ವಾಂತಿ ಬರಿಸುವಂತಿರೋ ಈ ಆಹಾರ ವಿದೇಶದಲ್ಲಿ ಫೇಮಸ್!
ಕೆಲವೊಂದು ಆಹಾರಗಳ ಬಗ್ಗೆ ಕಲ್ಪನೆ ಮಾಡಿಕೊಳ್ಳೋಕೂ ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರೋ ವಿಚಿತ್ರ ಕಾಂಬಿನೇಷನ್ ಆಹಾರವೇ ನಮಗೆ ಕಷ್ಟವಾಗುತ್ತೆ. ಆದ್ರೆ ಕೆಲ ಅಚ್ಚರಿ ಆಹಾರಗಳು ವಿದೇಶದಲ್ಲಿ ಸಾಂಪ್ರದಾಯಿಕ ಆಹಾರವಾಗಿದೆ.
ವಿಶ್ವದ ಪ್ರತಿಯೊಂದು ದೇಶವೂ ಆಹಾರದ ವಿಷ್ಯದಲ್ಲಿ ಭಿನ್ನತೆ ಹೊಂದಿದೆ. ಆಯಾ ಪ್ರದೇಶದ ಜನರ ಆಹಾರಗಳು, ಅವರ ಸಂಸ್ಕೃತಿ ಹಾಗೂ ಇಷ್ಟವನ್ನು ವ್ಯಕ್ತಪಡಿಸುತ್ತವೆ. ಭಾರತದ ಪ್ರತಿಯೊಂದು ರಾಜ್ಯ, ಜಿಲ್ಲೆ, ಹಳ್ಳಿಗಳಲ್ಲಿ ನೀವು ಆಹಾರದಲ್ಲಿ ಭಿನ್ನತೆಯನ್ನು ಕಾಣ್ಬಹುದು. ಆದ್ರೆ ಕೆಲ ದೇಶಗಳು ಆಹಾರ ವಿಷ್ಯದಲ್ಲಿ ಹುಬ್ಬೇರಿಸುವಂತೆ ಮಾಡುತ್ತವೆ. ಕಾರಣ ಅವರ ವಿಚಿತ್ರ ಆಹಾರ. ನಮ್ಮ ದೇಶದಲ್ಲಿ ಆಹಾರದಿಂದ ಬಹುದೂರ ಇಟ್ಟ ವಸ್ತುಗಳೆಲ್ಲ ವಿದೇಶದಲ್ಲಿ ಖಾದ್ಯದ ರೂಪದಲ್ಲಿ ಹೊಟ್ಟೆ ಸೇರುತ್ತವೆ. ಚೀನಾ ಇದ್ರಲ್ಲಿ ಮುಂದಿದೆ ಎಂಬುದು ಕರೋನಾ ಸಮಯದಲ್ಲಿ ಜಗಜ್ಜಾಹಿರಾಗಿದೆ. ಚೀನಾದ ಜೊತೆ ಇನ್ನೂ ಕೆಲ ದೇಶಗಳ ಆಹಾರ ನಮ್ಮನ್ನು ದಂಗಾಗಿಸುತ್ತೆ. ನಾವಿಂದು ಕೆಲ ದೇಶಗಳ ಆಹಾರ ಪದ್ಧತಿ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಹುರಿದ (Fried) ಡ್ರಾಗನ್ಫ್ಲೈ : ಚಿಕ್ಕವರಿರುವಾಗ ಗಿಡದ ಮೇಲೆ ಕುಳಿತುಕೊಳ್ತಿದ್ದ ಈ ಚಿಟ್ಟೆಯನ್ನು ಹಿಡಿದು, ಅದ್ರ ಬಾಲಕ್ಕೆ ದಾರ ಕಟ್ಟಿ ಆಟ ಆಡ್ತಿದ್ದಂತಹ ಡ್ರಾಗನ್ಫ್ಲೈ (dragonfly) ಅನ್ನು ಹುರಿದು ತಿನ್ನುವ ದೇಶವಿದೆ. ಇದನ್ನು ಚೀನಾದ ನೈಋತ್ಯ ಪ್ರಾಂತ್ಯದಲ್ಲಿ ಕಾಣಬಹುದು. ಅಲ್ಲಿನ ಜನರು ಚಿಟ್ಟೆಯನ್ನು ಸುಟ್ಟು ತಿನ್ನುತ್ತಾರೆ.
ರಸ್ತೆ ಬದಿ ಆಹಾರ ಮಾರಿ ಕೋಟ್ಯಾಧಿಪತಿಯಾದ ವ್ಯಕ್ತಿ, BMW ಕಾರಿನಲ್ಲ ಬಂದು ಫುಡ್ ಸರ್ವ್ ಮಾಡ್ತಾರೆ!
ಹುರಿದ ಕಂಬಳಿಹುಳ (Caterpillar) : ಈಶಾನ್ಯ ಚೀನಾ (China) ದ ಜನರು ಹುರಿದ ಕಂಬಳಿಹುಳ ತಿನ್ನಲು ಇಷ್ಟಪಡುತ್ತಾರೆ. ಅಡುಗೆ ಮಾಡುವ ಮೊದಲು ಇವುಗಳನ್ನು ನೀರಿನಲ್ಲಿ ನೆನೆಸಲಾಗುತ್ತದೆ. ನಂತರ ಅವುಗಳನ್ನು ಈರುಳ್ಳಿ ಮತ್ತು ಶುಂಠಿಯೊಂದಿಗೆ ಬಡಿಸಲಾಗುತ್ತದೆ.
ಈ ದೇಶದಲ್ಲಿ ಸಂಬಳ ರೂಪದಲ್ಲಿ ಸಿಗ್ತಿತ್ತು ಬೆಳ್ಳುಳ್ಳಿ!
ಕಪ್ಪು ಇರುವೆ (Ant) : ಯುನ್ನಾನ್ ಪ್ರಾಂತ್ಯದಲ್ಲಿ, ಹಂದಿಯ ಕಾಲಿನ ಜೊತೆ ಕಪ್ಪು ಇರುವೆಗಳನ್ನು ಬೇಯಿಸಲಾಗುತ್ತದೆ. ಸೂಪ್ ಅನ್ನು ಹಂದಿಯ ಕಾಲುಗಳು, ಕಪ್ಪು ಕೋಳಿ ಮತ್ತು ಗೋಮಾಂಸದಿಂದ ತಯಾರಿಸಲಾಗುತ್ತದೆ.
ಹುರಿದ ಹಂದಿಯ ಕಣ್ಣುಗಳು : ವಿಯೆಟ್ನಾಂ ಗಡಿಯಲ್ಲಿರುವ ದಕ್ಷಿಣ ಚೀನಾದ ಗುವಾಂಗ್ಸಿಯಲ್ಲಿ ಇದು ಸಾಂಪ್ರದಾಯಿಕ ಭಕ್ಷ್ಯವಾಗಿದೆ. ಮೊದಲು ಹಂದಿಯ ಕಣ್ಣುಗಳನ್ನು ಹುರಿಯಲಾಗುತ್ತದೆ. ನಂತರ ಉಪ್ಪು, ಎಳ್ಳು ಮತ್ತು ಮೆಣಸಿನಕಾಯಿಯಂತಹ ವಿವಿಧ ಮಸಾಲೆಗಳೊಂದಿಗೆ ಬೇಯಿಸಲಾಗುತ್ತದೆ.
ಹಸುವಿನ ಸಗಣಿ ಸೂಪ್ : ಈ ಖಾದ್ಯವು ನೈಋತ್ಯ ಚೀನಾದ ಗೈಝೌ ಪ್ರಾಂತ್ಯದಿಂದ ಬಂದಿದೆ. ಇದನ್ನು ಹಸುವಿನ ಮಲದಿಂದ ತಯಾರಿಸಲಾಗುತ್ತದೆ, ಆದರೆ ಈ ಮಲವು ಹಸುವಿನ ಸಗಣಿ ಅಲ್ಲ. ಬದಲಿಗೆ, ಇದು ಹಸುವಿನ ಹೊಟ್ಟೆಯಲ್ಲಿ ಕಂಡುಬರುವ ದ್ರವವಾಗಿದೆ.
ಒಣಗಿದ ಇಲಿ : ಆಗ್ನೇಯ ಚೀನಾದ ಫುಜಿಯಾನ್ ಪ್ರಾಂತ್ಯದ ಜನರು ಒಣಗಿದ ಇಲಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಬೆಳೆಗಳನ್ನು ಇಲಿಗಳಿಂದ ರಕ್ಷಿಸಲು ಮುಂದಾದ ಸಮಯದಲ್ಲಿ ರೈತರು ಹಿಡಿದ ಇಲಿಯನ್ನು ತಿನ್ನಲು ಶುರು ಮಾಡಿದ್ರು. ಈ ಇಲಿಗಳನ್ನು ಈಗ ಹೆಚ್ಚಿನ ಪ್ರೋಟೀನ್‌ಗಾಗಿ ಬಳಸಲಾಗುತ್ತದೆ. ಮಕ್ಕಳು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಆ ಸಮಸ್ಯೆಗೆ ಇದು ಮದ್ದು ಎಂದು ನಂಬಲಾಗಿದೆ.
ಸಿಗಡಿ ಸಲಾಡ್ : ಒಣ ಸಿಗಡಿಗಳ ಜೊತೆಗೆ ಟೊಮ್ಯಾಟೊ, ಕಡಲೆಕಾಯಿ ಮತ್ತು ಮೆಣಸಿನಕಾಯಿಗಳನ್ನು ಇದಕ್ಕೆ ಸೇರಿಸಲಾಗುತ್ತದೆ. ಇದು ಲಾವೋಸ್ ಮತ್ತು ಥೈಲ್ಯಾಂಡ್‌ನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ.
ಆಕ್ಟೋಪಸ್ ಐಸ್ ಕ್ರೀಮ್ : ಹೆಸರು ಕೇಳಿದ್ರೆ ಅಚ್ಚರಿ ಆಗ್ಬಹುದು. ಆದ್ರೆ ಆಕ್ಟೋಪಸ್ ಗೆ ಅನೇಕ ಕಾಲುಗಳಿರುವ ಕಾರಣ ಇದ್ರ ಐಸ್ ಕ್ರೀಂ ಜನರಿಗೆ ತುಂಬಾ ಇಷ್ಟ. ಆಕ್ಟೋಪಸ್ ಐಸ್ ಕ್ರೀಂ ಮಾಡಲು ಮೊದಲು ಅದನ್ನು ಬೇಯಿಸಲಾಗುತ್ತದೆ. ನಂತ್ರ ಐಸ್ ಕ್ರೀಂನಲ್ಲಿ ಬೆರೆಸಲಾಗುತ್ತದೆ. ಹಾಲು, ಸಕ್ಕರೆ, ವೆನಿಲಾ ಎಸೆನ್ಸ್ ಅನ್ನು ಇದಕ್ಕೆ ಪ್ರತ್ಯೇಕವಾಗಿ ಸೇರಿಸಲಾಗುತ್ತದೆ. ಇದನ್ನು ಜಪಾನ್ ಜನರು ತಿನ್ನಲು ಹೆಚ್ಚು ಇಷ್ಟಪಡ್ತಾರೆ.