ಈ ಲೇಖನದಲ್ಲಿ ಗಿಡವನ್ನು ಹಸಿರಾಗಿಡುವುದಲ್ಲದೆ, ಸಾಕಷ್ಟು ಹಸಿರು ಮೆಣಸಿನಕಾಯಿಗಳನ್ನು ನೀಡುವ ಒಂದು ಸುಲಭವಾದ ಮನೆಮದ್ದನ್ನು ನೋಡಿಕೊಂಡು ಬರೋಣ...
Green chili plant care tips: ಮಳೆಯಲ್ಲಿ ಮೆಣಸಿನ ಗಿಡವನ್ನು ಸರಿಯಾಗಿ ನೋಡಿಕೊಂಡಿದ್ದೇ ಆದಲ್ಲಿ, ನಮ್ಮ ದೇಸಿ ಗೊಬ್ಬರನ್ನು ಉಪಯೋಗಿಸಿದ್ದೇ ಆದಲ್ಲಿ ನಿಮ್ಮ ಬಾಲ್ಕನಿ ಅಥವಾ ಪಾಟ್‌ನಲ್ಲಿ ಸಾಕಷ್ಟು ಹಸಿರು ಮೆಣಸಿನಕಾಯಿಗಳು ನೇತಾಡುವುದನ್ನು ನೋಡಬಹುದು.
ಸಾಮಾನ್ಯವಾಗಿ ಮಳೆಗಾಲ ಹಸಿರುಮೆಣಸಿನ ಕೃಷಿಗೆ ತುಂಬಾ ಒಳ್ಳೆಯದು ಅಂತಾರೆ. ಆದರೆ ಕೆಲವೊಮ್ಮೆ ಮೆಣಸಿನಕಾಯಿ ಗಿಡವು ಚೆನ್ನಾಗಿ ಎಲೆಗಳನ್ನು ನೀಡುತ್ತದೆಯೋ ಹೊರತು ಫಲವಂತೂ ನೀಡುವುದಿಲ್ಲ. ನೀವು ಕಾಯುತ್ತಲೇ ಇರುತ್ತೀರಿ. ಸಸ್ಯವು ಸಹ ಹಸಿರಾಗಿ ಕಾಣುತ್ತಲೇ ಇರುತ್ತದೆ. ಆದರೆ ಒಂದೇ ಒಂದು ಮೆಣಸಿನಕಾಯಿ ಸಹ ಕಾಣಿಸಲ್ಲ.
ಮೆಣಸಿನಕಾಯಿ ಬಿಡುತ್ತಿಲ್ಲ ಅಂದರೆ ಇದಕ್ಕೆ ಕಾರಣ ಪೋಷಣೆಯ ಕೊರತೆ. ಹೌದು, ಸರಿಯಾಗಿ ಗೊಬ್ಬರ ಹಾಕದಿರುವುದು ಅಥವಾ ಕಳಪೆ ಮಣ್ಣು ಇದೆಲ್ಲವೂ ಕಾಯಿ ಬಿಡದಿರುವುದಕ್ಕೆ ಕಾರಣವಾಗುತ್ತವೆ. ಆದ್ದರಿಂದ ಈ ಲೇಖನದಲ್ಲಿ ಗಿಡವನ್ನು ಹಸಿರಾಗಿಡುವುದಲ್ಲದೆ, ಸಾಕಷ್ಟು ಹಸಿರು ಮೆಣಸಿನಕಾಯಿಗಳನ್ನು ನೀಡುವ ಒಂದು ಸುಲಭವಾದ ಮನೆಮದ್ದನ್ನು ನೋಡಿಕೊಂಡು ಬರೋಣ...
ಮಣ್ಣಿನಲ್ಲೂ ಇರುತ್ತೆ ಸಮಸ್ಯೆ
ಕೆಲವೊಮ್ಮೆ ಸಮಸ್ಯೆ ಗೊಬ್ಬರದಲ್ಲಿ ಇರಲ್ಲ, ಮಣ್ಣಿನಲ್ಲೂ ಇರುತ್ತೆ. ಮಣ್ಣು ತುಂಬಾ ಗಟ್ಟಿಯಾಗಿದ್ದರೆ ಅಥವಾ ನೀರನ್ನು ಹಿಡಿದಿಟ್ಟುಕೊಂಡರೆ, ಸಸ್ಯವು ಕಾಯಿಯನ್ನು ಉತ್ಪಾದಿಸುವುದಿಲ್ಲ. ಮೆಣಸಿನಕಾಯಿ ಸಸ್ಯಗಳಿಗೆ ಸಡಿಲವಾದ, ನೀರು ಬಸಿದು ಹೋಗುವ ಮತ್ತು ಸಾವಯವ ಪದಾರ್ಥಗಳಿಂದ ಸಮೃದ್ಧವಾಗಿರುವ ಮಣ್ಣು ಬೇಕಾಗುತ್ತದೆ.
ಮಣ್ಣನ್ನು ತಯಾರಿಸಲು ಸರಿಯಾದ ಮಾರ್ಗ
50% ತೋಟದ ಮಣ್ಣು
25% ಹಸುವಿನ ಗೊಬ್ಬರ ಅಥವಾ ಎರೆಹುಳು ಗೊಬ್ಬರ (ವರ್ಮಿಕಾಂಪೋಸ್ಟ್)
25% ಮರಳು ಅಥವಾ ಕೋಕೋಪೀಟ್
ಬೇವಿನ ಹಿಂಡಿ ಅಥವಾ ಮರದ ಬೂದಿ
ಈ ಮಣ್ಣನ್ನು ಒಂದು ಕುಂಡದಲ್ಲಿ ತುಂಬಿಸಿ. ಇದರಲ್ಲಿ ಗಿಡವನ್ನು ನೆಡಿ. ಇದು ಗಿಡದ ಬೇರುಗಳನ್ನು ಹರಡಿ ಮೆಣಸಿನಕಾಯಿ ಬೆಳೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಹೂವುಗಳು ಉದುರುವುದನ್ನು ತಡೆಯಲು
ಕೆಲವೊಮ್ಮೆ ಮೆಣಸಿನ ಗಿಡದಲ್ಲಿ ಹೂವುಗಳು ಕಾಣಿಸಿಕೊಳ್ಳುತ್ತವೆ. ಆದರೆ ಅವು ಕಾಯಿ ಬರುವ ಮೊದಲೇ ಉದುರಿ ಸಾಯುತ್ತವೆ. ಇದು ತೇವಾಂಶದ ಕೊರತೆ, ನೀರಿನ ಸಮಸ್ಯೆ ಅಥವಾ ತಾಪಮಾನದಲ್ಲಿನ ಬದಲಾವಣೆಯಿಂದಾಗಿ ಸಂಭವಿಸುತ್ತದೆ.
ಇದನ್ನು ನಿಲ್ಲಿಸಲು ಪ್ರತಿದಿನ ಬೆಳಗ್ಗೆ ಲಘುವಾಗಿ ನೀರು ಹಾಕಿ, ಆದರೆ ಅತಿಯಾಗಿ ನೀರು ಹಾಕಬೇಡಿ.
ಹೂಬಿಡುವ ಸಮಯದಲ್ಲಿ ಬಾಳೆಹಣ್ಣಿನ ಸಿಪ್ಪೆಯ ಗೊಬ್ಬರದಂತಹ ಪೊಟ್ಯಾಶ್ ಆಧಾರಿತ ಗೊಬ್ಬರವನ್ನು ಹಾಕಿ.
ಪ್ರತಿ 10-15 ದಿನಗಳಿಗೊಮ್ಮೆ ಬಯೋಎಂಜೈಮ್ ಅಥವಾ ಸೀವೀಡ್ ಸಿಂಪಡಿಸಿ. ಇದು ಹೂವುಗಳು ಬದುಕುಳಿಯಲು ಅನುವು ಮಾಡಿಕೊಡುತ್ತದೆ ಮತ್ತು ಕಾಯಿಯ ರಚನೆಯ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.
ದೇಸಿ ಗೊಬ್ಬರವನ್ನು ತಯಾರಿಸುವುದು ಹೇಗೆ?
ಗಿಡದಲ್ಲಿ ಒಂದು ಕಾಯಿಯೂ ಬಿಡುತ್ತಿಲ್ಲ ಎಂದು ಚಿಂತಿಸುವ ಬದಲು ಬೇರುಗಳಿಗೆ ಈ ದೇಸಿ ಗೊಬ್ಬರ ಹಾಕಿ. ಮೆಣಸಿನಕಾಯಿ ಬಿಡಲು ಪ್ರಾರಂಭಿಸುತ್ತದೆ. ನೆನಪಿಡಿ, ಮೆಣಸಿನ ಕಾಯಿ ಗಿಡವು ಮೆಣಸಿನಕಾಯಿಗಳನ್ನು ಬಿಟ್ಟು ಎಲೆಗಳನ್ನು ಮಾತ್ರ ನೀಡುತ್ತಿದ್ದರೆ, ಸಸ್ಯಕ್ಕೆ ಸರಿಯಾದ ಪೋಷಣೆ ಸಿಗುತ್ತಿಲ್ಲ ಎಂದು ಅರ್ಥಮಾಡಿಕೊಳ್ಳಿ. ನೀವೀಗ ಮಾರುಕಟ್ಟೆಯಿಂದ ದುಬಾರಿ ಗೊಬ್ಬರಗಳ ಬದಲಿಗೆ ಮನೆಯಲ್ಲಿ ತಯಾರಿಸಿದ ಗೊಬ್ಬರವನ್ನು ಬಳಸಬಹುದು.
ದೇಸಿ ಗೊಬ್ಬರಗಳಿವು…
ಮಸ್ಟರ್ಡ್ ಕೇಕ್: ಇದು ಮೆಣಸಿನಕಾಯಿ ಗಿಡಕ್ಕೆ ಅಗತ್ಯವಾದ ಸಾರಜನಕದಿಂದ ಸಮೃದ್ಧವಾಗಿದೆ.
ಹಸುವಿನ ಗೊಬ್ಬರ: ಇದನ್ನು ಮಿಶ್ರಣ ಮಾಡಿ ಪ್ರತಿ 15 ದಿನಗಳಿಗೊಮ್ಮೆ ಬೇರುಗಳ ಬಳಿ ಹಾಕಿ.
ಮಜ್ಜಿಗೆ ಅಥವಾ ಒಡೆದ ಹಾಲು: 1:4 ಅನುಪಾತದಲ್ಲಿ ನೀರಿನೊಂದಿಗೆ ಬೆರೆಸಿ ಸಿಂಪಡಿಸಿ. ಇದು ಸಸ್ಯವು ಅರಳಲು ಸಹಾಯ ಮಾಡುತ್ತದೆ.
ಈ ದೇಸಿ ಗೊಬ್ಬರವನ್ನು ಸಸ್ಯದ ಬೇರುಗಳ ಬಳಿ ಸುರಿಯುವುದರಿಂದ ಹೂವುಗಳು ಅರಳುತ್ತವೆ ಮತ್ತು ಮೆಣಸಿನಕಾಯಿಗಳು ಬರಲು ಪ್ರಾರಂಭಿಸುತ್ತವೆ.
ಇತರ ಪ್ರಮುಖ ಸಲಹೆಗಳು
ಸೂರ್ಯನ ಬೆಳಕು ಮುಖ್ಯ: ಮೆಣಸಿನಕಾಯಿ ಗಿಡಕ್ಕೆ ಕನಿಷ್ಠ 5-6 ಗಂಟೆಗಳ ಕಾಲ ನೇರ ಸೂರ್ಯನ ಬೆಳಕು ಬೇಕಾಗುತ್ತದೆ. ಕಾಯಿ ನೆರಳಿನಲ್ಲಿ ಕಡಿಮೆ ಕಾಲ ಇರುತ್ತದೆ.
ಎಲೆ ತೆಗೆದುಹಾಕಿ: ಕಾಲಕಾಲಕ್ಕೆ ಹಳೆಯ ಮತ್ತು ಹಳದಿ ಎಲೆಗಳನ್ನು ತೆಗೆದುಹಾಕಿ.
ಕೀಟಗಳಿಂದ ರಕ್ಷಿಸಿ: ಬೇವಿನ ಎಣ್ಣೆ ಮತ್ತು ಸೋಪು ನೀರನ್ನು ಬೆರೆಸಿ ಸಿಂಪಡಿಸಿದರೆ ಎಲೆಗಳ ಮೇಲಿನ ಕೀಟಗಳು ಓಡಿಹೋಗುತ್ತವೆ.