Asianet Suvarna News Asianet Suvarna News

ಬಿಗಿ ಅಪ್ಪುಗೆಯಲ್ಲಿದೆ ದಾಂಪತ್ಯದ ಯಶಸ್ಸು

ದಾಂಪತ್ಯವೆಂದರೆ ಕೇವಲ ಲೈಂಗಿಕ ಕ್ರಿಯೆ ಮಾತ್ರವಲ್ಲ. ಬೇರೆ ಬೇರೆ ವಿಭಿನ್ನ ಸ್ಪರ್ಶಗಳು ಸಂಗಾತಿಗಳ ಬಾಂಧವ್ಯವನ್ನು ಗಟ್ಟಿಗೊಳಿಸಬಲ್ಲದು. ಅದರಲ್ಲಿಯೂ ಅಪ್ಪುಗೆಯಿಂದ ಆತ್ಮೀಯತೆ ಮತ್ತಷ್ಟು ಹೆಚ್ಚುತ್ತದೆ.

Five health benefits of hugging your companion
Author
Bengaluru, First Published Sep 5, 2018, 6:13 PM IST

ಒಂದು ಪ್ರೀತಿಯ ಅಪ್ಪುಗೆ ದಾಂಪತ್ಯ ಜೀವನದಲ್ಲಿ ಎಲ್ಲವನ್ನೂ ಬದಲಾಯಿಸುತ್ತದೆ. ಅದು ಜಗಳವನ್ನೂ ಪ್ರೀತಿಯಾಗಿ ಪರಿವರ್ತಿಸಬಲ್ಲದು. ಆದುದರಿಂದ ಪ್ರತಿ ದಿನ ಸಂಗಾತಿಗೆ ಪ್ರೀತಿಯ ಅಪ್ಪುಗೆ ನೀಡಿ, ಅವರನ್ನು ಇನ್ನಷ್ಟು ಹತ್ತಿರ ಸೆಳೆಯಿರಿ. ಈ ಅಪ್ಪುಗೆಯಲ್ಲಿ ಅಂಥದ್ದೇನಿದೆ? 

Five health benefits of hugging your companion

- ಅಪ್ಪಿಕೊಳ್ಳುವುದರಿಂದ ಕೇವಲ ಸಂಗಾತಿಗೆ ಸಂತೋಷ ನೀಡುವುದು ಮಾತ್ರವಲ್ಲ. ಅವರಿಗೆ ಶಾರೀರಿಕ ರೂಪದಲ್ಲಿಯೂ ಸಹಕರಿಸುತ್ತದೆ. - - ಆಕ್ಸಿಟೋಸಿನ್ ಲೆವೆಲ್ ಅನ್ನು ಅಪ್ಪುಗೆ ಹೆಚ್ಚಿಸುತ್ತದೆ. ಇದರಿಂದ ಏಕಾಂತ, ಕೋಪ, ಇತರೆ ಋಣಾತ್ಮಕ ಭಾವನೆಗಳೂ ದೂರವಾಗುತ್ತವೆ.
- ಸುದೀರ್ಘವಾಗಿ ಅಪ್ಪಿಕೊಂಡರೆ ಸೆರೋಟೋನಿನ್ ಪ್ರಮಾಣವೂ ಹೆಚ್ಚುತ್ತದೆ. ಇದು ಮೂಡ್ ಸ್ವಿಂಗ್ ಆಗುವುದನ್ನು ತಪ್ಪಿಸುತ್ತದೆ. 
- ಇಬ್ಬರ ಬ್ಲಡ್ ಪ್ರೆಶರ್ ಮತ್ತು ಆಯಾಸ ದೂರವಾಗುತ್ತದೆ. ಇಬ್ಬರೂ ರಿಲಾಕ್ಸ್ ಆದರೆ ಸಂಬಂಧವೂ ವೃದ್ಧಿಯಾಗುತ್ತದೆ. 
- ಆಗಾಗ ಅಪ್ಪಿಕೊಳ್ಳುವುದರಿಂದ ಇಬ್ಬರ ಮಾನಸಿಕ ಸಮಸ್ಯೆಗಳು, ಕೆಲವು ರೋಗಗಳು ದೂರವಾಗುತ್ತವೆ. ಅಪ್ಪಿಕೊಳ್ಳುವುದರಿಂದ ಇಬ್ಬರಲ್ಲಿಯೂ ಭದ್ರತಾ ಭಾವ ಹೆಚ್ಚುತ್ತದೆ. ಆಗ ಇಬ್ಬರೂ ಖುಷಿಯಾಗಿರುತ್ತಾರೆ.
- ಅಪ್ಪಿಕೊಳ್ಳುವುದಿಂದ ಇಬ್ಬರಲ್ಲಿಯೂ ಮತ್ತೊಂದು ಭಾವವೂ ಹುಟ್ಟಿಕೊಳ್ಳಬಹುದು. ಆಗ ಸಂಬಂಧವನ್ನು ಮಧುವಾಗಿಸುವಲ್ಲಿ ಅನುಮಾನವೇ ಇಲ್ಲ. 

ಸಂಬಂಧ-ಬಾಂಧವ್ಯಕ್ಕೆ ಸಂಬಂಧಿಸಿದ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios