Asianet Suvarna News Asianet Suvarna News

ನಗರದಲ್ಲಿ ಗಗನಕ್ಕೇರಿದ ಮನೆ ಬಾಡಿಗೆ ದರ: ಅರ್ಧ ಹಾಸಿಗೆಯನ್ನೇ ಬಾಡಿಗೆ ನೀಡಲು ಮುಂದಾದ ಮಹಿಳೆ

 ಇಲ್ಲೊಬ್ಬರೂ ಮಹಿಳೆ ತಾವು ಮಲಗುವ ಹಾಸಿಗೆಯ ಅರ್ಧ ಭಾಗವನ್ನೇ ಬಾಡಿಗೆ ನೀಡಲು ಬಯಸಿದ್ದಾಳೆ..! ಅಚ್ಚರಿ ಎನಿಸಿದರು ಇದು ಸತ್ಯ. ಮಹಿಳೆಯ ಈ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ. 

House rent skyrocketed in Torento city Woman offered to rent half a bed akb
Author
First Published Nov 24, 2023, 4:31 PM IST

ಸಾಮಾನ್ಯವಾಗಿ ಮಹಿಳೆಯರು ಕೆಲವು ವಿಚಾರದಲ್ಲಿ ಬಹಳ ನಿರ್ದಿಷ್ಟವಾಗಿರುತ್ತಾರೆ. ಅವರು ಕೆಲವೊಂದು ವಿಚಾರಗಳನ್ನು ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ, (ಎಲ್ಲರೂ ಅಲ್ಲ)  ಮನೆಯ ಬಾತ್‌ ರೂಮ್,  ಬೆಡ್‌ಶಿಟ್‌, ಧರಿಸುವ ಬಟ್ಟೆ, ತಾವು ಊಟ ಮಾಡುವ ತಟ್ಟೆ, ನೈಲ್ ಪಾಲಿಶ್, ಜ್ಯುವೆಲ್ಲರಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಇಲ್ಲೊಬ್ಬರೂ ಮಹಿಳೆ ತಾವು ಮಲಗುವ ಹಾಸಿಗೆಯ ಅರ್ಧ ಭಾಗವನ್ನೇ ಬಾಡಿಗೆ ನೀಡಲು ಬಯಸಿದ್ದಾಳೆ..! ಅಚ್ಚರಿ ಎನಿಸಿದರು ಇದು ಸತ್ಯ. ಮಹಿಳೆಯ ಈ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ. 

ಟೊರೊಂಟೋ ಮೂಲದ ಅನ್ಯಾ ಇಟ್ಟಿಂಗರ್ ಎಂಬುವವರೇ ಹೀಗೆ ತನ್ನ ಅರ್ಧ ಹಾಸಿಗೆಯನ್ನು ಸೇಲ್‌ಗಿಟ್ಟ ಮಹಿಳೆ. ಟೊರೆಂಟೋದಲ್ಲಿ ಮನೆಗಳು, ವಸತಿ ನಿಲಯಗಳ ದರ ಅತ್ಯಂತ ದುಬಾರಿ ಒಂದು ಅಂದಾಜಿನ ಪ್ರಕಾರ ಟೊರೆಂಟೋ ಕೆನಡಾದಲ್ಲೇ ಅತ್ಯಂತ ದುಬಾರಿ  ವಸತಿಗಾಗಿ ವೆಚ್ಚ ಮಾಡಬೇಕಾದ ಪ್ರದೇಶವಾಗಿದೆ. ಇಂತಹ ಸ್ಥಳದಲ್ಲಿ ಈ ಮಹಿಳೆ ತನ್ನ ಅರ್ಧ ಹಾಸಿಗೆಯನ್ನೇ ಬರೋಬ್ಬರಿ 2,614 ಡಾಲರ್‌ ಬಾಡಿಗೆಗೆ ಅಂದರೆ ತಿಂಗಳಿಗೆ ಭಾರತೀಯ ರೂಪಾಯಿಗಳಲ್ಲಿ 54000 ರೂಗೆ ಬಾಡಿಗೆ ನೀಡಲು ಮುಂದಾಗಿದ್ದಾಳೆ. 

ಈ ವರ್ಷದಲ್ಲಿಯೇ ಬೆಂಗಳೂರಿನಲ್ಲಿ ಬಾಡಿಗೆ ದರ ಶೇ. 30ರಷ್ಟು ಹೆಚ್ಚಳ, ವೈಟ್‌ಫೀಲ್ಡ್‌ ನಂ.1

ಈಕೆಯ ಈ ಜಾಹೀರಾತು ಫೇಸ್‌ಬುಕ್‌ನ ಮಾರ್ಕೆಟ್‌ಪ್ಲೇಸ್‌ನಲ್ಲಿ ಪೋಸ್ಟ್ ಆಗಿದ್ದು, ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಇಲ್ಲಿ ಮತ್ತೊಬ್ಬರು ತಮ್ಮ ಅರ್ಧ ಹಾಸಿಗೆಯನ್ನು 900 ಕೆನಡಿಯನ್ ಡಾಲರ್‌ಗೆ ಬಾಡಿಗೆ ನೀಡಲು ಜಾಹೀರಾತು ನೀಡಿರುವ ಪೋಸ್ಟ್ ಕೂಡ ಇದೆ. ಮಾಸ್ಟರ್‌ ಬೆಡ್‌ರೂಮ್‌ ಹಂಚಿಕೊಳ್ಳಲು ಹೊಂದಿಕೊಳ್ಳಬಲ್ಲ ಯುವತಿಯೊಬ್ಬರನ್ನು ಎದುರು ನೋಡುತ್ತಿದ್ದೇನೆ. ಈ ಹಿಂದೆಯೂ ನಾನು ಬೆಡ್‌ರೂಮ್ ಹಂಚಿಕೊಂಡಿದೆ. ಅದು ಚೆನ್ನಾಗಿತ್ತು. ಎಂದು ಈ ಜಾಹೀರಾತಿನಲ್ಲಿ ಬರೆದುಕೊಳ್ಳಲಾಗಿದ್ದು, ಈಗ ಆ ಜಾಹೀರಾತು ಡಿಲೀಟ್ ಆಗಿದೆ. 

ಈ ಪೋಸ್ಟನ್ನು ಅನ್ಯಾ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಎರಡನೇ ಅತ್ಯಂತ ದುಬಾರಿ ವಸತಿ ಮಾರುಕಟ್ಟೆಯೆಂದು ಹೆಸರಾಗಿರುವ ಕೆನಡಾದ ಟೊರೆಂಟೋದಲ್ಲಿ ಒಂದು ಮಲಗುವ ಕೋಣೆ ಆಸ್ತಿಯ ಸರಾಸರಿ ವೆಚ್ಚವು ತಿಂಗಳಿಗೆ $2,614 ಆಗಿದೆ. ಟೊರೆಂಟೋ ಮಾರುಕಟ್ಟೆ ಇಷ್ಟೊಂದು ದುಬಾರಿ ಆಗಿರಲು ಸಾಧ್ಯವಿಲ್ಲ ಎಂದು ಅಂದುಕೊಂಡಾಗಲೇ ಇಷ್ಟೊಂದು ದುಬಾರಿ ಇದೆ ಎಂದು ಅವರು ಹೇಳಿಕೊಂಡಿದ್ದಾರೆ. 

ಮನೆ ಬಾಡಿಗೆ ಕಟ್ಟಲಾಗದೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ ಈಗ ಸೂಪರ್‌ಸ್ಟಾರ್‌, ಭರ್ತಿ 6000 ಕೋಟಿ ಆಸ್ತಿ ಒಡೆಯ!

ಇದು ಎಷ್ಟೊಂದು ದುಃಖಕರ ವಿಚಾರ ಎಂಬುದನ್ನು ತೋರಿಸುತ್ತಿದೆ. ತಿಂಗಳಿಗೆ 900 [ಕೆನಡಿಯನ್] ಡಾಲರ್‌ಗಳಿಗೆ ನಿಮ್ಮ ಹಾಸಿಗೆಯಲ್ಲಿ ಜಾಗವನ್ನು ಬಾಡಿಗೆಗೆ ನೀಡುತ್ತೀರಾ? ಇಲ್ಲಿ ಅನೇಕ ಜನರು ಇದನ್ನು ದ್ವೇಷಿಸುವುದರಲ್ಲಿ ಆಶ್ಚರ್ಯವಿಲ್ಲ. ನಗರದಲ್ಲೇ ಉಳಿಯಲು ಜನ ಬಯಸಿರುವ ಕಾರಣ ಈ ರೀತಿ ದುಬಾರಿಯಾಗಿದೆ. ನಾನು ಈ ರೀತಿಯ ವಿಲಕ್ಷಣ ಬಾಡಿಗೆಯ ಬಗ್ಗೆ ಪೋಸ್ಟ್ ಮಾಡಿದಾಗ ಜನ ಸರಿ ಹಾಗಾದರೆ ಬಾಡಿಗೆ ನೀಡಬೇಡಿ ಎಂದು ಹೇಳುತ್ತಾರೆ. ಆದರೆ ಹೆಚ್ಚಿನ ಜನರಿಗೆ ಬೇರೆ ಆಯ್ಕೆಯೇ ಇಲ್ಲ ಎಂದು ಅನ್ಯಾ ಹೇಳಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Anya Ettinger (@aserealty)

 

Follow Us:
Download App:
  • android
  • ios