ಅಯ್ಯಬ್ಬೋ! ಪುಣೆಯಲ್ಲಿ ಸೊಳ್ಳೆಗಳ ಸುಂಟರಗಾಳಿ; ಇಲ್ಲಿದೆ ವಿಡಿಯೋ
ಮಹಾರಾಷ್ಟ್ರದ ಪುಣೆಯ ಮುತಾ ನದಿಯ ಮೇಲೆ ಅಸಾಮಾನ್ಯ ಸೊಳ್ಳೆ ಸುಂಟರಗಾಳಿಗಳು ಕಂಡುಬಂದಿದ್ದು, ಕೋಟಿಗಟ್ಟಲೆ ಸೊಳ್ಳೆಗಳು ಸುಂಟರಗಾಳಿಯಾಗಿ ಸುತ್ತುವುದನ್ನು ನೋಡಿ ನಿವಾಸಿಗಳು ಭಯಭೀತರಾಗಿದ್ದಾರೆ.
ಮಹಾರಾಷ್ಟ್ರದ ಪುಣೆಯ ಮುತಾ ನದಿಯ ಮೇಲೆ ಅಸಾಮಾನ್ಯ ಸೊಳ್ಳೆ ಸುಂಟರಗಾಳಿಗಳು ಸುತ್ತುತ್ತಿರುವುದು ಕಂಡುಬಂದಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಗರದ ನೈಟೈ ಲೈಫ್ ಈಗ ಇನ್ನೂ ಹೆಚ್ಚು ಝೇಂಕರಿಸುತ್ತಿದೆ ಎಂದು ನೆಟ್ಟಿಗರು ಹಾಸ್ಯ ಸಿಡಿಸುತ್ತಿದ್ದಾರೆ.
ಹೌದು, ಪುಣೆಯ ಸ್ಕೈಲೈನ್‌ನಲ್ಲಿ ಗುಯ್‌ಗುಡುತ್ತಾ ಸೊಳ್ಳೆಗಳು ಸುಂಟರಗಾಳಿಯಾಗಿ ಕೇಶವನಗರ ಮತ್ತು ಖಾರಾಡಿ ಸ್ಥಳದ ಮೇಲೆ ಹಾರಿದವು. ಘಟನೆಯ ವೀಡಿಯೊಗಳು ವೈರಲ್ ಆಗಿವೆ. ಭಯಭೀತರಾದ ನೆಟಿಜನ್‌ಗಳು ಫ್ಲೇಮ್‌ಥ್ರೋವರ್‌ಗಳಿಗೆ ಕರೆ ನೀಡಿದ್ದಾರೆ.
ಇಂತಹ ಸೊಳ್ಳೆ 'ಸುಂಟರಗಾಳಿಗಳು' ಮಹಾರಾಷ್ಟ್ರದಲ್ಲಿ ಹೊಸ ದೃಶ್ಯವಲ್ಲವಾದರೂ, ಪುಣೆಯಂತಹ ನಗರ ಪರಿಸರದಲ್ಲಿ ಮುತಾ ನದಿಯ ಮೇಲೆ ಅವು ಸುತ್ತುತ್ತಿರುವುದನ್ನು ನೋಡುವುದು ಅಪರೂಪ. ಇತ್ತೀಚಿನ ಹವಾಮಾನ ಪರಿಸ್ಥಿತಿಗಳು ಕೀಟಗಳಿಗೆ ಅನುಕೂಲಕರ ಸಂತಾನೋತ್ಪತ್ತಿಯನ್ನು ಸೃಷ್ಟಿಸಿವೆ ಎಂದು ವರದಿಯಾಗಿದೆ.
ಇಂದೋರ್: ಒಂದೂವರೆ ತಿಂಗಳಲ್ಲಿ 2.5 ಲಕ್ಷ ಗಳಿಸಿದ ಭಿಕ್ಷುಕಿ! ಇವಳ ಬಳಿ ಇದೆ ಜಮೀನು, ಮನೆ, ಕಾರು..
'ಎಲ್ಲಾ ಜನರಿಗೆ 'ರಿವರ್ ವ್ಯೂ' ಮನೆಗಳು ಬೇಕಲ್ಲ. ಇದೀಗ ಕಿಟಕಿಗಳನ್ನು ಮುಚ್ಚುವ ಸಮಯ,' ಒಬ್ಬ Instagram ಬಳಕೆದಾರರೊಬ್ಬರು ವ್ಯಂಗ್ಯವಾಗಿ ಬರೆದಿದ್ದಾರೆ.
'ದಯವಿಟ್ಟು ರಿವರ್ ವ್ಯೂ ಬದಲಿಗೆ ಸೊಳ್ಳೆ ವೀಕ್ಷಣೆ ಯೋಜನೆಗಳನ್ನು ಈಗಲೇ ಪ್ರಾರಂಭಿಸಿ' ಎಂದು ಮತ್ತೊಬ್ಬರು ಲೇವಡಿ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಕೆಲವರು ಇದನ್ನು 'ಅರೋರಾ ಸೊಳ್ಳೆಗಳು' ಎಂದು ಕರೆದಿದ್ದಾರೆ.
'ಇಲ್ಲಿ ಎಲೆಕ್ಟ್ರಿಕ್ ರಾಕೆಟ್ ನಲ್ಲಿ ಬ್ಯಾಂಡ್ಮಿಂಟನ್ ಶುರು ಹಚ್ಚಿಕೊಳ್ಳಿ,' ಎಂದು ಒಬ್ಬ ಬಳಕೆದಾರ ನಕ್ಕಿದ್ದಾರೆ.
ಮದುವೆ ಎಂದರೆ ವರ್ಕ್ ಶಾಪ್, ಕೀಪ್ ಶಾಪಿಂಗ್ ವೈಫಿ: ವಿವಾಹ ವಾರ್ಷಿಕೋತ್ಸವಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಫನ್ನಿ ವಿಶ್!
ಈ ಎಲ್ಲ ಲೇವಡಿಗಳ ನಡುವೆ, ಬೃಹತ್ ಸೊಳ್ಳೆಗಳ ಸಮೂಹವು ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆಯೂ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಸೊಳ್ಳೆ ಸುಂಟರಗಾಳಿಗಳು ಮಧ್ಯ ಅಮೆರಿಕ ಮತ್ತು ರಷ್ಯಾದಿಂದ ಸಾಮಾನ್ಯವಾಗಿ ಮಳೆಗಾಲದಲ್ಲಿ ವರದಿಯಾಗುತ್ತವೆ.