ಉತ್ತಮ ಸಂಬಳ ಮತ್ತು ಕೆಲಸದ ಭದ್ರತೆಯ ಜೊತೆಗೆ ಆರಾಮದಾಯಕ ಜೀವನಕ್ಕಾಗಿ ಪ್ರತಿಯೊಬ್ಬರೂ ಸರ್ಕಾರಿ ಉದ್ಯೋಗವನ್ನು ಬಯಸುತ್ತಾರೆ. ಶಿಕ್ಷಕರು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಿಗಳಿಗೆ ವರ್ಷವಿಡೀ ಅತಿ ಹೆಚ್ಚು ರಜೆಗಳು ಸಿಗುತ್ತವೆ.
ಪ್ರತಿಯೊಬ್ಬರು ಸರ್ಕಾರಿ ಉದ್ಯೋಗಗಳನ್ನ ಬಯಸುತ್ತಾರೆ. ಉತ್ತಮ ಸಂಬಳ, ಕೆಲಸದ ಭದ್ರತೆಯಿಂದ ಮಾತ್ರವಲ್ಲ, ರಜಾ ದಿನಗಳು, ನೌಕರಿ-ಜೀವನ ಆರಾಮಾಗಿ ಬ್ಯಾಲೆನ್ಸ್ ಮಾಡುವ ಕಾರಣಕ್ಕೆ ಸರ್ಕಾರಿ ನೌಕರಿ ಪಡೆಯಲು ತುಂಬಾ ಕಷ್ಟ ಪಡುತ್ತಾರೆ. ಒಮ್ಮೆ ಸರ್ಕಾರಿ ನೌಕರಿ ಸಿಕ್ಕಿತೆಂದರೆ ಜೀವನಪೂರ್ತಿ ಚಿಂತೆಯಿಲ್ಲದೆ ಆರಾಮದಾಯ ಜೀವನ ಸಾಗಿಸಬಹುದು ಎಂಬ ನಂಬಿಕೆ.
ಭಾರತದಲ್ಲಿ ಕೆಲವು ಸರ್ಕಾರಿ ಹುದ್ದೆಗಳಲ್ಲಿ ಉದ್ಯೋಗಿಗಳಿಗೆ ವರ್ಷವಿಡೀ ಸಾಕಷ್ಟು ರಜಾದಿನಗಳು ಸಿಗುತ್ತವೆ ಎಂಬುದು ನಿಮಗೆ ಗೊತ್ತೇ? ಪ್ರವೈಟ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಮೈ ಕೈತುಂಬಾ ಕೆಲಸ, ಒತ್ತಡದ ಜೀವನ, ಅನಿಶ್ಚಿತ ಉದ್ಯೋಗ ಇದೆಲ್ಲದರ ಟೆನ್ಶನ್‌ನಲ್ಲಿ ಒಂದು ದಿನ ರಜೆ ಸಿಕ್ಕರೆ ಪುಣ್ಯವೇ. ಹೀಗಿರುವಾಗ ಸರ್ಕಾರದ ಕೆಲವು ಹುದ್ದೆಗಳಲ್ಲಿ ಸಾಕಷ್ಟು ರಜೆಗಳು ಸಿಗುತ್ತವೆ. ಈ ರಜಾದಿನಗಳು ಇಲಾಖೆಗಳಿಂದ ಇಲಾಖೆಗಳಿಗೆ ಬೇರೆಬೇರೆಯಾಗಿರುತ್ತದೆ. ಆದರೆ ಹೆಚ್ಚು ರಜಾದಿನಗಳನ್ನು ನೀಡುವ ಸರ್ಕಾರಿ ಉದ್ಯೋಗಗಳು ಯಾವುದು ಗೊತ್ತೆ? ಇಲ್ಲಿದೆ ನೋಡಿ ವಿವರ.
ಶಿಕ್ಷಕರು, ಉಪನ್ಯಾಸಕ ಹುದ್ದೆಗಳು
ಸರ್ಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಶಾಲಾ ಶಿಕ್ಷಕರು ಮತ್ತು ಪ್ರಾಧ್ಯಾಪಕರು ಅತಿ ಹೆಚ್ಚು ರಜಾದಿನಗಳನ್ನು ಪಡೆಯುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಬೇಸಿಗೆ, ಚಳಿಗಾಲ ಮತ್ತು ಹಬ್ಬದ ರಜೆಗಳ ಜೊತೆಗೆ ಅವರಿಗೆ ಇತರ ರಜೆಗಳು ಸಹ ಸಿಗುತ್ತವೆ. ಈಗ ನೋಡಿ ದಸರಾ ಬಂದಿದೆ ಶಿಕ್ಷಕರಿಗೆ ಇಪ್ಪತ್ತು ದಿನ ರಜೆ ಘೋಷಿಸಲಾಗಿದೆ. ಇನ್ನು ಪರೀಕ್ಷೆ, ಮೌಲ್ಯಮಾಪನ ಜೊತೆಗೆ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದ್ದರೂ ಅವರು ಇತರ ಅನೇಕ ಸರ್ಕಾರಿ ಕೆಲಸಗಳಿಗಿಂತ ಹೆಚ್ಚಿನ ರಜೆಗಳನ್ನು ಪಡೆಯುತ್ತಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳು
ಸಚಿವಾಲಯ ಸೇರಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ನಿಯಮಿತವಾಗಿ ಸರ್ಕಾರಿ ರಜಾದಿನಗಳು ವಾರಾಂತ್ಯ, ವೈಯಕ್ತಿಕ ರಜೆ (EL) ಪಡೆಯುತ್ತಾರೆ. ಈ ಹುದ್ದೆಯ ನೌಕರರು ಸಾಮಾನ್ಯವಾಗಿ ಕೆಲಸ-ವೈಯಕ್ತಿಕ ಜೀವನ ಬ್ಯಾಲೆನ್ಸ್ ನಿಂದಾಗಿ ಆರಾಮದಾಯಕ ಜೀವನ ಅನುಭವಿಸುತ್ತಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗಗಳು
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರ ರಜೆಗಳಿರುತ್ತವೆ. ಇದರೊಂದಿಗೆ ಹಾಲಿಡೇ ಕೂಡ ದೊರೆಯುತ್ತವೆ. ಗಳಿಕೆ ರಜೆ, ಇತರ ರಜೆ ಸೌಲಭ್ಯಗಳು ಸಹ ಸಿಗುತ್ತದೆ. ಇವರು ಕೂಡ ಕೆಲಸ-ಲೈಫ್ ಬ್ಯಾಲೆನ್ಸ್ ಮಾಡಲು ಬ್ಯಾಂಕಿಂಗ್ ಉದ್ಯೋಗ ಪಡೆಯಲು ಪ್ರತಿಯೊಬ್ಬರು ಹಾತೊರೆಯುತ್ತಾರೆ.
ಸರ್ಕಾರಿ ಉದ್ಯೋಗ ಪಡೆಯಲು ಸಾಕಷ್ಟು ಸ್ಪರ್ಧೆ
ಈ ಕಾರಣಕ್ಕೆ ಇಂದು ಸರ್ಕಾರಿ ಹುದ್ದೆ ಪಡೆಯುವುದು ಅಷ್ಟು ಸುಲಭವಲ್ಲ. ಸಾವಿರ ಹುದ್ದೆಗಳಿಗೆ ಲಕ್ಷಾಂತರ ಅರ್ಜಿಗಳು ಬರುತ್ತವೆ. ಅದರಲ್ಲಿ ಪ್ರತಿಯೊಬ್ಬರು ಒಳ್ಳೆಯ ತರಬೇತಿ, ತಯಾರಿ ನಡೆಸಿಯೇ ಬಂದಿರುತ್ತಾರೆ. ಹೀಗಾಗಿ ಇಂದು ಸರ್ಕಾರಿ ಹುದ್ದೆಗಳಿಗೆ ತೀವ್ರ ಪೈಪೋಟಿ ಇದೆ. ಇದಕ್ಕೆ ಸಾಕಷ್ಟು ಶ್ರಮ ಬೇಕಾಗುತ್ತದೆ. ಸರ್ಕಾರಿ ಉದ್ಯೋಗವನ್ನು ಪಡೆಯಲು ಅನೇಕ ವಿದ್ಯಾರ್ಥಿಗಳು ವರ್ಷಗಟ್ಟಲೇ ಸ್ಟಡಿ ಮಾಡುವುದು ಕಾಣಬಹುದು. ಒಮ್ಮೆ ಸರ್ಕಾರಿ ಉದ್ಯೋಗ ಸಿಕ್ಕಿದ್ರೆ ಮುಂದಿನ ಜೀವನ ಆರಾಮದಾಯವಾಗಿ ಕಳೆಯಬಹುದು.
ಸರ್ಕಾರಿ ನೌಕರಿಯಲ್ಲಿ ಖಾಸಗಿ ಕೆಲಸಕ್ಕಿಂತ ಒತ್ತಡ ಕಡಿಮೆ. ಇದರೊಂದಿಗೆ ಸರ್ಕಾರಿ ನೌಕರರು ವರ್ಷವಿಡೀ ಸಾಕಷ್ಟು ರಜಾದಿನಗಳನ್ನು ಪಡೆಯುತ್ತಾರೆ. ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ವರ್ಷವಿಡೀ ಸಾಕಷ್ಟು ರಜಾದಿನಗಳು ಸಿಗುತ್ತವೆ. ಅದಕ್ಕಾಗಿಯೇ ಅನೇಕ ವಿದ್ಯಾರ್ಥಿಗಳು ಬ್ಯಾಂಕ್‌ಗಳಲ್ಲಿ ಉದ್ಯೋಗಗಳನ್ನು ಪಡೆಯಲು ಶ್ರಮ ಪಡುತ್ತಾರೆ. ಸರ್ಕಾರಿ ಬ್ಯಾಂಕ್‌ಗಳಲ್ಲಿ ಭಾನುವಾರದ ಜೊತೆಗೆ, ಅವರಿಗೆ ಎರಡನೇ ಮತ್ತು ನಾಲ್ಕನೇ ಶನಿವಾರವೂ ರಜೆ ಸಿಗುತ್ತದೆ.


