Asianet Suvarna News Asianet Suvarna News

ಬ್ರಷ್, ಟವೆಲ್....ಇವಕ್ಕೂ ಎಕ್ಸ್‌ಪೈರಿ ಡೇಟ್ ಇರುತ್ತೆ, ಎಷ್ಟು ದಿನಕ್ಕೊಮ್ಮೆ ಬದಲಿಸುತ್ತೀರಿ?

ಕೆಲವು ವಸ್ತುಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿರುತ್ತವೆ. ಅವು ಹಾಳಾಗುವುದೇ ಇಲ್ಲ. ಹಾಗಂತ ಎಸೆಯಲು ಆಗದಂಥ ಅನುಬಂಧ ಅವಗಳೊಟ್ಟಿಗೆ. ಬ್ರಷ್, ಟಂಗ್ ಕ್ಲೀನರ್, ಟವೆಲ್...ಇಂಥ ಹತ್ತು ಹಲವು ವಸ್ತುಗಳನ್ನು ಇಲ್ಲಿ ಹೆಸರಿಸಬಹುದು. ಆದರೆ, ಇವುಗಳಿಗೂ ಎಕ್ಸ್‌ಪೈರಿ ಡೇಟಿರುತ್ತೆ ಗೊತ್ತಾ?

Household things have expiry dates

ಹೌದು, ಹಾಳಾಗಿಲ್ಲವೆಂದು ನಿರಂತವಾಗಿ ಬಳಸಿದರೆ ಅವು ನಮ್ಮ ಆರೋಗ್ಯಕ್ಕೇ ಕುತ್ತು. ಯಾವ, ಯಾವ ವಸ್ತುಗಳನ್ನು ಎಷ್ಟು ದಿನ ಬಳಸಬಹುದು ? ಇವುಗಳನ್ನು ಆಗಾಗ ಬದಲಿಸುವುದು ಏಕೆ ಮುಖ್ಯವಾಗುತ್ತದೆ?

Household things have expiry dates

ಟೂತ್ ಬ್ರಷ್, ಟಂಗ್ ಕ್ಲೀನರ್: ನಾವು ಬಳಸುವುದರ ಮೇಲೆ ಟೂತ್ ಬ್ರಷ್ ಬಾಳಿಕೆ ಬರುತ್ತದೆ. ಹಾಳಾಗಿಲ್ಲವೆಂದು ವರ್ಷಾನುಗಟ್ಟಲೆ ಬಳಸುವುದು ಒಳಿತಲ್ಲ. ಎರಡು-ಮೂರು ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರಷ್ ಅನ್ನು ಬದಲಿಸಿದರೆ, ಬಾಯಿ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೇ, ಟಂಗ್ ಕ್ಲೀನರ್ ಸಹ. 6-7 ತಿಂಗಳಿಗಾದರೂ ಒಮ್ಮೆ ಬದಲಾಯಿಸಿ. 

 

Household things have expiry dates

 ಟವೆಲ್: ಚೆನ್ನಾಗಿ ನೀರನ್ನು ಹಿಂಡುತ್ತೆ, ಕಲರ್ ಚೆನ್ನಾಗಿದೆ, ಯಾರೋ ಪ್ರೀತಿ ಪಾತ್ರರು ನೀಡಿದ್ದು, ಅದರ ಮೇಲೆ ಮಿಕ್ಕಿ ಮೌಸ್ ಚಿತ್ರವಿದೆ...ಹೀಗೆ ವಿವಿಧ ಕಾರಣಗಳಿಂದ ಆಪ್ತವಾಗೋ ಟವೆಲ್ ಮೇಲೆ ನಮಗೆ ಗೊತ್ತಿಲ್ಲದಂತೆ ವಿಚಿತ್ರ ವ್ಯಾಮೋಹ. ಸ್ನಾನ ಆದ್ಮೇಲೆ ಅದರಿಂದ ಮೈ ಒರೆಸಿಕೊಂಡರೇನೇ, ಸ್ನಾನ ಮಾಡೀದೀವಿ ಅನಿಸುವಷ್ಟು ಆವಿನಾಭಾವ ಸಂಬಂಧ. ಆದರೆ, ಇದರ ಆರೈಕೆಯನ್ನೂ ಸರಿಯಾಗಿಯೇ ಮಾಡಬೇಕೆಂಬುವುದು ಗೊತ್ತಾ? ಮೈ ಒರೆಸಿಕೊಂಡ ಟವೆಲ್ ಅನ್ನು ಎಲ್ಲಿಯಾಯ್ತೋ ಅಲ್ಲಿ ಎಸೆದರೆ, ಅದರ ಮೇಲೆ ಬ್ಯಾಕ್ಟೀರಿಯಾ ಬೆಳೆಯುತ್ತೆ. ಒಗೆಯಬೇಕು. ಒಗೆದ ಟವೆಲ್ ಅನ್ನು ಚೆನ್ನಾಗಿ ಬಿಸಿಲು ಬೀಳುವ ಜಾಗದಲ್ಲಿ ಒಣ ಹಾಕಬೇಕು. ಆಗ ಮಾತ್ರ ಅದರ ಕ್ರಿಮಿ ಕೀಟಗಳು ನಾಶವಾಗುತ್ತವೆ. ಇಷ್ಟು ಮಾಡಿದ ಮೇಲೂ ಅದನ್ನೂ ಒಂದೆರಡು ವರ್ಷಗಳ ನಂತರ ವರ್ಸರವೆ ಮಾಡುವುದೇ ಲೇಸು. ಮೈ ಒರೆಸ್ಲಿಕ್ಕೆ ಬರೋಲ್ಲ.

Household things have expiry dates

ಚಪ್ಪಲಿ : ಸಾವಿರಾರು ರೂ. ಕೊಟ್ಟು ಕೊಂಡ ಚಪ್ಪಲಿಯಿಂದಲೂ ನಾವು ಸಿಕ್ಕಾಪಟ್ಟೆ ಕಂಫರ್ಟಬಲ್ ಫೀಲ್ ಮಾಡಿಕೊಳ್ಳುತ್ತಿರುತ್ತೇವೆ. ಆದರೆ, ಇವನ್ನೂ ಆರು ತಿಂಗಳಿಗಿಂತ ಹೆಚ್ಚು ಬಳಸಬಾರದು. ಕಡಿಮೆ ದುಡ್ಡಿನದು, ಕಡಿಮೆ ಅವಧಿ ಬಾಳಿಕೆ ಬರುವಂಥ ಚಪ್ಪಲಿಗಳನ್ನೇ ಬಳಸುವುದೊಳಿತು. ಶೀಲಿಂಧ್ರಗಳು ಬೆಳೆದು ನಮ್ಮ ಕಾಲಿನಲ್ಲಿ ಬಿರುಕು ಬಿಡುವಂತೆ ಮಾಡುತ್ತವೆ ಹಳೇ ಚಪ್ಪಲಿಗಳು.

Household things have expiry dates

ಬಾತ್ ಸ್ಪಾಂಜ್ :  ಸ್ನಾನ ಮಾಡಲು ಬಳಸುವ ಬಾತ್ ಸ್ಪಾಂಜ್‌‌ಗಳನ್ನೂ ಎರಡು ವಾರಗಳಿಗಿಂತ ಹೆಚ್ಚು ಬಳಸಬಾರದು. ದಿನಾಲೂ ಬಳಸಿಯಾದ ನಂತರವೂ ನೀರು ಆರುವಂತೆ, ಬಿಸಿಲು ಬೀಳುವಂತೆ ನೋಡಿಕೊಳ್ಳಬೇಕು.

Household things have expiry dates

ವಾಕಿಂಗ್ ಶೂ: ಇವನ್ನು ಹಾಕಿ ರಭಸವಾಗಿ ನಡೆಯುವುದರಿಂದ ಬೇಗ ಹಾಳಾಗುತ್ತದೆ. ಬೇಗ ಸವೆದ ಶೂಗಳು ನಮ್ಮ ಮೂಳೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಅಬ್ಬಬ್ಬಾ ಎಂದರೆ ವರ್ಷ ಬಳಸಬೇಕು. 

Household things have expiry dates

ದಿಂಬು: ದಿನಾ ಬಳಸೋ ದಿಂಬನ್ನು ಆ್ಯಟ್‌ಲೀಸ್ಟ್ 2-3 ವರ್ಷಕ್ಕೊಮ್ಮೆಯಾದರೂ ಬಳಸಬೇಕು. ಇಲ್ಲದಿದ್ದರೆ ಡೊಳ್ಳು ಡೊಳ್ಳಾಗಿ ಕತ್ತು ನೋವು, ತಲೆ ನೋವು ಬರುವ ಸಾಧ್ಯತೆಗಳಿತ್ತವೆ. ಎಣ್ಣೆ, ಕೊಳಕಾಗಿ ತಿಗಣೆ ಕಾಟವೂ ಹೆಚ್ಚಬಹುದು. ಕೊಳಕು ದಿಂಬಿಗೆ ತಲೆ ಕೊಟ್ಟರೆ, ಹೇನಾಗಬಹುದು.

Household things have expiry dates

ಬಾಚಣೆಗೆ : ಪ್ರತಿ ಸಲ ತಲೆ ಸ್ನಾನ ಮಾಡಿದಾಗಲೂ, ಬಾಚಣಿಗೆಯನ್ನು ತೊಳೆದುಕೊಳ್ಳವುದೊಳಿತು. ಇಲ್ಲದಿದ್ದರೆ ಧೂಳು, ಜಿಡ್ಡಿನಾಂಶ ಹಣಿಗೆಯಲ್ಲಿ ಉಳಿದು, ಕೊಳಕು ವಾಸನೆ ಬೀರುತ್ತದೆ. ಇದರಿಂದಲೇ ಮತ್ತೆ ಮತ್ತೆ ತಲೆ ಬಾಚಿ ಕೊಂಡರೆ, ತಲೆ ಚರ್ಮಕ್ಕೆ ಹಾನಿಯಾಗೋದು ಗ್ಯಾರಂಟಿ. ಇಷ್ಟು ಸ್ವಚ್ಛವಾಗಿಟ್ಟುಕೊಂಡ ಬಾಚಣಿಗೆಯನ್ನೂ ವರ್ಷಕ್ಕೊಮ್ಮೆಯಾದರೂ ಬದಲಿಸಿದರೆ ಒಳ್ಳೆಯದು.

Follow Us:
Download App:
  • android
  • ios