ನಾವೆಷ್ಟು ನೀರು ಕುಡಿಯುತ್ತೇವೆ. ಕುಡಿಯುವ ನೀರನ್ನು ಮೂತ್ರದ ಮೂಲಕ ಎಷ್ಟು ಬಾರಿ ಹಾಕುತ್ತೇವೆ. ಮೂತ್ರದ ಬಣ್ಣ ಹಾಗೂ ಕ್ವಾಂಟಿಟಿ ಮೇಲೆ ನಾವೆಷ್ಟು ಆರೋಗ್ಯವಾಗಿದ್ದೇವೆಂಬುವುದು ಅವಲಂಬಿತವಾಗಿರುತ್ತದೆ. ಆದರೆ, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕ್ಯಾನ್ಸರ್ ಸೇರಿ ವಿವಿಧ ರೋಗಗಳ ಲಕ್ಷಣವಾಗಿರಬಹುದು.

ನೊರೆ ಮೂತ್ರ ಮತ್ತು ಮೂತ್ರದ ಬಣ್ಣ ಬದಲಾವಣೆ ಸಾಮಾನ್ಯವಾಗಿ ಕಾಡುವ ಆರೋಗ್ಯದ ತೊಂದರೆ. ಇದನ್ನು ಕಂಡ ಕೊಡಲೇ ವೈದ್ಯರನ್ನು ಭೇಟಿಯಾಗಿ ಅಥವಾ ಯಾವುದಾದರೂ ಮನೆ ಮದ್ದು ಮಾಡಿಕೊಳ್ಳುವುದು ಒಳ್ಳೆಯದು. ಅದರಲ್ಲಿಯೂ ಮೂತ್ರದಲ್ಲಿ ರಕ್ತ ಕಂಡು ಬಂದರೆ ಎಂಥವರನ್ನೂ ಗಾಬರಿ ಮಾಡುವುದು ಸಹಜವಾದರೂ, ಕೂಲ್ ಆಗಿರಬೇಕು.

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದನ್ನು ಹೇಮಾಟುರಿಯಾ ಎನ್ನುತ್ತಾರೆ. ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ಲಕ್ಷಣವೆಂದು ಹೆಣ್ಣು ಮಕ್ಕಳು ಸಾಮಾನ್ಯವಾಗಿ ಈ ಸಮಸ್ಯೆಯನ್ನು ನಿರ್ಲಕ್ಷಿಸುವುದೇ ಹೆಚ್ಚು. ಏನೋ ಆಹಾರ ದೋಷವೆಂದು ಗಂಡಸರೂ ಈ ಗಂಭೀರ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. 

ಏನಿದು ಸಮಸ್ಯೆ?

  • ಮೂತ್ರದಲ್ಲಿ ಪಿಂಕ್ ಅಥವಾ ಕೆಂಪು ಬಣ್ಣ ಕಾಣಿಸಿಕೊಳ್ಳುವುದನ್ನು ಗ್ರಾಸ್ ಹೇಮಾಟುರಿಯಾ ಎನ್ನುತ್ತಾರೆ.
  • ಅಕಸ್ಮಾತ್ ಮೂತ್ರದಲ್ಲಿ ರಕ್ತ ಕಣಗಳು ಬರಿಗಣ್ಣಿಗೆ ಕಾಣಿಸದೇ ಹೋದಲ್ಲಿ, ಅದನ್ನು ಮೈಕ್ರೋಸ್ಕೋಪಿಕ್ ಹೇಮಾಟುರಿಯಾ ಎನ್ನುತ್ತಾರೆ.

ಕಾರಣವೇನಿರಬಹುದು?

  • ಮೂತ್ರಪಿಂಡ ಕಲ್ಲು.
  • ಮೂತ್ರಪಿಂಡ ಕಾಯಿಲೆ.
  • ಮೂತ್ರಕೋಶ ಸೋಂಕು.
  • ಪ್ರೋಸ್ಟೇಟ್ ಗ್ಲ್ಯಾಂಡ್. 
  • ಅತ್ತಿ ಹೆಚ್ಚು ಮಾತ್ರೆ ಸೇವನೆ 
  • ಕ್ಯಾನ್ಸರ್

ತಡೆಯುವುದು ಹೇಗೆ?

  • ದಿನಕ್ಕೆ ಕಡಿಮೆ ಎಂದರೂ 2-3 ಲೀ. ನೀರು ಕುಡಿಯಲೇಬೇಕು.
  • ಲೈಂಗಿಕ ಚಟುವಟಿಕೆ ನಂತರ ತಪ್ಪದೆ ಮೂತ್ರ ವಿಸರ್ಜಿಸಬೇಕು. ಇದು ಸೋಂಕು ಹಬ್ಬುವುದನ್ನು ತಡೆಯುತ್ತದೆ.
  • ಸೋಡಿಯಮ್ ಪ್ರಮಾಣ ಕಡಿಮೆ ಇರುವ ಆಹಾರ ಸೇವಿಸಬೇಕು.
  • ಧೂಮಪಾನ ಮಾಡಬಾರದು ಮತ್ತು ರಾಸಾಯನಿಕಗಳು ಹೆಚ್ಚು ಉತ್ಪತ್ತಿಯಾಗುವ ಸ್ಥಳಕ್ಕೆ ಹೋಗಬಾರದು.
  • ದೇಹವನ್ನು ಆದಷ್ಟು ತಂಪಾಗಿಟ್ಟುಕೊಳ್ಳುವುದೊಳಿತು.