Asianet Suvarna News Asianet Suvarna News

Gender Change : ಕಠಿಣ ಶ್ರಮದ ನಂತ್ರ ಅವಳಿಂದ ಅವನಾದವನ ಕಥೆ ಇದು

ಲಿಂಗ ಪರಿವರ್ತನೆ ಸುಲಭವಲ್ಲ. ಈಗಿನ ದಿನಗಳಲ್ಲಿ ಅಲ್ಲೊಂದು, ಇಲ್ಲೊಂದು ಪ್ರಕರಣ ಕೇಳಿ ಬರ್ತಿದೆ. ಸಾಕಷ್ಟು ವೈದ್ಯಕೀಯ ಚಿಕಿತ್ಸೆ ನಂತ್ರ ಲಿಂಗ ಪರಿವರ್ತನೆ ಮಾಡಿಕೊಂಡ ಜನರ ಪಟ್ಟಿಗೆ ಈಗ ಸರಿತಾ ಸೇರಿದ್ದಾರೆ.
 

Gender Change Surgery Sarita New Identity Sharad Singh roo
Author
First Published Jun 28, 2023, 12:49 PM IST

ಸತತ ಮೂರು ವರ್ಷಗಳ ಪರಿಶ್ರಮದ ನಂತ್ರ ಉತ್ತರಪ್ರದೇಶದ ಯುವತಿಯೊಬ್ಬಳು ತನ್ನ ಲಿಂಗ ಪರಿವರ್ತನೆ ಮಾಡಿಕೊಳ್ಳೋದ್ರಲ್ಲಿ ಯಶಸ್ವಿಯಾಗಿದ್ದಾಳೆ. ಶಹಜಹಾನ್‌ಪುರದ ಕಾಕೋರಿಯ ಸರಿತಾ ಸಿಂಗ್ ಈಗ ಶರದ್ ಸಿಂಗ್ ಆಗಿದ್ದಾಳೆ. ಅಮರ ನಾಯಕ ಠಾಕೂರ್ ರೋಷನ್ ಸಿಂಗ್ ಅವರ ಮರಿ ಮೊಮ್ಮಗಳು ಸರಿತಾ ಸಿಂಗ್ ಗೆ ಲಿಂಗ ಬದಲಾವಣೆ ಪ್ರಮಾಣ ಪತ್ರದ ಜತೆಗೆ ಗುರುತಿನ ಚೀಟಿಯನ್ನು ಡಿಎಂ ನೀಡಿದ್ದಾರೆ.

ಶರದ್, ಮೂಲತಃ ಖುದಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನಾವಡಾ ಗ್ರಾಮದ ನಿವಾಸಿ. ಭಾವಲಖೇಡಾ ಬ್ಲಾಕ್‌ನ ಸಂಯೋಜಿತ ಶಾಲೆಯಲ್ಲಿ ಸಹಾಯಕ ಶಿಕ್ಷಕ (Teacher) ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ನಿಗೋಹಿ ರಸ್ತೆಯಲ್ಲಿರುವ ಸಾಹಿತ್ಯಪುರಂ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. 

2020ರಲ್ಲಿಯೇ ಶುರುವಾಗಿತ್ತು ಲಿಂಗ (Gender) ಪರಿವರ್ತನೆ ಕೆಲಸ : ಸರಿತಾ ಹುಡುಗಿಯಾಗಿದ್ರೂ, ಹುಡುಗನಂತೆ ಬದುಕುತ್ತಿದ್ದರು ಸರಿತಾ. 2020ರಲ್ಲಿ ಲಿಂಗ ಬದಲಿಸಿಕೊಳ್ಳುವ ದೃಢ ನಿರ್ಧಾರಕ್ಕೆ ಬಂದಿದ್ದರು. ಅಲ್ಲಿಂದಲೇ ಲಿಂಗ ಬದಲಾವಣೆಗೆ ಕೆಲ ಪ್ರಯತ್ನ ನಡೆದಿತ್ತು. ಲಕ್ನೋದಲ್ಲಿ ಹಾರ್ಮೋನ್ ಚಿಕಿತ್ಸೆ (Treatment) ಯನ್ನು ಸರಿತಾ ಪಡೆದರು. ಇದರಿಂದ ಅವರ ಮುಖದಲ್ಲಿ ಗಡ್ಡ ಬೆಳೆಯಲು ಶುರುವಾಗಿತ್ತು. ಧ್ವನಿಯಲ್ಲೂ ಬದಲಾವಣೆ ಕಂಡು ಬಂದಿತ್ತು. 

Life Lessons: ಸುಧಾಮೂರ್ತಿಯವರ ಅದ್ಭುತ ಜೀವನ ಪಾಠಗಳು

ಈ ಚಿಕಿತ್ಸೆಯ ಜೊತೆಗೆ ಸುಮಾರು ಒಂದು ತಿಂಗಳ ಹಿಂದೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ  ಮೂಲಕ  ಲಿಂಗ ಬದಲಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾದ್ಮೇಲೆ  ಡಿಎಂ ಉಮೇಶ್ ಪ್ರತಾಪ್ ಸಿಂಗ್ ಅವರಿಂದ ಸರಿತಾ ಸಿಂಗ್, ಲಿಂಗ ಬದಲಾವಣೆ ಪ್ರಮಾಣ ಪತ್ರ ಪಡೆದಿದ್ದಾರೆ. ಶರದ್ ಸಿಂಗ್ ಆಗಿ ಬದಲಾಗಿದ್ದಾರೆ. ಮೂರು ವರ್ಷಗಳಲ್ಲಿ ಸಾಕಷ್ಟು ಕಷ್ಟಗಳು ಎದುರಾಯ್ತು. ಆದ್ರೂ ಎದೆಗುಂದದೆ, ಲಿಂಗ ಬದಲಾವಣೆ ಮಾಡಿಕೊಂಡಿದ್ದೇನೆ ಎಂದು ಶರದ್ ಹೇಳಿದ್ದಾರೆ.

12ನೇ ವಯಸ್ಸಿನಲ್ಲಿಯೇ ಶುರುವಾಗಿತ್ತು ಬದಲಾವಣೆ : ಬಾಲ್ಯದಲ್ಲಿಯೇ ಮಕ್ಕಳು ತಮ್ಮ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಶುರು ಮಾಡ್ತಾರೆ. 12ನೇ ವಯಸ್ಸಿನಲ್ಲಿಯೇ ನಾನು ಹೆಣ್ಣಲ್ಲ ಎನ್ನುವ ಭಾವನೆ ನನಗೆ ಬಂದಿತ್ತು ಎನ್ನುತ್ತಾರೆ ಶರದ್. ಆಗಲೇ ನಾನು ಹುಡುಗನಾಗಲು ಬಯಸಿದ್ದೆ ಎನ್ನುತ್ತಾರೆ ಶರದ್. 

Interesting News : ಯಪ್ಪಾ..! ಕಣ್ಣು, ಹೃದಯ ತಿನ್ನೋ ಕೈದಿಗಳಿಲ್ಲಿದ್ದಾರೆ…

ಕೆಲವೇ ದಿನಗಳಲ್ಲಿ ನಡೆಯಲಿದೆ ಶರದ್ ಮದುವೆ : ಸರಿತಾ ಅಲಿಯಾಸ್ ಶರದ್, ಶೀಘ್ರವೇ ಮದುವೆಯಾಗಲಿದ್ದಾರೆ. ಪಿಲಿಭಿತ್‌ನ ಸವಿತಾ ಅವರನ್ನು ಶರದ್ ಮದುವೆಯಾಗಲಿದ್ದಾರೆ. 

ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಶರದ್ : ಲಿಂಗ ಬದಲಾವಣೆ ಪ್ರಮಾಣ ಪತ್ರ ಪಡೆದಿರುವ ಶರದ್, ತಮ್ಮ ಶೈಕ್ಷಣಿಕ ಪ್ರಮಾಣ ಪತ್ರಗಳಲ್ಲೂ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಲಿದ್ದಾರೆ. ಎಲ್ಲ ಮಾರ್ಕ್ಸ್ ಕಾರ್ಡ್ ಗಳಲ್ಲಿ, ದಾಖಲೆಗಳಲ್ಲಿ ಹೆಸರು ಬದಲಾದ ನಂತ್ರ ಅವರು ನಾಗರಿಕ ಸೇವಾ ಪರೀಕ್ಷೆ ಬರೆಯಲಿದ್ದಾರೆ. ಅದಕ್ಕಾಗಿ ತಯಾರಿ ಈಗಾಗಲೇ ಶುರುವಾಗಿದೆ. 

ಖುದಗಂಜ್‌ನ ವಿಭು ಕೂಡ ಲಿಂಗ ಬದಲಿಸಿದ್ದರು :  ಹುಡುಗಿಯಿಂದ ಹುಡುಗನಾಗಿ ಲಿಂಗ ಬದಲಾಯಿಸಿದ ಮತ್ತೊಂದು ಪ್ರಕರಣ ಇದಾಗಿದೆ. ಈ ಮೊದಲು ಖುದಗಂಜ್‌ನ ವಿಭು ಕೂಡ ತನ್ನ ಲಿಂಗವನ್ನು ಬದಲಾಯಿಸಿದ್ದರು.  ಅವರು ಕೂಡ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ವಿಭು ದೆಹಲಿಯಲ್ಲಿ ವಾಸಿಸುತ್ತಾರೆ. 

ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಹೇಗೆ ನಡೆಯುತ್ತೆ? : ಮೊದಲು ಹಾರ್ಮೋನ್ ಬದಲಾವಣೆಗೆ ಇಂಜೆಕ್ಷನ್ ಹಾಗೂ ಔಷಧಿ ನೀಡಲಾಗುತ್ತದೆ. ಸುಮಾರು ಮೂರರಿಂದ ನಾಲ್ಕು ಡೋಸ್ ಇಂಜೆಕ್ಷನ್ ನೀಡಿದ ನಂತರ, ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು ನಡೆಯಲು ಪ್ರಾರಂಭಿಸುತ್ತವೆ. ನಂತರ ಅದರ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಇದ್ರಲ್ಲಿ ಹುಡುಗ ಅಥವಾ ಹುಡುಗಿಯ ಖಾಸಗಿ ಅಂಗದಲ್ಲಿ ಹಾಗೂ ಮುಖದಲ್ಲಿ ಬದಲಾವಣೆಯಾಗುತ್ತದೆ. ಹುಡುಗಿ, ಹುಡುಗನಾಗ್ಬೇಕು ಅಂದ್ರೆ ಮೊದಲು ಸ್ತನವನ್ನು ತೆಗೆದುಹಾಕಲಾಗುತ್ತದೆ. ನಂತ್ರ ಖಾಸಗಿ ಅಂಗವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಹುಡುಗ, ಹುಡಗಿಯಾಗ್ಬೇಕು ಅಂದ್ರೆ, ಸ್ತನ ಅಭಿವೃದ್ಧಿಗೆ ಮೂರರಿಂದ ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಯುತ್ತದೆ. 
 

Follow Us:
Download App:
  • android
  • ios