಿಯಿಂದ ಮಾಡಿದ ಉಪಹಾರ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ವಿಟಮಿನ್ ಇ ಮತ್ತು ಇತರೆ ಅಗತ್ಯ ಪೌಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಹಿಮೊಗ್ಲೋಬಿನ್ ಹೆಚ್ಚಿಸಿ, ಲವಲವಿಕೆಯಿಂದ ಇರಲು ಸಹಕರಿಸುತ್ತದೆ.
- ಬಾಳೆಹಣ್ಣು ಮತ್ತು ಇತರ ಹಣ್ಣುಗಳ ಸ್ಮೂತಿ  ಮಾಡಿಕೊಟ್ಟರೂ ಮಕ್ಕಳ ಹೊಟ್ಟೆ ತುಂಬುತ್ತದೆ. ಬೇಡವೆನ್ನದೆ ಖುಷಿಯಾಗಿ ಸೇವಿಸುತ್ತಾರೆ. 
- ಕಲ್ಲಂಗಡಿ ಹಣ್ಣುಗಳನ್ನು ಬೆಳಗ್ಗೆ ಮಕ್ಕಳಿಗೆ ನೀಡಿದರೆ ದೇಹದ ನೀರಿನಾಂಶವನ್ನು ಹೆಚ್ಚಿಸುತ್ತದೆ. ಕಲ್ಲಂಗಡಿಯಲ್ಲಿನ ಲಿಕೊಪೀನ್ ಹೃದಯ ಮತ್ತು ಕಣ್ಣಿನ ಆರೋಗ್ಯಕ್ಕೆ ಉತ್ತಮ.
- ಬ್ರೌನ್ ಬ್ರೆಡ್ ಮತ್ತು ಮೊಟ್ಟೆ ಆಮ್ಲೆಟ್ ಒಳ್ಳೆಯದು. ದಿನಕ್ಕೊಂದು ಮೊಟ್ಟೆಯನ್ನು ಮಕ್ಕಳು ಸೇವಿಸಿದರೆ, ಎಲುಬು ಸ್ಟ್ರಾಂಗ್ ಆಗುತ್ತದೆ. 
- ಬಾಳೆಹಣ್ಣಿನಲ್ಲಿ ನೈಸರ್ಗಿಕವಾದ ಸಕ್ಕರೆ, ಪೊಟ್ಯಾಷಿಯಂ, ನಾರು ಮತ್ತು ಮೆಗ್ನೀಷಿಯಂ ಇವೆ. ಬೆಳಗ್ಗೆ ಒಂದು ಬಾಳೆ ಹಣ್ಣು ಮತ್ತು ಒಂದು ಲೋಟ ಹಾಲು ಸೇವಿಸಿದರೆ ಮಧ್ಯಾಹ್ನದವರೆಗೆ ಹೊಟ್ಟೆ ಹಸಿಯುವುದಿಲ್ಲ.
- ವೆಜ್ ರೋಲ್ ಮಾಡಿ ಕೊಡಿ. ಚಪಾತಿ ಜೊತೆ ಬೇರೆ ಬೇರೆ ರೀತಿಯ ಹಸಿ ತರಕಾರಿಗಳನ್ನು ಸೇರಿಸಿ, ಅದರ ಮೇಲೆ ಟೊಮೇಟೊ ಕೆಚಪ್ ಹಾಕಿ ನೀದರೆ ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ. 

ಜೀವಲಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ