Viral Video: ಭಾರೀ ಪ್ಲಾನ್, ಸಿಕ್ಕಾಪಟ್ಟೆ ತಯಾರಿ, ಆದ್ರೂ ಎಲ್ಲವೂ ಫ್ಲಾಪ್ Wedding entry: ದೊಪ್ಪಂತ ಕೆಳಗೆ ಬಿದ್ರು ನೋಡಿ ವಧೂ ವರರು..!

ಭಾರತೀಯ ಮದುವೆ ಅಬ್ಬರ, ಸಂಭ್ರಮ, ಆಟ, ತಮಾಷೆ, ಊಟ ಬೇರೆಲ್ಲೂ ಸಿಗದು ಬಿಡಿ. ಮದುವೆ ಒಂದು ಭಾರೀ ಅದ್ಧೂರಿಯಾಗಿ ನಡೆಯಲೇ ಬೇಕು. ಖರ್ಚು, ಲೆಕ್ಕ ಲೆಕ್ಕಕ್ಕೇ ಇಲ್ಲ ಮದುವೆಯಲ್ಲಿ. ಎಲ್ಲರಿಗಿಂತ ಸ್ಪೆಷಲ್, ಯುನಿಕ್ ಆಗಿರಬೇಕೆಂಬುದೇ ಕನಸು.

ಅದಕ್ಕೆ ತಕ್ಕಂತೆ ಇವೆಂಟ್ ಮ್ಯಾನೇಜ್‌ಮೆಂಟ್‌ಗಳ ವಿಚಿತ್ರ ಐಡಿಯಾಗಳು, ಅವುಗಳ ಆಡಂಬರವೂ, ಅವುಗಳನ್ನು ವೈರಲ್ ಮಾಡಲು ಶೂಟ್, ವಿಡಿಯೋಗಳೂ.. ಅಂತೂ ಇವೆಲ್ಲವೂ ಭಾರತೀಯ ಮದುವೆಯ ಅದ್ಧೂರಿತನದ ಭಾಗಗಳೇ.

ಇಂಟರ್ನೆಟ್‌ನಲ್ಲಿ ಎಂದಿಗೂ ಫನ್ ಮದುವೆಯ ವೀಡಿಯೊಗಳಿಗೆ ಕೊರತೆ ಇಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಓಡಾಡುತ್ತಿರುವ ಈ ತಮಾಷೆಯ ವೆಡ್ಡಿಂಗ್ ಎಂಟ್ರಿ ಫೇಲ್ ಆಗಿರೋ ಕ್ಲಿಪ್. ವಧುವಿನ ಎಂಟ್ರಿಗೆ ಎಲ್ಲ ಸಿದ್ಧತೆಯಾಗಿ ಜೋಡಿಯಾಗಿ ಕಪಲ್ ಬರುವ ಹೊತ್ತಿಗೆ , ಅತಿಥಿಗಳು ಹೂವುಗಳನ್ನು ಸುರಿಸಲು ಕಾಯುತ್ತಿರುವಾಗ ಹಿನ್ನಲೆಯಲ್ಲಿ ಹಿತವಾದ ರೊಮ್ಯಾಂಟಿಕ್ ಹಾಡು ಪ್ಲೇ ಮಾಡಿದಾಗ ನಿರೀಕ್ಷೆ ಉಲ್ಟಾ ಆಗಿ ಕ್ಷಣಮಾತ್ರದಲ್ಲಿ ಇನ್ನೇನೋ ಆಗಿಬಿಟ್ಟಿದೆ.

ಮದುವೆಗೆ ರೋಡ್ ರೋಲರ್‌ನಲ್ಲಿ ಆಗಮಿಸಿದ ವರ-ವಿಡಿಯೋ ವೈರಲ್!

ಮದುವೆ ಎಂಟ್ರಿಗೆ ಎಲ್ಲರಿಗೂ ಅಚ್ಚರಿಯಾಗೋ ರೀತಿಯಲ್ಲಿ ಏನಾದರೂ ಮಾಡಬೇಕೆಂದು ಪ್ಲಾನ್ ಮಾಡಿ ವರ್ಕೌಟ್ ಮಾಡುವಾಗ ಪ್ಲಾನ್ ವರ್ಕೌಟ್ ಆಗದೆ ಫ್ಲಾಪ್ ಆಗಿದೆ.

ಘಟನೆಯ ವಿಡಿಯೋ ಇದೀಗ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಕ್ಲಿಪ್‌ನಲ್ಲಿ, ವಧು ಮತ್ತು ವರರು ಅಲಂಕಾರಿಕ ಸ್ವಿಂಗ್-ತರಹದ ರಚನೆಯ ಮೇಲೆ ಕುಳಿತು ಮೇಜಿನ ಮೇಲೆ ಸುಳಿದಾಡುತ್ತಿರುವುದನ್ನು ಕಾಣಬಹುದು. ದಂಪತಿ ಅದ್ಧೂರಿ ಪ್ರವೇಶವನ್ನು ಮಾಡಲು ತಯಾರಿ ನಡೆಸುತ್ತಿರುವಾಗ ವಿಸ್ಮಯಗೊಂಡ ಅತಿಥಿಗಳು ಖುಷಿಯಿಂದ ಎದ್ದು ನಿಂತು ಮೇಲೆ ನೋಡುತ್ತಾರೆ.

View post on Instagram

ಸಪೋರ್ಟ್ ಇಲ್ಲದ ಸ್ವಿಂಗ್ ಬ್ಯಾಲೆನ್ಸ್ ಕಳೆದುಕೊಳ್ಳುತ್ತದೆ. ರಪ್ಪನೆ ಬಾಗಿದ ಸ್ವಿಂಗ್‌ನಿಂದು ವಧು ಮತ್ತು ವರ ಕೆಳಗೆ ಬೀಳುತ್ತಾರೆ. ಇಬ್ಬರನ್ನೂ ಕೆಳಗೆ ಬೀಳಿಸಿ ಸ್ವಿಂಗ್ ಮುಂದಕ್ಕೆ ಓರೆಯಾಗುತ್ತದೆ. ಅಪಘಾತದ ನಂತರ, ಅತಿಥಿಗಳು ದಂಪತಿಗಳಿಗೆ ಸಹಾಯ ಮಾಡಲು ಓಡುತ್ತಾರೆ.

ಈ ವೀಡಿಯೊ ನೆಟ್ಟಿಗರನ್ನು ನಗುವಲ್ಲಿ ಮುಳುಗಿಸಿದೆ. ಕ್ಲಿಪ್ ಇದುವರೆಗೆ 2,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಬಹಳಷ್ಟು ಜನ ಅಜಾಗೃತೆ ಬಗ್ಗೆ ಕಮೆಂಟ್ ಮಾಡಿದರೆ ಇನ್ನೂ ಕೆಲವರು ಇಷ್ಟೆಲ್ಲಾ ಸರ್ಕಸ್ ಬೇಕಿತ್ತಾ ಎಂದು ತಮಾಷೆ ಮಾಡಿದ್ದಾರೆ.