ಜಿಮ್ ಅಥವಾ ಡಯಟ್ ಇಲ್ಲದೆಯೂ ತೂಕ ಇಳಿಸಿಕೊಳ್ಳಲು ಮನೆಕೆಲಸಗಳು ಸಹಾಯ ಮಾಡುತ್ತವೆ. ನೆಲ ಒರೆಸುವುದು, ಪಾತ್ರೆ ತೊಳೆಯುವುದು ಮುಂತಾದ ಕೆಲಸಗಳು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತವೆ ಮತ್ತು ದೇಹಕ್ಕೆ ವ್ಯಾಯಾಮ ನೀಡುತ್ತವೆ.

Weight Loss: ನಮ್ಮ ತಾಯಂದಿರು ಮತ್ತು ಅಜ್ಜಿಯರು ಎಂದಿಗೂ ಜಿಮ್‌ಗೆ ಹೋಗದೆಯೇ ತಮ್ಮ ದೇಹವನ್ನು ಹೇಗೆ ಆರೋಗ್ಯವಾಗಿಟ್ಟುಕೊಂಡಿದ್ದರು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಬಹುಶಃ ಅವರು ಮನೆ ಕೆಲಸಕ್ಕೆ ಕಳೆಯುವ ಸಮಯದಿಂದಾಗಿರಬಹುದು. ಹೌದು. ಮನೆಕೆಲಸ ಮಾಡುವುದು ಕ್ಯಾಲೊರಿ ಬರ್ನ್ ಮಾಡುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ . ಎಲ್ಲಿಗೂ ಹೋಗದೆ ಅಥವಾ ಕಠಿಣ ವ್ಯಾಯಾಮ ಮಾಡದೆಯೇ ನೀವು ತೂಕವನ್ನು ಕಡಿಮೆ ಮಾಡಲು ವಿವಿಧ ಮಾರ್ಗಗಳಿವೆ. ನೆಲವನ್ನು ಒರೆಸುವುದು ಅಥವಾ ಪಾತ್ರೆಗಳನ್ನು ತೊಳೆಯುವುದು ಮುಂತಾದ ಸಣ್ಣ ಕೆಲಸಗಳನ್ನು ಮಾಡುವುದರಿಂದ ಕ್ಯಾಲೊರಿಗಳನ್ನು ಬರ್ನ್ ಮಾಡುವುದು ಮಾತ್ರವಲ್ಲದೆ, ನಿಮ್ಮ ದೇಹದ ವಿವಿಧ ಭಾಗಗಳಿಗೆ ವ್ಯಾಯಾಮವಾಗುತ್ತದೆ. ಇವುಗಳನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮನ್ನು ಚುರುಕಾಗಿಡುವುದಲ್ಲದೆ, ದೇಹಕ್ಕೆ ಒಳ್ಳೆಯ ಶೇಪ್ ಕೊಡಲಿದೆ. ಅವು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತವೆ ಮತ್ತು ಹೆಚ್ಚಿನ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತವೆ. ಈ ಕೆಲಸಗಳನ್ನು ಮಾಡುವಾಗ ನೀವು ಎಷ್ಟು ಕ್ಯಾಲೋರಿ ಬರ್ನ್ ಮಾಡಬಹುದು ಎಂಬುದರ ಕುರಿತು ನಿಮಗೆ ಒಂದು ಕಲ್ಪನೆಯನ್ನು ನೀಡಲು, ನಾವು ಮನೆಗೆಲಸಗಳ ಪಟ್ಟಿಯನ್ನು ಮತ್ತು ಅವುಗಳನ್ನು ಮಾಡುವಾಗ ನೀವು ಬರ್ನ್ ಮಾಡಬಹುದಾದ ಅಂದಾಜು ಕ್ಯಾಲೊರಿಗಳನ್ನು ಸಂಗ್ರಹಿಸಿದ್ದೇವೆ. ಇವೆಲ್ಲದರ ಜೊತೆಗೆ ಸರಿಯಾಗಿ ತಿನ್ನುವುದು ತೂಕ ಇಳಿಸಿಕೊಳ್ಳಲು ಕೈಜೋಡಿಸುತ್ತದೆ ಎಂಬುದನ್ನು ಗಮನಿಸಿ.

ಮನೆ ಕೆಲಸಗಳು ಎಷ್ಟು ಕ್ಯಾಲೊರಿ ಬರ್ನ್ ಮಾಡುತ್ತವೆ? 
ಬಟ್ಟೆ ಒಗೆಯುವುದು ಮತ್ತು ಒಣಗಿಸುವುದು 

ಬಟ್ಟೆ ಒಗೆಯುವಾಗ ಮತ್ತು ಒಣಗಿಸುವಾಗ ಒಬ್ಬ ವ್ಯಕ್ತಿಯು ಬಾಗಬೇಕು, ವಸ್ತುಗಳನ್ನು ಎತ್ತಬೇಕು ಮತ್ತು ನಡೆಯಬೇಕು, ಈ ರೀತಿಯಾಗಿ ಪ್ರತಿ ಗಂಟೆಗೆ 100 ರಿಂದ 200 ಕ್ಯಾಲೊರಿ ಬರ್ನ್ ಆಗುತ್ತದೆ. 

ಸ್ನಾನಗೃಹ ಸ್ವಚ್ಛ ಮಾಡುವಾಗ 
ಸ್ನಾನಗೃಹವನ್ನು ಸ್ವಚ್ಛಗೊಳಿಸುವುದರಿಂದ 150 ರಿಂದ 300 ಕ್ಯಾಲೊರಿಗಳು ಬರ್ನ್ ಆಗುತ್ತವೆ. ಏಕೆಂದರೆ ಸ್ನಾನಗೃಹದ ಮೊಂಡುತನದ ಕಲೆಗಳನ್ನು ಸ್ವಚ್ಛಗೊಳಿಸಲು ಕಠಿಣ ಪರಿಶ್ರಮ ಪಡಬೇಕಾಗುತ್ತದೆ ಮತ್ತು ಇದು ಪೂರ್ಣ ದೇಹದ ವ್ಯಾಯಾಮಕ್ಕೆ ಕಾರಣವಾಗುತ್ತದೆ.

ಗುಡಿಸುವುದು
ಇಡೀ ಮನೆಯನ್ನು ಗುಡಿಸಲು 15 ರಿಂದ 20 ನಿಮಿಷಗಳು ಬೇಕಾಗುತ್ತದೆ. ಇದು ಸರಿಸುಮಾರು 40 ರಿಂದ 50 ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ಈ ಕೆಲಸವನ್ನು ಪ್ರತಿದಿನ ಮಾಡುವುದು ಒಳ್ಳೆಯ ವ್ಯಾಯಾಮ. 

ಒರೆಸುವುದು
ನೆಲವನ್ನು ಒರೆಸುವುದರಿಂದ ಕೋರ್ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಬಾಗಬೇಕು, ಇದು ದೇಹಕ್ಕೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ಹಾಗಾಗಿ ಶುಚಿಗೊಳಿಸುವಿಕೆಯು 150 ರಿಂದ 250 ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ವೆಬ್‌ಎಂಡಿ ಪ್ರಕಾರ, ಮೂವತ್ತು ನಿಮಿಷಗಳ ಕಾಲ ವ್ಯಾಕ್ಯೂಮಿಂಗ್ ಮಾಡುವುದರಿಂದ ಸುಮಾರು 123 ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯವಾಗುತ್ತದೆ. 

ಕಿಟಕಿಗಳನ್ನು ಸ್ವಚ್ಛಗೊಳಿಸುವುದು
ನೀವು ಪ್ರತಿದಿನ ಕಿಟಕಿಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದರೆ, ಅದು ಗಂಟೆಗೆ 100 ರಿಂದ 200 ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ಈ ಕೆಲಸದಲ್ಲಿ, ಎದ್ದು ಕುಳಿತುಕೊಳ್ಳುವುದು, ಹಿಗ್ಗಿಸುವುದು ಮತ್ತು ಕೈ ಸ್ನಾಯುಗಳ ವ್ಯಾಯಾಮವನ್ನು ಸಹ ಮಾಡಲಾಗುತ್ತದೆ. 

ಧೂಳು ತೆಗೆಯುವುದು 
ಮನೆಯಲ್ಲಿ ಧೂಳು ಸಂಗ್ರಹವಾಗದಂತೆ ತಡೆಯಲು ಧೂಳು ತೆಗೆಯಲಾಗುತ್ತದೆ. ಮನೆಯ ವಸ್ತುಗಳ ಮೇಲಿನ ಧೂಳು ತೆಗೆಯುವುದು ಮತ್ತು ಜೋಡಿಸುವುದು ಗಂಟೆಗೆ 100 ರಿಂದ 200 ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. 

ಅಡುಗೆ ಮಾಡುವಾಗ 
ಅಡುಗೆ ಮಾಡುವುದರಿಂದ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯವಾಗುತ್ತದೆ. ಅರ್ಧ ಗಂಟೆ ಅಡುಗೆ ಮಾಡುವುದರಿಂದ 92 ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯವಾಗುತ್ತದೆ. ನೀವು ದಿನಕ್ಕೆ ಎಷ್ಟು ಬಾರಿ ಅಡುಗೆ ಮಾಡುತ್ತೀರಿ ಎಂಬುದರ ಆಧಾರದ ಮೇಲೆ ಸಂಖ್ಯೆಯನ್ನು ಹೆಚ್ಚಿಸಬಹುದು.