ನೀವು ಸಿಂಗಲ್ ಆಗಿದ್ದರೆ ಉಚಿತವಾಗಿ ಫಿನ್‌ಲ್ಯಾಂಡ್‌ಗಿದೆ ಪ್ರವಾಸ ಕೈಗೊಳ್ಳುವ ಅವಕಾಶವಿದೆ. ಲವ್ ಲೈಫ್ ಕಂಡುಕೊಳ್ಳಲು ಪ್ರವಾಸೋದ್ಯಮ ಇಲಾಖೆ ಈ ಉಚಿತ ಟ್ರಿಪ್ ನೀಡುತ್ತಿದೆ. ಎಲ್ಲವೂ ಫ್ರೀ, ಫ್ರೀ, ಫ್ರೀ..
ಕಂಡೀಷನ್ ಒಂದೇ ನೀವು ಸಿಂಗಲ್ ಆಗಿರಬೇಕು, ಲವ್, ರಿಲೇಶನ್‌ಶಿಪ್, ಲೀವಿಂಗ್ ರಿಲೇಶನ್‌ಶಿಪ್ ಇರಬಾರದು. ಹೀಗಿದ್ದರೆ ನಿಮಗೆ ಫಿನ್‌ಲ್ಯಾಂಡ್‌ಗೆ ಉಚಿತವಾಗಿ ಪ್ರವಾಸ ಮಾಡಬಹುದು. ಕೇವಲ ಪ್ರಯಾಣ ಮಾತ್ರ ಉಚಿತವಲ್ಲ, ಅಲ್ಲಿನ ತಂಗಲು ಹೊಟೆಲ್, ಆಹಾರ, ತಿರುಗಾಟ ಎಲ್ಲವೂ ಫ್ರೀ, ಫ್ರೀ, ಫ್ರೀ. ಭಾರತ ಸೇರಿ ಜಗತ್ತಿನ ಯಾವುದೇ ದೇಶದ ಜನರಿಗೂ ಈ ಪ್ರವಾಸಕ್ಕೆ ಅರ್ಹತೆ ಇದೆ. ಈ ಪ್ರವಾಸದಲ್ಲಿ ಸಂಗಾತಿ ಕಂಡುಕೊಳ್ಳಲು ಡಿನ್ನರ್ ಡೇಟ್ ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳಿವೆ.
ನಾಲ್ಕು ದಿನಗಳ ಫಿನ್‌ಲ್ಯಾಂಡ್ ಉಚಿತ ಪ್ರವಾಸ
ಸಿಂಗಲ್ ಆಗಿದ್ದವರಿಗೆ ಫಿನ್‌ಲ್ಯಾಂಡ್ ಉಚಿತ ಪ್ರವಾಸವನ್ನು ಫಿನ್‌ಲ್ಯಾಂಡ್ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದೆ. ವಿಸಿಟ್ ಫಿನ್‌ಲ್ಯಾಂಡ್ ಅನ್ನೋ ಯೋಜನೆ ಜಾರಿಗೆ ತಂದಿದೆ. ಫಿನ್‌ಲ್ಯಾಂಡ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಈ ಯೋಜನೆ ತರಲಾಗಿದೆ. ಈ ಯೋಜನೆಯಡಿ ಲವ್ ಲೈಫ್ ಯೋಜನೆ ಜಾರಿ ಮಾಡಲಾಗಿದೆ. ವಿಮಾನ ಟಿಕೆಟ್, ವಸತಿ, ಆಹಾರ ಸೇರಿ ಒಟ್ಟು ನಾಲ್ಕು ದಿನಗಳ ಸಂಪೂರ್ಣ ಉಚಿತ ಪ್ರವಾಸವನ್ನು ಪ್ರವಾಸೋದ್ಯ ಇಲಾಖೆ ನೀಡಲಿದೆ.
ಆಯ್ಕೆಯಾಗುವ 16 ಅದೃಷ್ಟವಂತರಿಗೆ ಫ್ರೀ ಟೂರ್
ನೀವು ಸಿಂಗಲ್ ಆಗಿದ್ದರೆ ಫಿನ್‌ಲ್ಯಾಂಡ್ ಪ್ರವಾಸೋದ್ಯಮ ಇಲಾಖೆಯ ವಿಸಿಟ್ ಫಿನ್‌ಲ್ಯಾಂಡ್ ಯೋಜನೆಯ ಲೈವ್ ಲೈಫ್ ಪ್ರವಾಸಕ್ಕೆ ಅರ್ಜಿ ಹಾಕಬೇಕು. ಸ್ವವಿವರ, ವಿಳಾಸ, ವೃತ್ತಿ ಸೇರಿದಂತೆ ಇತರ ಮಾಹಿತಿಗಳನ್ನು ತುಂಬಿ ಅರ್ಜಿ ಸಲ್ಲಿಸಿಬೇಕು. ಹೀಗೆ ಸಲ್ಲಿಕೆ ಮಾಡಿದ 16 ಅದೃಷ್ಟವಂತರನ್ನು ಆಯ್ಕೆ ಮಾಡಲಾಗುತ್ತದೆ. ಈ 16 ಮಂದಿಯ ಸಂಪೂರ್ಣ ಪ್ರವಾಸ ವೆಚ್ಚವನ್ನು ಫಿನ್‌ಲ್ಯಾಂಡ್ ಪ್ರವಾಸೋದ್ಯ ಇಲಾಖೆ ನೋಡಿಕೊಳ್ಳಲಿದೆ.
2027ರ ಫೆಬ್ರವರಿಯಲ್ಲಿ ಪ್ರವಾಸ
ಆಯ್ಕೆಯಾದ 16 ಮಂದಿಯನ್ನು ತಲಾ 8 ಜನರಂತೆ ಎರಡು ಬ್ಯಾಚ್ ಮೂಲಕ ಫ್ರೀ ಪ್ರವಾಸಕ್ಕೆ ಕರೆದೊಯ್ಯಲಾಗುತ್ತದೆ. ರಾಜಧಾನಿ ಹೆಲ್ಸಂಕಿ, ಸರೋವರ, ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಕರೆಯೊಯ್ಯಲಾಗುತ್ತದೆ. ಕ್ಯಾಂಡಲ್ ಲೈಟ್ ಡಿನ್ನರ್ ಸವಿಯುತ್ತಾ, ಪರಸ್ಪರ ಪರಿಚಯ ಮಾಡಿಕೊಂಡು ಪ್ರೀತಿಯಲ್ಲಿ ಬೀಳುವ ಅವಕಾಶವೂ ಇಲ್ಲಿದೆ. ಸುಲಭವಾಗಿ ಹೇಳುವುದಾದರೆ ಉಚಿತ ಪ್ರವಾಸದಲ್ಲಿ ಸಂಗಾತಿಯನ್ನು ಹುಡುಕಲು ಅವಕಾಶವಿದೆ. ಇದಕ್ಕೆ ಉತ್ತೇಜನೆ, ಬೆಂಬಲವೂ ಸಿಗಲಿದೆ.
ಅರ್ಜಿ ಸಲ್ಲಿಕೆ ಹೇಗೆ
ಅತ್ಯಂತ ಸುಲಭವಾಗಿ ಈ ಉಚಿತ ಪ್ರವಾಸಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸುವವರು 18 ವರ್ಷ ತುಂಬಿರಬೇಕು. ಪ್ರಮುಖವಾಗಿ ಸಿಂಗಲ್ ಆಗಿರಬೇಕು ಅಂದರೆ ಸಂಗಾತಿ, ಗರ್ಲ್‌ಫ್ರೆಂಡ್, ಬಾಯ್‌ಫ್ರೆಂಡ್ ಇರಬಾರದು. ಅರ್ಜಿ ಸಲ್ಲಿಸುವವರು ಇಂಗ್ಲಿಷ್‌ನಲ್ಲಿ ತಮ್ಮ ಹೆಸರು, ವಿಳಾಸ, ಪರಿಚಯ ಸೇರಿದಂತೆ ಕೆಲ ಮಾಹಿತಿಗಳ ವಿಡಿಯೋ ಒಂದನ್ನು ಮಾಡಬೇಕು. ಈ ವಿಡಿಯೋದಲ್ಲಿ ಪ್ರವಾಸದಲ್ಲಿ ಯಾರಾದರು ಪರಿಯವಾಗಿ ಡಿನ್ನರ್ ಡೇಟ್ ಹೋದರೆ ಅರಿಗೆ ಏನು ಉಣಬಡಿಸುತ್ತೀರಿ, ಯಾಕೆ ಸೇರಿದಂತೆ ಕೆಲ ಆಸಕ್ತಿದಾಯ ವಿಚಾರಗಳನ್ನು ಈ ವಿಡಿಯೋದಲ್ಲಿ ಹಂಚಿಕೊಳ್ಳಬೇಕು. ಈ ವಿಡಿಯೋವನ್ನು ಇನ್‌ಸ್ಟಾಗ್ರಾ ಅಥವಾ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಬೇಕು.
ಇಷ್ಟಕ್ಕೆ ಅರ್ಜಿ ಸಲ್ಲಿಕೆ ಮುಗಿದಿಲ್ಲ. ವಿಸಿಟ್ ಫಿನ್‌ಲ್ಯಾಂಡ್ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಭರ್ತಿ ಮಾಡಬೇಕು. ನಿಮ್ಮ ವಿವರ ಸೇರಿದಂತೆ ಇತರ ಕಡ್ಡಾಯ ಮಾಹಿತಿಗಳನ್ನು ನೀಡಬೇಕು. ಜೊತೆಗೆ ನೀವು ಪೋಸ್ಟ್ ಮಾಡಿದ ವಿಡಿಯೋ ಲಿಂಕ್ ಕೂಡ ಪೇಸ್ಟ್ ಮಾಡಿ ಅರ್ಜಿ ಸಲ್ಲಿಕೆ ಮಾಡಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 10, 2026. ಹೀಗೆ ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಾಲಗುತ್ತದೆ. ಈ ಪಟ್ಟಿಯಿಂದ 16 ಅದೃಷ್ಟವಂತರ ಹೆಸರು ಆಯ್ಕೆ ಮಾಡಲಾಗುತ್ತದೆ. ಡಿಸೆಂಬರ್ 1ಕ್ಕೆ ಈ ಅದೃಷ್ಟವಂತರ ಹೆಸರು ಪ್ರಕಟಣೆಯಾಗಲಿದೆ.






