ಶುಂಠಿಯ ಘಮಲು ಭಾರತೀಯರ ಅಡುಗೆ ಕೋಣೆಗೆ ವಿಶೇಷ ಪರಂಪರಾತ್ಮಕ ಟಚ್ ನೀಡುತ್ತದೆ. ಆಯುರ್ವೇದದ ಸತ್ವಗಳೆಲ್ಲ ಈ ಮನೆಯ ಅಡುಗೆ ಕೋಣೆಯಲ್ಲಿ ಆಹಾರ ಖಾದ್ಯಗಳಾಗಿ ತಯಾರಾಗುತ್ತಿವೆ ಎಂಬ ಭಾವನೆ ಹುಟ್ಟಿಸುತ್ತದೆ. ಔಷಧೀಯ ಗುಣಗಳನ್ನು ಹೊಂದಿರುವ ಶುಂಠಿಯು ಭಾರತೀಯರ ಆರೋಗ್ಯ ಕಾಪಾಡುವಲ್ಲೂ ಮೆಚ್ಚಿಗೆ ಗಳಿಸಿದೆ. ಶುಂಠಿ ಲೇಹ, ಕಷಾಯ, ಚಟ್ನಿ, ತಂಬುಳಿ, ವಡೆ, ರೊಟ್ಟಿ, ತಂಪು ಪಾನೀಯಗಳಲ್ಲಿ ಬಳಕೆ... ಹೀಗೆ ಶುಂಠಿಯು ನಮ್ಮ ಪ್ರತಿದಿನದ ಆಹಾರದ ಫ್ಲೇವರ್ ಹೆಚ್ಚಿಸುತ್ತಲೇ ಇರುತ್ತದೆ. ಶುಂಠಿ ಎಣ್ಣೆಯು ನೋವಿಗೆ, ಥಂಡಿಗೆ ಔಷಧವಾಗಿ ಕೆಲಸ ಮಾಡುತ್ತದೆ. ಶುಂಠಿಯಲ್ಲಿ ಆ್ಯಂಟಿ ಫಂಗಲ್, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ವೈರಲ್, ಆ್ಯಂಟಿ ಪ್ಯಾರಾಸಿಟಿಕ್ ಅಂಶಗಳಿವೆ. 

2000 ವರ್ಷ ಇತಿಹಾಸವಿರುವ ಕೊಂಬುಚ ಟೀ ಈಗ ಟ್ರೆಂಡೀ!

ಕಿಡ್ನಿ ಕಲ್ಲಿಗೆ ಮದ್ದು

ಪ್ರತಿದಿನ ಶುಂಠಿ ಟೀ ಸೇವನೆಯು ಕಿಡ್ನಿಯಲ್ಲಿ ಕಲ್ಲಾಗುವುದನ್ನು ತಪ್ಪಿಸುತ್ತದೆ. ಕಿಡ್ನಿಗಳಿಂದ ವಿಷಪದಾರ್ಥಗಳನ್ನು ಶುಂಠಿ ಹೊರಹಾಕುತ್ತದೆ. ಈ ಟೀಗೆ ಸ್ವಲ್ಪ ನಿಂಬೆರಸ ಬೆರೆಸಿದಿರಾದರೆ ಆರೋಗ್ಯಕ್ಕೆ ಹೆಚ್ಚಿನ ಲಾಭ ದೊರೆಯುತ್ತದೆ. 

ಲಿವರ್ ಕ್ಲೆನ್ಸರ್ 

ಶುಂಠಿಯಲ್ಲಿ ಕೆಲ ಹೆಪಾಟೋ-ಪ್ರೊಟೆಕ್ಟಿವ್ ಗುಣಗಳಿದ್ದು, ಲಿವರ್‌ನಲ್ಲಿ ಟಾಕ್ಸಿನ್ಸ್ ಸ್ಟೋರ್ ಆಗದಂತೆ ನೋಡಿಕೊಳ್ಳುತ್ತದೆ. ಇದರ ಆ್ಯಂಟಿ ಇನ್ಫಮೇಟರಿ ಗುಣವು ಲಿವರ್ ಕ್ಯಾನ್ಸರ್ ಬರದಂತೆ ತಡೆಯುತ್ತದೆ. 

ಆಹಾ! ಗ್ರೀನ್ ಟೀ, ಬ್ಲ್ಯಾಕ್ ಟೀ ಗೊತ್ತು, ಮಶ್ರೂಮ್ ಟೀ....

ಕ್ಯಾನ್ಸರ್ ವಿರೋಧಿ 

ಕ್ಯಾನ್ಸರ್ ವಿರುದ್ಧ ಹೋರಾಡುವಲ್ಲಿ ಶುಂಠಿಯನ್ನು ಕಿಮೋಥೆರಪಿಯ ಡ್ರಗ್‌ಗಿಂತಲೂ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಕೀಮೋಥೆರಪಿ ಕ್ಯಾನ್ಸರ್ ಕೋಶಗಳೊಂದಿಗೆ ಒಳ್ಳೆಯ ಕೋಶಗಳನ್ನೂ ಸಾಯಿಸುತ್ತದೆ. ಆದರೆ, ಶುಂಠಿಯಲ್ಲಿರುವ ಆ್ಯಂಟಿ ಕ್ಯಾನ್ಸರ್ ಗುಣವು ಕೇವಲ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತದೆ. ಶುಂಠಿಯಲ್ಲಿ 6-ಜೆಂಜೆರಾಲ್ ಹಾಗೂ ಥೈಸೋನ್ ಎಂಬ ಕಾಂಪೌಂಡ್‌ಗಳಿದ್ದು, ಅವು ಕ್ಯಾನ್ಸರ್ ಕೋಶಗಳು ಬೆಳೆಯದಂತೆ ಹೋರಾಡುತ್ತವಲ್ಲದೆ, ಬೆಳೆದ ಕೋಶಗಳ ವಿರುದ್ಧವೂ ಹೋರಾಡುತ್ತವೆ. ಹೀಗಾಗಿ, ಸಂಶೋಧಕರ ಚಿತ್ತ ಈಗ ಶುಂಠಿಯತ್ತ ಹರಡಿದೆ. 

ಕೊನೆಗೂ ಕ್ಯಾನ್ಸರ್ ಔಷಧಿ ಕಂಡು ಹಿಡಿದ ವಿಜ್ಞಾನಿಗಳು: ಯಾವಾಗಿಂದ ಲಭ್ಯ? ಇಲ್ಲಿದೆ ವಿವರ

ಶೀತದ ವಿರುದ್ಧ ಹೋರಾಟ

ಶುಂಠಿಯು ನಿರಂತರವಾಗಿ ಬ್ಯಾಕ್ಟೀರಿಯಾ ಹಾಗೂ ವೈರಸ್ ವಿರುದ್ಧ ಹೋರಾಡುತ್ತಲೇ ಇರುತ್ತದೆ. ಅದರಲ್ಲೂ ಶೀತ, ಕೆಮ್ಮು ಹರಡುವ ವೈರಸ್ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಿ, ಆರೋಗ್ಯ ಕಾಯ್ದುಕೊಡುತ್ತದೆ. ಮೈಕೈ ನೋವು, ತಲೆನೋವು, ಹೊಟ್ಟೆನೋವು, ಅತಿಸಾರಕ್ಕೆ ಕೂಡಾ ಶುಂಠಿ ಉತ್ತಮ ಮದ್ದು. 
ಅಷ್ಟೇ ಅಲ್ಲ, ಶುಂಠಿಯು ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಹಲವಾರು ಕಾಯಿಲೆಗಳನ್ನು ದೂರವಿಡುತ್ತದೆ. ಮುಟ್ಟಿನ ಹೊಟ್ಟೆನೋವು ಕಡಿಮೆ ಮಾಡಿ, ದೇಹದಲ್ಲಿ ಪ್ಯಾರಾಸೈಟ್‌ಗಳನ್ನು ಕೊಂದು, ಹಾರ್ಟ್ ಸ್ಟ್ರೋಕ್ ಕಡಿಮೆ ಮಾಡುತ್ತದೆ. ಕೀಮೋಥೆರಪಿಯ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಅಸ್ತಮಾ ವಿರುದ್ಧ ಹೋರಾಡುತ್ತದೆ.  ಮಾರ್ನಿಂಗ್ ಸಿಕ್‌ನೆಸ್ ಕಡಿಮೆ ಮಾಡುತ್ತದೆ. 

ಗ್ರೀನ್‌ ಟೀ ಆಯ್ತು ಈಗ ಗ್ರೀನ್‌ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!

ಜಿಂಜರ್ ಟೀ ಮಾಡುವ ವಿಧಾನ

ಸಣ್ಣ ಕೈಪಾತ್ರೆಯಲ್ಲಿ ಎರಡು ಲೋಟ ನೀರು ಕುದಿಯಲು ಇಡಿ. ಅದಕ್ಕೆ ಶುಂಠಿ, ಅರಿಸಿನ ಹಾಕಿ ತಟ್ಟೆ ಮುಚ್ಚಿ 10 ನಿಮಿಷ ಕುದಿಯಲು ಬಿಡಿ. ನಂತರ ಉರಿ ಕಿರಿದುಗೊಳಿಸಿ, ಸ್ವಲ್ಪ ಹಾಸು ಸೇರಿಸಿ. ಇನ್ನೇನು ಕುದಿಯುತ್ತೆ ಎನ್ನುವಾಗ ಸ್ಟೌ ಆಫ್ ಮಾಡಿ ನಿಂಬೆರಸ ಹಿಂಡಿ. ಲೋಟಕ್ಕೆ ಸೋಸಿ ಕುಡಿಯಿರಿ.