ಕೊನೆಗೂ ಕ್ಯಾನ್ಸರ್ ಔಷಧಿ ಕಂಡು ಹಿಡಿದ ವಿಜ್ಞಾನಿಗಳು: ಯಾವಾಗಿಂದ ಲಭ್ಯ? ಇಲ್ಲಿದೆ ವಿವರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Jan 2019, 4:13 PM IST
Israeli Scientists Claim To Have Found A Complete Cure For Cancer
Highlights

ಕ್ಯಾನ್ಸರ್ ಈ ಶಬ್ಧ ಕೇಳಿದ್ರೆ ನಡುಕ ಹುಟ್ಟುತ್ತದೆ. ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿ ಹಾಗೂ ನಮ್ಮ ಆಹಾರ ಕ್ರಮದಿಂದಾಗಿ ಕ್ಯಾನ್ಸರ್‌ಗೀಡಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಿದ್ದರೂ ವಿಜ್ಞಾನಿಗಳು ಮಾತ್ರ ಅದೆಷ್ಟೇ ಯತ್ನಿಸಿದರೂ ಈ ರೋಗಕ್ಕೆ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೀಗ ಕ್ಯಾನ್ಸರ್‌ ಸಂಪೂರ್ಣ ಗುಣಪಡಿಸಬಲ್ಲ ಔಷಧಿ ಕಂಡು ಹಿಡಿಯಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈವರೆಗೂ ವಿಜ್ಞಾನಿಗಳಿಗೆ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ಔಷಧಿ ಹುಡುಕುವುದು ಬಹುದೊಡ್ಡ ಸವಾಲಾಗಿತ್ತು. ಅದೆಷ್ಟೇ ಶ್ರಮಪಟ್ಟರೂ ಔಷಧಿ ಕಂಡು ಹಿಡಿಯುವುದು ಮಾತ್ರ ಅಸಾಧ್ಯವಾಗಿತ್ತು. ಆದರೀಗ ಇಸ್ರೇಲ್‌ನ ವಿಜ್ಞಾನಿಗಳು 2020ರೊಳಗೆ ಕ್ಯಾನ್ಸರ್‌ನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲ ಔಷಧಿ ತಯಾರಿಸುತ್ತೇವೆಂದು ಖಚಿತಪಡಿಸಿದ್ದಾರೆ. ಈ ವಿಜ್ಞಾನಿಗಳು ತಾವು ಸಿದ್ಧಪಡಿಸಿರುವ ಔಷಧಿ ಪರೀಕ್ಷಿಸುವ ಕೊನೆಯ ಹಂತದಲ್ಲಿದ್ದಾರೆನ್ನಲಾಗಿದೆ. ಒಂದು ವೇಳೆ ಅವರು ತಮ್ಮ ಪ್ರಯೋಗದಲ್ಲಿ ಯಶಸ್ವಿಯಾದರೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ತಮ್ಮ ನೋವಿನಿಂದ ಮುಕ್ತಿ ಸಿಗಲಿದೆ.

ಡಬ್ಬಡ್ ಮುಟಾಟೋ (Dubbed MuTaTo) ಹೆಸರಿನ ಈ ಔಷಧಿಯನ್ನು ಎನಲ್ಯೂಷನ್ ಬಯೋಟೆಕ್ನಾಲಜೀಸ್ ಲಿಮಿಟೆಡ್ ಕಂಪೆನಿಗೆ ಸಂಬಂಧಿಸಿದ ವಿಜ್ಞಾನಿಗಳು ಆವಿಷ್ಕಾರ ಮಾಡಿದ್ದಾರೆ. ಔಷಧಿ ಪ್ರಯೋಗವು ಅಂತಮ ಘಟ್ಟ ತಲುಪಿದ್ದು, ಯಶಸ್ವಿಯಾಗುತ್ತಿದ್ದಂತೆಯೇ ಅಂದರೆ ಸುಮಾರು 2020ರೊಳಗೆ ಕ್ಯಾನ್ಸರ್ ಪೀಡಿತರಿಗೆ ನೀಡಲಾಗುತ್ತದೆ.

ದ ಜೆರುಸಲೆಂ ಕಂಪೆನಿಯ ಚೇರ್‌ಮನ್ ಡೆನ್ ಎರಿಡೋರ್ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ನಾವು ಕಂಡು ಹುಡುಕಿರುವ ಕ್ಯಾನ್ಸರ್ ಔಷಧಿಯ ಪ್ರಭಾವ ಮೊದಲ ದಿನದಿಂದಲೇ ಕಂಡುಕೊಳ್ಳಬಹುದು. ಇದರಿಂದ ಯಾವುದೇ ದುಷ್ಪರಿಣಾಮಗಳಿಲ್ಲ ಹಾಗೂ ಇದು ದುಬಾರಿಯಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆ ಬೆಲೆಗೆ ಜನರ ಕೈತಲುಪಲಿದೆ. 

ಫೋರ್ಬ್ಸ್ ನಲ್ಲಿ ಪ್ರಕಟವಾಗಿರುವ ವರದಿಯನ್ವಯ ಮುಟಾಟೋ ಕ್ಯಾನ್ಸರ್ ಕ್ಯಾನ್ಸರ್-ಟಾರ್ಗೆಟಿಂಗ್ ಪೆಪ್ಸಿಡೇಸ್ ಹಾಗೂ ಯೂನಿಕ್ ಟಾಕ್ಸಿನ್‌ನ ಮಿಶ್ರಣವೆನ್ನಲಾಗಿದೆ. ಇದು ಕೇವಲ ಕ್ಯಾನ್ಸರ್ ಪೀಡಿತ ಜೀವಕೋಶಗನ್ನಷ್ಟೇ ನಾಶಪಡಿಸುತ್ತವೆ. ಕಿಮೋ ಅಥವಾ ಇತರ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುವ ಔಷಧಿಗಳಂತೆ ಆರೋಗ್ಯಯುತ ಜೀವಕೋಶಗಳನ್ನೂ ಇದು ನಾಶಪಡಿಸುವುದಿಲ್ಲ.

ಈಗಾಗಲೇ ಇಲಿಗಳ ಮೇಲೆ ಈ ಔಷಧಿಯನ್ನು ಪ್ರಯೋಗಿಸಲಾಗಿದ್ದು, ಯಸಶ್ಸು ಲಭಿಸಿದೆ. 2019ರಲ್ಲಿ ಮನುಷ್ಯರ ಮೇಲೂ ಇದರ ಪ್ರಯೋಗ ನಡೆಯಲಿದೆ. 

loader