- ಸಾಫ್ಟ್‌ವೇರ್ ಎಂಜಿನೀಯರಿಂಗ್ ಇಂಟರ್ನ್‌ಶಿಪ್ 2018 ಯೋಜನೆಗೆ ಅರ್ಹ ಅಭ್ಯರ್ಥಿಗಳ ಹುಡುಕಾಟದಲ್ಲಿರುವ ಗೂಗಲ್.- ಬಿ.ಟೆಕ್, ಎಂ.ಟೆಕ್ ಪದವೀಧರರು ಉದ್ಯೋಗ ಪಡೆಯಲು ಅರ್ಹರು.

ಬೆಂಗಳೂರು: ಸರ್ಜ್ ಎಂಜಿನ್ ದೈತ್ಯ ಗೂಗಲ್‌‌ನಲ್ಲಿ ಕೆಲಸ ಮಾಡಬೇಕೆಂಬ ಕನಸು ಎಲ್ಲರಲ್ಲಿಯೂ ಸಹಜ. ಆದರೆ, ಸಿಗೋದು ಅಷ್ಟು ಸುಲಭವಲ್ಲವೆಂಬುವುಗು ಎಲ್ಲರಿಗೂ ಗೊತ್ತು. ವಿಶ್ವದ ಪ್ರತಿಷ್ಠಿತ ಕಂಪನಿಯಾದ ಗೂಗಲ್‌ನಲ್ಲಿ ತರಬೇತು ಪಡೆಯಲು, ಕೆಲಸ ಮಾಡಲು ಅವಕಾಶವೊಂದಿದೆ.

Add Asianetnews Kannada as a Preferred SourcegooglePreferred

ಕಂಪನಿಯು ಸಾಫ್ಟ್‌ವೇರ್ ಎಂಜಿನೀಯರಿಂಗ್ ಇಂಟರ್ನ್‌ಶಿಪ್ 2018 ಯೋಜನೆಗೆ ಅರ್ಹ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.

ಅರ್ಹತೆ ಏನು?

ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಮತ್ತು ಎಂ.ಟೆಕ್ ಪದವಿ ಪಡೆದವರು ಈ ಹುದ್ದೆಗೆ ಅರ್ಹರಾಗಿರುತ್ತಾರೆ. ಕಡೆಯ ವರ್ಷದಲ್ಲಿದ್ದು, 2019ರಲ್ಲಿ ಪದವಿ ಪಡೆಯುವವರೂ ಅರ್ಜಿ ಸಲ್ಲಿಸಬಹುದಾಗಿದೆ.

ಪದವಿಯಲ್ಲದೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇತರೆ ಮಾನದಂಡಗಳ ಅಗತ್ಯವೂ ಇದ್ದು, ಕೆಳಗಿನ ಕೋರ್ಸ್‌ಗಳನ್ನು ಪೂರೈಸಿರಬೇಕು.

- ಸಿಸ್ಟಂ ಸಾಫ್ಟ್‌ವೇರ್ ಅಥವಾ ಅಲ್ಗರಿದಮ್‌ನಲ್ಲಿ ಅನುಭವ ಇರಬೇಕು.
- ಸಿ++, ಜಾವಾ, ಪೈಥಾನ್‌‌ನಂಥ ಪ್ರೋಗ್ರಾಮಿಂಗ್‌ಗಳನ್ನು ಬಳಸುವ ಜ್ಞಾನ ಇರಬೇಕು.
- ಯೂನಿಕ್ಸ್/ಲಿನಕ್ಸ್ ಅಥವಾ ವಿಂಡೋಸ್ ಎನ್ವಿರಾನ್ಮೆಂಟ್ಸ್ ಮತ್ತು ಎಪಿಐಗಳ ಬಗ್ಗೆ ಅರಿವಿರಬೇಕು.
- ಟಿಸಿಪಿ ಅಥವಾ ಐಪಿ ಮತ್ತು ನೆಟ್‌ವರ್ಕ್ ಪ್ರೋಗ್ರಾಮಿಂಗ್ ಗೊತ್ತಿರಬೇಕು.

ಇಂಟರ್ನ್‌ಶಿಪ್ ವೇದಿಕೆಯಾದ ಇಂಟರ್ನ್‌ಶಾಲಾ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಾಲೇಜು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಹಾಗೂ ತರಬೇತಿ ನೀಡಲು ಕಳೆದ ವರ್ಷ ಎಐಸಿಟಿಇ ಮತ್ತು ಎಪಿಎಸ್‌ಎಸ್‌ಡಿಸಿಯೊಂದಿಗೆ ಇಂಟರ್ನ್‌ಶಾಲಾ ಒಪ್ಪಂದ ಮಾಡಿಕೊಂಡಿದೆ.

ಇಂಟರ್ನ್‌ಶಿಪ್ ಹೇಗಿರುತ್ತೆ?

- ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿ ತಕ್ಕ ಶಿಷ್ಯ ವೇತನ ನೀಡುತ್ತದೆ.
- 8-12 ವಾರಗಳ ಕಾಲ ಇಂಟರ್ನ್‌ಶಿಪ್ ನಡೆಯುತ್ತದೆ.
- ಏಪ್ರಿಲ್‌ನಿಂದ ಜುಲೈ 2018ರವರೆಗೆ ಇಂಟರ್ನ್‌ಶಿಪ್ ಅವಧಿ.

ಗೂಗಲ್ ಕ್ಲಿಷ್ಟವಾದ ಪ್ರಶ್ನೆಗಳ ಮೂಲಕ ಅಭ್ಯರ್ಥಿಗಳನ್ನು ಆರಿಸುತ್ತದೆ. ಪುಸ್ತಕದ ಹುಳು ಆಗಿರದೇ, ಸಮಯಪ್ರಜ್ಞೆಯಿಂದ ಉತ್ತರಿಸುವಂಥ ಅಭ್ಯರ್ಥಿಗಳಿಗೆ ಆದ್ಯತೆ ನೀಡುತ್ತದೆ.