Asianet Suvarna News Asianet Suvarna News

Himmat Singhji: ಸ್ಕಾಚ್ ಒಳಗೆ ಹೋಗ್ತಿದ್ದಂತೆ ಭಿಕ್ಷುಕನಾಗ್ತಿದ್ದ ಈ ರಾಜ!

ಮದ್ಯದ ನಶೆ ಏರಿದ್ಮೇಲೆ ಏನು ಮಾಡ್ತೇವೆ ಅನ್ನೋದು ನಮಗೆ ಗೊತ್ತಿರೋದಿಲ್ಲ. ಜನರು ಹೆಂಗ್ ಹೆಂಗೋ ಆಡೋಕೆ ಶುರು ಮಾಡ್ತಾರೆ. ಈ ರಾಜ ಕೂಡ ಇದ್ರಲ್ಲಿ ಒಬ್ಬ. ಕುಡಿದ ಮೇಲೆ ಆತ ಸಂಪೂರ್ಣ ಬದಲಾಗ್ತಿದ್ದ. 
 

Gujarat Himmat Singhji After Drinking Scotch Become Beggar  roo
Author
First Published Feb 12, 2024, 2:54 PM IST | Last Updated Feb 12, 2024, 2:54 PM IST

ರಾಜರು ಆಳಿದ ದೇಶ ನಮ್ಮದು. ಭಾರತದಲ್ಲಿ ಅನೇಕಾನೇಕ ರಾಜಮನೆತನಗಳು, ರಾಜರು ಆಳ್ವಿಕೆ ನಡೆಸಿದ್ದಾರೆ. ಒಂದೊಂದು ರಾಜನ ಆಳ್ವಿಕೆ ಒಂದೊಂದು ರೀತಿ ಇರ್ತಿತ್ತು. ಹಾಗೆ ರಾಜನ ಸ್ವಭಾವ, ಹವ್ಯಾಸಗಳು ಕೂಡ ಭಿನ್ನವಾಗಿರುತ್ತಿದ್ದವು. ಕೆಲ ರಾಜರ ಹವ್ಯಾಸ, ವರ್ತನೆ ಅಚ್ಚರಿ ಹುಟ್ಟಿಸುವಂತೆ ಇರ್ತಿತ್ತು. ಈಗಿನ ಕಾಲದಲ್ಲಿ ಮಟ ಮಟ ಮಧ್ಯಾಹ್ನ ಆಲ್ಕೋಹಾಲ್ ಸೇವನೆ ಮಾಡಿ ಚರಂಡಿಗೆ ಬೀಳುವ ಜನರನ್ನು ನೀವು ನೋಡಿದ್ದೀರಿ. ಕುಡಿದ ಮತ್ತಿನಲ್ಲಿ ಜನರು ಚಿತ್ರ – ವಿಚಿತ್ರವಾಗಿ ಆಡೋದನ್ನೂ ನೋಡಿದ್ದೀರಿ. ನಗ್ತಿದ್ದವ ಟೈಟ್ ಆಗ್ತಿದ್ದಂತೆ ಅಳಲು ಶುರು ಮಾಡ್ತಾನೆ. ಮೌನಿಯ ಬಾಯಿಂದ ಮಾತುಗಳು ಹೊರಗೆ ಬರುತ್ತವೆ. ಮದ್ಯಪಾನ ಈಗಿನದ್ದಲ್ಲ. ರಾಜ – ಮಹಾರಾಜರು ಮದ್ಯಪಾನದ ಪಾರ್ಟಿ ಏರ್ಪಡಿಸುತ್ತಿದ್ದರು. ಪಾರ್ಟಿಯಲ್ಲಿ ಅವರೂ ತಮ್ಮ ಸ್ವಭಾವಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಳ್ತಿದ್ದುದ್ದೂ ಇದೆ. ಅದಕ್ಕೆ ಈಗ ನಾವು ಹೇಳುವ ರಾಜ ಉತ್ತಮ ನಿದರ್ಶನ. ಮದ್ಯಪಾನ ಮಾಡ್ತಿದ್ದಂತೆ ರಾಜ ಭಿಕ್ಷುಕನಾಗಿ ಬದಲಾಗ್ತಿದ್ದ. ಬರೀ ವೇಷ ಮಾತ್ರ ಬದಲಾಗ್ತಾ ಇರಲಿಲ್ಲ. ಎಲ್ಲರ ಮುಂದೆ ಭಿಕ್ಷೆ ಬೇಡ್ತಿದ್ದ ರಾಜ, ರಾಜ ಮನೆತನದ ಸದಸ್ಯರು, ಗಣ್ಯರಿಗೆ ನಮಸ್ಕಾರ ಮಾಡ್ತಿದ್ದ.

ಕುಡಿದಾಗ ಭಿಕ್ಷುಕ (Beggar) ನಾಗ್ತಿದ್ದ ರಾಜ : ಮಹಾರಾಜ (Maharaj) ಎಂಬ ಪುಸ್ತಕದಲ್ಲಿ ದಿವಾನ್ ಜರ್ಮನಿ ದಾಸ್, ಈ ರಾಜನ ಬಗ್ಗೆ ಬರೆದಿದ್ದಾರೆ. ಆ ರಾಜನ ಹೆಸರು ಹಿಮ್ಮತ್ ಸಿಂಗ್‌ಜಿ ದೌಲತ್‌ಸಿನ್ಹಜಿ ರಾಥೋಡ್‌. ಅವರು ಗುಜರಾತ್‌ನ ಇಡಾರ್ ರಾಜರಾಗಿದ್ದರು. ಪುಸ್ತಕ ಬರೆದ ದಿವಾನ್ ಜರ್ಮನಿ ದಾಸ್, ಅನೇಕ ರಾಜರ ಕೈಕೆಳಗೆ ಕೆಲಸ ಮಾಡಿದ್ದಾರೆ. ರಾಜರ ಆಡಳಿತ, ವರ್ತನೆ ಬಗ್ಗೆ ಕೆಲ ಪುಸ್ತಕ ಬರೆದಿದ್ದಾರೆ. ಅದರಲ್ಲಿ ಮಹಾರಾಜ ಕೂಡ ಸೇರಿದೆ. 

ವಾಂತಿ ಬರಿಸುವಂತಿರೋ ಈ ಆಹಾರ ವಿದೇಶದಲ್ಲಿ ಫೇಮಸ್!

ರಾಜ, ಹಿಮ್ಮತ್ ಸಿಂಗ್‌ಜಿ ದೌಲತ್‌ಸಿನ್ಹಜಿ ರಾಥೋಡ್‌, ಏಪ್ರಿಲ್ 4, 1931 ರಂದು ಅಧಿಕಾರವಹಿಸಿಕೊಂಡಿದ್ದರು. ಇಂಗ್ಲೆಂಡ್ ಮೇಲೆ ವಿಶೇಷ ಒಲವಿದ್ದ ರಾಜ, ಮೂರು ನಾಲ್ಕು ವರ್ಷಕ್ಕೊಮ್ಮೆ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಅವರ ಅರಮನೆಯಲ್ಲಿ ಆಗಾಗ ಪಾರ್ಟಿಗಳು ನಡೆಯುತ್ತಿದ್ದವು. ಪಾರ್ಟಿ ಮಾಡಿದ ನಂತ್ರ ರಾಜ ಸಂಪೂರ್ಣ ಬದಲಾಗುತ್ತಿದ್ದ.  ರಾಜ, ಸ್ಕಾಚ್ ನ ಕೆಲವು ಪೆಗ್ ಗಳನ್ನು ಕುಡಿದಾಗ ಅವರನ್ನು ನೋಡಿದ್ರೆ ಅಪರಿಚಿತರು ಅಚ್ಚರಿಗೊಳಗಾಗ್ತಿದ್ದರು. ಯಾಕೆಂದ್ರೆ ರಾಜನ ಬಟ್ಟೆ ಬದಲಾಗುತ್ತಿತ್ತು. ರಾಜ ಹರಿದ ಬಟ್ಟೆಯನ್ನು ಧರಿಸುತ್ತಿದ್ದ. ಕೂದಲು ಕೆದರಿಕೊಂಡು ಧೂಳು ಮತ್ತು ಬೂದಿಯನ್ನು ಹಚ್ಚಿಕೊಳ್ತಿದ್ದ. ವೇಷ ಬದಲಾದ ಮೇಲೆ ಮತ್ತೆ ಪಾರ್ಟಿ ಹಾಲ್ ಗೆ ಬರ್ತಿದ್ದ ರಾಜ, ಭಿಕ್ಷಾ ಪಾತ್ರೆ ಹಿಡಿದು ಭಿಕ್ಷೆ ಬೇಡುತ್ತಿದ್ದ. ನಾನೊಬ್ಬ ಬಡವ, ಭಿಕ್ಷುಕ. ತುಂಬಾ ದಿನಗಳಲ್ಲಿ ಊಟ ಮಾಡಿಲ್ಲ. ಹಸಿವಿನಿಂದ ಬಳಲುತ್ತಿದ್ದೇನೆ. ನನಗೆ ಒಂದು ಪೈಸೆ ನೀಡಿ ಎಂದು ಬೇಡುತ್ತಿದ್ದ. ಆಸ್ಥಾನಿಕರಿಗೆ ಈ ವಿಷ್ಯ ಗೊತ್ತಿರುವ ಕಾರಣ ಅವರು, ರಾಜನ ತಟ್ಟೆಗೆ ನಾಣ್ಯವನ್ನು ಹಾಕುತ್ತಿದ್ದರು. ನಾಣ್ಯವನ್ನು ನೀಡಿದ ಮೇಲೆ ರಾಜ, ಎಲ್ಲರಿಗೂ ತಲೆ ಬಗ್ಗಿಸಿ ನಮಸ್ಕಾರ ಮಾಡುತ್ತಿದ್ದ. ಕುಡಿದ ಸಮಯದಲ್ಲಿ ಸಂಪೂರ್ಣ ಭಿಕ್ಷುಕನಂತೆ ಆಡ್ತಿದ್ದ ರಾಜ. ಅಪರಿಚಿತರು ಇಲ್ಲಿಗೆ ಬಂದ್ರೆ ಅಚ್ಚರಿಗೊಳಪಡುತ್ತಿದ್ದರು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ಅಯ್ಯಬ್ಬೋ! ಪುಣೆಯಲ್ಲಿ ಸೊಳ್ಳೆಗಳ ಸುಂಟರಗಾಳಿ; ಇಲ್ಲಿದೆ ವಿಡಿಯೋ

ರಾಜ ಅತ್ಯಂತ ಶ್ರೀಮಂತನಾಗಿದ್ದ. ಕುದುರೆ ರೇಸ್ ಗೆ ಹಣ ಹಾಕ್ತಿದ್ದ. ಪೂನಾ, ಕಲ್ಕತ್ತಾ, ಮುಂಬೈ, ಬೆಂಗಳೂರಿನ ಕುದುರೆ ರೇಸ್ ನಲ್ಲಿ ಕಾಲ ಕಳೆಯುತ್ತಿದ್ದ ರಾಜ, ರಾಜ್ಯಕ್ಕೆ ಅನೇಕ ಕಲ್ಯಾಣ ಕೆಲಸಗಳನ್ನು ಮಾಡಿದ್ದ. ಇಂಗ್ಲೀಸ್ ಹುಡುಗಿ ಮದುವೆಯಾಗಲು ಮುಂದಾಗಿದ್ದ ರಾಜನಿಗೆ ಪಾರ್ಸಿ ಹುಡುಗಿ ಸಿಕ್ಕಿದ್ದಳು. ಎಲ್ಲ ರಾಣಿಯರಿಗಿಂತ ಆಕೆ ಮೇಲೆ ವಿಶೇಷ ಪ್ರೀತಿ ರಾಜನಿಗಿತ್ತು. ಕುಡಿದ ಮತ್ತಿನಲ್ಲಿ ರಾಜ ಕೆಲವೊಮ್ಮೆ ಬೆಳಗಿನ ಜಾವ ಸೈನಿಕರಿಗೆ ಪರೇಡ್ ಮಾಡುವಂತೆ ಆದೇಶ ಮಾಡುತ್ತಿದ್ದ. ಪರೇಡ್ ಮುಗಿದ ನಂತ್ರ ಹುಲ್ಲಿನ ಮೇಲೆ ಹೊರಳಾಡುತ್ತಿದ್ದ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.   

Latest Videos
Follow Us:
Download App:
  • android
  • ios