ಶೇಂಗಾ ಟೊಮ್ಯಾಟೊ ಚಟ್ನಿ ಸವಿದಿದ್ದೀರಾ?

ಶೇಂಗಾ ಟೊಮ್ಯಾಟೊ ಚಟ್ನಿ ಸವಿದಿದ್ದೀರಾ?

Groundnut-Tomato chutney

ಬೇಕಾಗುವ ಸಾಮಾಗ್ರಿಗಳು

-1 ಚಮಚ ಎಣ್ಣೆ

-2 ಬ್ಯಾಡಗಿ ಮೆಣಸು

-1 ಹಸಿ ಮೆಣಸಿನಕಾಯಿ 

-2 ಟೊಮ್ಯಾಟೊ

- ರುಚಿಗೆ ತಕ್ಕಷ್ಟು ಉಪ್ಪು

- ಕಾಲು ಕಪ್ ಕಡ್ಲೆಕಾಯಿ ಬೀಜ 

- ಹುಣಸೆ  ಹಣ್ಣು

- ಸ್ವಲ್ಪ ನೀರು 

- ಚಿಟಿಕೆ ಸಾಸಿವೆ

-  ಸ್ವಲ್ಪ ಉದ್ದಿನಬೇಳೆ 

- ಕರಿಬೇವು

ಮಾಡುವ ವಿಧಾನ:

ಒಂದು ಪ್ಯಾನ್‌ಗೆ  ಎಣ್ಣೆ ಹಾಕಿ ಅದಕ್ಕೆ ಬ್ಯಾಡಗಿ ಮೆಣಸು,  ಹಸಿ ಮೆಣಸಿನಕಾಯಿ ಹಾಕಿ ಹುರಿದು, ಅದಕ್ಕೆ ಹೆಚ್ಚಿದ ಎರಡು ಟೊಮ್ಯಾಟೊ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಅದು ಮೆತ್ತಗಾಗುವವರೆಗೂ ಬೇಯಿಸಿ. 1/4 ಕಪ್ ಹುರಿದ ಸಿಪ್ಪೆ ತೆಗೆದ ಕಡ್ಲೆಕಾಯಿ ಬೀಜ, ಹುಣಸೆ ಹಣ್ಣು ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿ. ಅದಕ್ಕೆ ಸಾಸಿವೆ, ಉದ್ದಿನಬೇಳೆ, ಕರಿಬೇವಿನ ಒಗ್ಗರಣೆ ಕೊಟ್ಟರೆ ಶೇಂಗಾ-ಟೊಮ್ಯಾಟೊ ಚಟ್ನಿ ಸವಿಯಲು ಸಿದ್ಧ. 

Latest Videos
Follow Us:
Download App:
  • android
  • ios