ಡ್ರ್ಯಾಗನ್ ಫ್ರೂಟ್ ಏಕೆ ಬೇಕು ಆರೋಗ್ಯಕ್ಕೆ?
ಕೆಲವು ಹಣ್ಣುಗಳು ಕಂಡ್ ಕಂಡಲ್ಲಿ ಸಿಗೋಲ್ಲ. ವಿಪರೀತ ದುಬಾರಿ ಬೇರೆ. ಹಾಗಂತ ತಿನ್ನದೇ ಇರಬಹುದು. ಅದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭವಿರುತ್ತದೆ. ಅಂಥ ಹಣ್ಣುಗಳಲ್ಲಿ ಡ್ರಾಗನ್ ಫ್ರೂಟ್ ಒಂದು.
ದುಬಾರಿಯಾದರೂ ಆರೋಗ್ಯವಾಗಿರಲು ಇದೊಂದು ಹಣ್ಣು ತಿಂದರೆ ಸಾಕು. ಕೊಲೆಸ್ಟ್ರಾಲ್, ಹೃದಯ ತೊಂದರೆ, ಡಯಾಬಿಟೀಸ್‌ನಂಥ ತೊಂದರೆಗಳನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು ಡ್ರಾಗನ್ ಫ್ರೂಟ್.
- ಭಾರತೀಯರಿಗೆ ಹೆಚ್ಚು ಪರಿಚಯವಿಲ್ಲದ ಹಣ್ಣಾದರೂ, ಮಾರುಕಟ್ಟೆಯಲ್ಲಿ ಅದರ ದುಬಾರಿ ಬೆಲೆಯಿಂದ ಎಲ್ಲರ ಗಮನ ಸೆಳೆದಿದೆ ಡ್ರ್ಯಾಗನ್ ಫ್ರೂಟ್. ಡ್ರಾಗನ್ ಫ್ರೂಟ್ ಹೆಚ್ಚಾಗಿ ಮರುಭೂಮಿಯಂಥ ಪ್ರದೇಶದಲ್ಲಿ ಬೆಳೆಯುತ್ತದೆ. ನೋಡಲು ಮುಳ್ಳಾಗಿರುತ್ತದೆ. ಹೊರ ಭಾಗ ಗುಲಾಬಿ ಬಣ್ಣ ಹಾಗೂ ಒಳಗಡೆ ಬಿಳಿ ಜೊತೆ ಕಪ್ಪು ಚುಕ್ಕಿಯ ಬೀಜಗಳಿರುತ್ತವೆ ಈ ಹಣ್ಣಿಗೆ. ಈ ಡ್ರಾಗನ್ ಫ್ರೂಟ್ ತಿಂದರೇನು ಲಾಭ?
- ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಇರುವ ಈ ಹಣ್ಣು ಡಯಟ್ ಮಾಡುವವರಿಗೆ ಸಿಕ್ಕಾಪಟ್ಟೆ ಫೆವರೇಟ್.
- ದೇಹದಲ್ಲಿರುವ ಅನ್‌ಸ್ಯಾಚುರೇಟೆಡ್ ಫ್ಯಾಟ್ / ಕೆಟ್ಟ ಫ್ಯಾಟ್‌ಗಳನ್ನು ಕರಗಿಸುತ್ತದೆ. ಹೃದಯಕ್ಕೆ ಹರಿಯುವ ರಕ್ತವನ್ನು ಈ ಹಣ್ಣು ಶುದ್ಧೀಕರಿಸುತ್ತದೆ.
ಯುಟ್ಯೂಬ್ ನೋಡಿ ಡ್ರಾಗನ್ ಫ್ರೂಟ್ ಬೆಳೆದ ರೈತ
- ಡ್ರಾಗನ್ ಫ್ರೂಟ್‌ನಲ್ಲಿ ಫೈಬರ್ ಅಂಶ ಹೆಚ್ಚಿದ್ದು, ಮಲಬದ್ಧತೆ ಅಥವಾ ಅಜೀರ್ಣ ಸಮಸ್ಯೆಯನ್ನು ನಿವಾರಿಸಬಲ್ಲದು.
- ವಯಸ್ಸಾಗುತ್ತಿದ್ದಂತೆ ಮುಖದ ಚರ್ಮ ಸುಕ್ಕು ಸಾಮಾನ್ಯ. ಆದರೆ ಅದನ್ನು ತಪ್ಪಿಸುವ ಶಕ್ತಿ ಡ್ರಾಗನ್ ಫ್ರೂಟ್‌ಗಿದೆ.
- ಫೇಸ್ ಮಾಸ್ಕ್ ಹೆಚ್ಚಾಗಿ ಮಾರಾಟವಾಗುತ್ತಿದೆ. ತ್ವಚೆಯ ಸೌಂದರ್ಯ ಹೆಚ್ಚಿಸುವಲ್ಲಿಯೂ ಈ ಫ್ರೂಟ್ ಮುಖ್ಯ ಪಾತ್ರವಹಿಸುತ್ತದೆ.