ಚಪಾತಿ ರುಚಿ ಹೆಚ್ಚಿಸೋ ಹೆಸರು ಕಾಳು ಪಲ್ಯ ಮಾಡೋದು ಹೀಗೆ...

ನಾಲಿಗೆಗೆ ರುಚಿ ಎನಿಸುವ ಕಾಳು ಪಲ್ಯವನ್ನು ಮನೆಯಲ್ಲಿಯೂ ರೆಡಿ ಮಾಡುಬಹುದು. ಮೊಳಕೆ ಕಟ್ಟಿದ ಹೆಸರು ಕಾಳಿನಲ್ಲಿ ಹೆಚ್ಚು ಪ್ರೊಟೀನ್ ಮತ್ತು ನಾರಿನಂಶವಿದ್ದು,  ಆರೋಗ್ಯಕರ ಆಹಾರವಾಗಿದೆ. ಕೈಗೆಟಕುವ ದರದಲ್ಲಿ ಇದು ಲಭ್ಯ. 

Healthy instant sprouts curry

ನಮ್ಮ ದೈನಂದಿನ ಜೀವನದಲ್ಲಿ ಕಾಳುಗಳನ್ನು ಎಷ್ಟು ಬಳಸಿದರೂ ಸಾಲದು. ಪೌಷ್ಟಿಕಾಂಶಯುಳ್ಳ ಈ ಕಾಳುಗಳನ್ನು ಅನೇಕ ರೀತಿಯಲ್ಲಿ ಬಳಸಬಹುದು. ಅಡುಗೆಯೂ ಮಾಡಬಹುದಾಗಿದ್ದು, ಪಲ್ಯ ಮಾಡೋ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿ :

  • 4 ಚಮಚ ಎಣ್ಣೆ
  • 1 ಚಮಚ ಸಾಸಿವೆ
  • 1 ಚಮಚ ಜೀರಿಗೆ
  • ಚಿಟುಕು ಇಂಗು
  • ಕರಿಬೇವು
  • ಬೆಳ್ಳುಳ್ಳಿ
  • ಶುಂಠಿ ಪೇಸ್ಟ್
  • 1 ಮೆಣಸಿನಕಾಯಿ
  • 1 ಮದ್ಯ ಗಾತ್ರದ ಈರುಳ್ಳಿ
  • 2 ಟೊಮ್ಯಾಟೊ 
  • ಕಾಲು ಚಮಚ ಅರಿಶಿಣ
  • ಅರ್ಧ ಚಮಚ ಖಾರದ ಪುಡಿ
  • ಅರ್ಧ ಚಮಚ ಬೆಲ್ಲ
  • ಉಪ್ಪು
  • 2 ಕಪ್ ಮೊಳಕೆ ಕಾಲು

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಕೆರಿಬೇವು, ಇಂಗು, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಮತ್ತು ಮೆಣಸಿನಕಾಯಿ ಸೇರಿಸಿ ಹುರಿದುಕೊಳ್ಳಿ.ಈರುಳ್ಳಿ ಕೆಂಪಾಗುವ ತನಕ ಹುರಿಯಬೇಕು. ಅದಕ್ಕೆ ಟೊಮ್ಯಾಟೋ, ಅರಿಷಿಣ, ಖಾರದ ಪುಡಿ, ಬೆಲ್ಲ ಮತ್ತು ಉಪ್ಪು ಹಾಕಿ ಕೈ  ಆಡಿಸುತ್ತಿರಿ. ನಂತರ ಅದಕ್ಕೆ ಮೊಳಕೆ ಕಟ್ಟಿದ ಹೆಸರು ಕಾಳು ಸೇರಿಸಿ. ನೀರು ಹಾಕಿ 15 ನಿಮಿಷ ಬೇಯಿಸಿದರೆ ರುಚಿ ರುಚಿಯಾದ ಕಾಳಿನ ಪಲ್ಯನ ರೆಡಿ.

Latest Videos
Follow Us:
Download App:
  • android
  • ios