Asianet Suvarna News Asianet Suvarna News

ಹಾಸ್ಟೆಲ್‌ನಲ್ಲಿದ್ದೀರಾ... ಹಾಗಾದ್ರೆ ನೀವು ಯಾವ ಟೈಪ್ : ಈ ವೀಡಿಯೋ ನೋಡಿ ಹೇಳಿ

ಹಾಸ್ಟೆಲ್ ಹುಡುಗರು ಸಿನಿಮಾ ಹಿಟ್ ಆಗಿದ್ದು ಗೊತ್ತು. ಈಗ ಇಲ್ಲೊಂದು ಕಡೆ ಹಾಸ್ಟೆಲ್ ಹುಡುಗರು ಹಾಸ್ಟೆಲ್ ಜೀವನದ ಬಗ್ಗೆ ವೀಡಿಯೋ ಮಾಡಿ ಹರಿಬಿಟ್ಟಿದ್ದು ವೈರಲ್ ಆಗಿದೆ.

Hostel students video about cloth washing goes viral watch video and find which type washer you Are akb
Author
First Published Dec 1, 2023, 2:45 PM IST

ಹಾಸ್ಟೆಲ್ ಜೀವನ ಬಹುತೇಕ ವಿದ್ಯಾರ್ಥಿ ಜೀವನದ ಅಮೂಲ್ಯ ದಿನಗಳು ಎಲ್ಲೆಲ್ಲೋ ಬೆಳೆದ ಮಕ್ಕಳು ಅಲ್ಲಿ ಒಂದಾಗಿ ಜೊತೆಯಾಗಿ ಆಡಿ ಬೆಳೆಯುತ್ತಾರೆ ಜೊತೆಯಾಗಿ ಜೀವನ ಮಾಡುತ್ತಾರೆ. ಓದುತ್ತಾರೆ. ಬರೀ ಇಷ್ಟೇ ಅಲ್ಲ ಜೊತೆಯಾಗಿ ಸೇರಿ ತಲೆಹರಟೆಯನ್ನು ಮಾಡುತ್ತಾರೆ, ಅಳುತ್ತಾರೆ. ಪರಸ್ಪರ ಹೊಡೆದಾಡಿಕೊಂಡು ರೌಡಿಸಂ ಕೂಡ ಮಾಡುತ್ತಾರೆ. ಹೊಸ ಮಕ್ಕಳಿಗೆ ಸಣ್ಣದಾಗಿ ರಾಗಿಂಗ್ ಕೂಡ ಮಾಡುತ್ತಾರೆ. 

ಎಳವೆಯಲ್ಲೆ ಹಾಸ್ಟೆಲ್‌ಗೆ ಶಿಕ್ಷಣ ಪಡೆಯುವುದಕ್ಕಾಗಿ ತೆರಳಿದ ಮಕ್ಕಳು ತಮ್ಮ ಕೆಲಸಗಳನ್ನು ತಾವು ಮಾಡುತ್ತಾ ಸ್ವಾಭಿಮಾನಿಗಳಾಗಿ ಬೆಳೆಯುತ್ತಾರೆ. ಎಲ್ಲ ಹಾಸ್ಟೆಲ್‌ಗಳಲ್ಲಿ ಇರುವಂತೆ ಅದೊಂದು ವೈವಿಧ್ಯತೆಯಿಂದ ಕೂಡಿದ ತೋಟ. ಬೇರೆ ಬೇರೆ ಲೈಫ್‌ಸ್ಟೈಲ್‌ನಿಂದ ಬಂದವರೂ  ಅಲ್ಲಿ ಜೊತೆಯಾಗಿ ಬದುಕುತ್ತಾರೆ. ಹಾಸ್ಟೆಲ್‌ನಲ್ಲಿ ಬೆಳೆದವರಿಗೆ ಹಲವು ರೀತಿಯ ವ್ಯಕ್ತಿತ್ವ ಅಲ್ಲಿ ಕಾಣಸಿಗುತ್ತದೆ.. ಸ್ನಾನ ಮಾಡುವುದರಿಂದ ಹಿಡಿದು ಬಟ್ಟೆ ಒಗೆದು ತಿಂಡಿ ತಿನ್ನುವವರೆಗೂ ಒಬ್ಬರಿಗಿಂತ ಒಬ್ಬರೂ ವಿಭಿನ್ನ. ಕೆಲವರು ಸ್ನಾನ ಮಾಡುವುದಕ್ಕೆ ಒಂದು ಗಂಟೆ ಮಾಡಿದರೆ ಮತ್ತೆ ಕೆಲವರು ಐದೇ ನಿಮಿಷದಲ್ಲಿ ಬರುವವರು. ಮತ್ತೆ ಕೆಲವರು ಸ್ನಾನದ ಮನೆಯಲ್ಲೇ ಧ್ಯಾನ ಮಾಡುವವರು ನಿದ್ದೆಗೂ ಜಾರುವರು ಹೀಗೆ ಹಲವು ವೈವಿಧ್ಯ. 

ಆ ಕಟ್ಟಡದಿಂದ ಈ ಕಟ್ಟಡಕ್ಕೆ ಹಾಸ್ಟೆಲ್ ಹುಡುಗರ ರಾಕೆಟ್ ವಾರ್: ಆಘಾತಕಾರಿ ವೀಡಿಯೋ ವೈರಲ್

ಹಾಸ್ಟೆಲ್‌ನಲ್ಲಿ ಶಿಕ್ಷಣ ಪೂರೈಸಿದ ಹಲವರು ಹಾಸ್ಟೆಲ್ ಜೀವನದ ಬಗ್ಗೆ ಹಿಂದೆಲ್ಲಾ ರಸವತ್ತಾಗಿ ಬರೆದುಕೊಂಡಿದ್ದಾರೆ. ಆದರೆ ಈಗ ವೀಡಿಯೋ ಯುಗ ಏನು ಮಾಡಿದರೂ ಅದನ್ನು ವೀಡಿಯೋ ರೂಪದಲ್ಲಿ ತಿಳಿಸುವ ಡಿಜಿಟಲ್ ಯುಗ. ಅದೇ ರೀತಿ ಇಲ್ಲೊಂದು ಕಡೆ ಹಾಸ್ಟೆಲ್ ಹುಡುಗರು ಹಾಸ್ಟೆಲ್ ಜೀವನದ ಬಗ್ಗೆ ವೀಡಿಯೋ ಹರಿಬಿಟ್ಟಿದ್ದು ವೈರಲ್ ಆಗಿದೆ. ಅದೇ ಹಾಸ್ಟೆಲ್‌ನಲ್ಲಿ ಮಕ್ಕಳು ಬಟ್ಟೆ ಹೇಗೆ ಒಗೆಯುತ್ತಾರೆ ಎಂಬುದು. ಈ ವೀಡಿಯೋದಲ್ಲಿರುವ ಕಂಟೆಂಟ್‌. 

Jeffrey leo Christian ಎಂಬುವವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಲವು ವೆರೈಟಿ ಬಟ್ಟೆ ತೊಳೆಯುವವರ ವೀಡಿಯೋವನ್ನು ಹಾಕಿದ್ದು, ನೋಡುಗರನ್ನು ನೀವು ಯಾವ ಟೈಪ್ ಎಂದು ಪ್ರಶ್ನಿಸಿದ್ದಾರೆ. ಈ ವೀಡಿಯೋದಲ್ಲಿ ಮೊದಲಿಗೆ ತುಂಬಾ ನೀಟ್ ಆಗಿ ಬಟ್ಟೆ ತೊಳೆದು ಹಿಂಡುವವರನ್ನು ಮೊದಲಿಗೆ ತೋರಿಸಿದ್ದಾರೆ. ನಂತರ  ದಿನದ ಬಟ್ಟೆಯನ್ನು ದಿನವೂ ವಾಶ್ ಮಾಡುವ ಒಳ್ಳೆ ಹುಡುಗ, ನಂತರದಲ್ಲಿ ಬರುವವ ಹಾಕಿದ ಬಟ್ಟೆಯೆಲ್ಲವನ್ನು ಒಂದು ತಿಂಗಳು ಕಟ್ಟಿಟ್ಟು ತಿಂಗಳಿಗೊಮ್ಮೆ ತೊಳೆಯುವವ, 4ನೇದಾಗಿ ಡಾನ್ಸ್ ಮಾಡ್ಕೊಂಡು ಬಟ್ಟೆ ವಾಶ್ ಮಾಡುವ ಹುಡುಗ, ನಂತರ ಒಂದು ವಾರದ ಹಿಂದೆ ಬಟ್ಟೆ ನೀರಿಗೆ ಹಾಕಿ ಮರೆತು ಹೋಗಿ ವಾಸನೆ ಬರುತ್ತಿರುವ ಬಟ್ಟೆಯನ್ನು ಮೂಗು ಮುಚ್ಚಿಕೊಂಡೆ ತೆಗೆದುಕೊಂಡು ಹೋಗುವವ, ಕೊನೆಯದಾಗಿ ಬಟ್ಟೆಯನ್ನೇ ವಾಶ್ ಮಾಡದವ, ಈ ಬಟ್ಟೆಯನ್ನೇ ವಾಶ್ ಮಾಡದವನಿಗೆ ಸುಗಂಧ ದ್ರವ್ಯವೇ ಸೋಪ್, ಹಾಖಿದ ಬಟ್ಟೆಗೆ ಮೂರು ಸುತ್ತು ಸೆಂಟ್ ಹೊಡೆದು ಅದನ್ನೇ ಹಾಕುವವ. 

OTTಯಲ್ಲಿ 'ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ' ರಿಲೀಸ್​: ಫುಲ್​ ಡಿಟೇಲ್ಸ್​ ಇಲ್ಲಿದೆ

ಬಹುಶಃ ನೀವು ಹಾಸ್ಟೆಲ್‌ನಲ್ಲಿ ಇದ್ದವರಾದರೆ ನಿಮಗೂ ಇಂತಹವರ ಪಕ್ಕ ಪರಿಚಯ ಇರುತ್ತದೆ. ಇದೇ ಕಾರಣಕ್ಕೆ ಈ ವೀಡಿಯೋ ಸಖತ್ ವೈರಲ್ ಆಗಿದೆ. ಅನೇಕರು ತಾವು ವೀಕೆಂಡ್‌ಗೆ ಮನೆಗೆ ಹೋಗುವಾಗ ಎಲ್ಲ ಕೊಳೆಯಾದ ಬಟ್ಟೆಯನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ಅಮ್ಮನೋ ಅಕ್ಕನ ಕೈಯಲ್ಲೋ ಒಗೆಸಿಕೊಳ್ಳುತ್ತಿದ್ದೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಮತ್ತೆ ಕೆಲವರು ತಾವು ಸೆಂಟ್ ಹೊಡೆದುಕೊಂಡು ಹೋಗುತ್ತಿದ್ದೆ ಎಂದು ಪ್ರಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.  ಮತ್ತೆ ಕೆಲವರು ತಾವು ವಾರಕ್ಕೊಮ್ಮೆ ಬಟ್ಟೆ ತೊಳೆಯುತ್ತಿದ್ದಿದ್ದಾಗಿ ಒಪ್ಪಿಕೊಂಡಿದ್ದಾರೆ. ಮತ್ತೆ ಕೆಲವರು ತಾವು ದಿನ ಬಟ್ಟೆ ವಾಶ್ ಮಾಡುತ್ತಿದ್ದಿದ್ದಾಗ ಹೇಳಿಕೊಂಡಿದ್ದಾರೆ. ಈಗ ನಿಮ್ಮ ಸರದಿ ನೀವು ದಿನವೂ ಬಟ್ಟೆ ವಾಶ್ ಮಾಡ್ತಿದ್ರಾ ಅಥವಾ ಬಟ್ಟೆ  ಒಗೆಯುವ (ತೊಳೆಯುವ) ಅಭ್ಯಾಸವೇ ಇಲ್ವಾ, ವೀಡಿಯೋ ನೋಡಿ ಹೇಳಿ. 

 

Latest Videos
Follow Us:
Download App:
  • android
  • ios