ಹುಟ್ಟಿದ ರಾಶಿಗೂ, ವ್ಯಕ್ತಿತ್ವಕ್ಕೂ ಇದೆಯಾ ಸಂಬಂಧ? ಯಾವ ರಾಶಿಯವರು ಹೇಗಿರ್ತಾರೆ?

Fear according to astrology
Highlights

ನಾವು ಹುಟ್ಟಿದ ಗಳಿಗೆಗೂ, ನಮ್ಮ ವ್ಯಕ್ತಿತ್ವಕ್ಕೂ ಸಂಬಂಧವಿದೆ ಎಂಬುವುದು ಅನಾದಿ ಕಾಲದ ನಂಬಿಕೆ. ಅದಕ್ಕೆ ಹುಟ್ಟಿದ ಕಾಲಕ್ಕೆ ಸರಿಯಾಗಿ ಜಾತಕ ಬರೆಸುತ್ತಾರೆ. ಅದರ ಫಲದ ಮೇಲೆ ಹಣೆ ಬರಹವನ್ನು ನಿರ್ಧರಿಸುತ್ತಾರೆ. ಆದರೆ, ಬೇರೆ ಜೋತಿಷ್ಯ ಶಾಸ್ತ್ರದಲ್ಲಿ ಈ ಬಗ್ಗೆ ಯಾವ ನಂಬಿಕೆ ಇದೆ? ಯಾವ ರಾಶಿಯಲ್ಲಿ ಹುಟ್ಟಿದವರಿಗೆ, ಎಂಥ ವ್ಯಕ್ತಿತ್ವ ಇರುತ್ತೆ? ಇಲ್ಲಿದೆ ಝಲಕ್. ನಿಮ್ಮ ಹುಟ್ಟಿದ ದಿನದೊಂದಿಗೆ ನೋಡಿಕೊಳ್ಳಿ.

ಏರಿಸ್ (ಮಾರ್ಚ್ 21 - ಏಪ್ರಿಲ್ 19)

ಹೆಚ್ಚು ಧೈರ್ಯಶಾಲಿ, ಬುದ್ಧೀವಂತರಾಗಿರುತ್ತಾರೆ. ಆದರೆ, ತಾವು ಮಾಡಿದ ಕೆಲಸ ತಪ್ಪಾಗುವುದೆಂಬ ಭಯ ಅವರಿಗಿರುತ್ತದೆ. ಇವರು ಯಾರಿಂದಲೂ ತಾವು ಮಾಡಿರುವ ಮತ್ತು ಮಾಡುತ್ತಿರುವ ಕೆಲಸ ತಪ್ಪೆಂದು ಕೇಳಲೂ ಇಷ್ಟ ಪಡುವುದಿಲ್ಲ, ನಾಯಕತ್ವದ ಪಾತ್ರ ಹೆಚ್ಚು ವಹಿಸುವರಾಗಿದ್ದು, ತಾಳ್ಮೆ ಕಡಿಮೆ ಇರುತ್ತದೆ. 

ಟಾರಸ್ ( ಏಪ್ರಿಲ್ 20 - ಮೇ 20)

ಹಣ ಕಾಸಿನ ವಿಚಾರದಲ್ಲಿ ಹೆಚ್ಚು ಚತುರರಾಗಿದ್ದು, ಅನಿರೀಕ್ಷಿತವಾದ ಘಟನೆಯಿಂದ ಎನಾದರೂ ಕಳೆದುಕೊಳ್ಳಬೇಕಾದರೆ, ಆತಂಕಕ್ಕೆ ಒಳಗಾಗುತ್ತಾರೆ. ಬಡತನ ಮತ್ತು ತನ್ನ ಕನಸು ನನಸಾಗುವುದಿಲ್ಲವೆಂದು ಹೆದರುತ್ತಾರೆ. ಸದಾ ದೃಢರಾಗಿರಲು ಇಚ್ಛಿಸುತ್ತಾರೆ. 

ಜೆಮಿನಿ (ಮೇ 21-ಜೋನ್ 20)

ಈ ರಾಶಿಯಲ್ಲಿ ಹುಟ್ಟಿದವರಿಗೆ ಏಕತಾನತೆಯ ಜೀವನ ಇಷ್ಟವಾಗುವುದಿಲ್ಲ. ನಿಧಾನವಾಗಿ ಸಿಲುಕಿದ ಭಾವನೆ ಉಂಟಾಗುತ್ತದೆ. ಅವರು ಹೆಚ್ಚಾಗಿ ಮೌನ ಮತ್ತು ನಿರ್ಲಿಪ್ತತೆಗೆ ಹೆದರುತ್ತಾರೆ. ಇವರು ಹೊಸತನ್ನು ಕಲಿಯಲು, ಹೊಸ ವಿಚಾರದಲ್ಲಿ ಅನುಭವ ಪಡೆಯಲು ಇಚ್ಛಿಸುತ್ತಾರೆ. ಸಂಕಷ್ಟಕ್ಕೆ ಸಿಲುಕಿದಾಗ ಇವರು ಬೇಗ ಖಿನ್ನತೆಗೊಳಗಾಗುತ್ತಾರೆ.

ಕ್ಯಾನ್ಸರ್ (ಜೂನ್ 21 - ಜುಲೈ 22)

ಎಷ್ಟೇ ಸ್ವತಂತ್ರಿಗಳಾದರೂ ಇವರು ಜನರ ಸುತ್ತ ಇರಲು ಬಯಸುತ್ತಾರೆ. ಏಕಾಂಗಿಯಾಗುವರು ಎಂಬ ಭಯ ಇವರಲ್ಲಿದ್ದು, ಬಿಡುವಿನ ಸಮಯದಲ್ಲಿ ಸ್ನೇಹಿತರು ಮತ್ತು ಕುಟುಂಬದವರನ್ನು ಭೇಟಿ ಮಾಡುತ್ತಾರೆ. 

ಲಿಯೋ (ಜುಲೈ 23 - ಆಗಸ್ಟ್ 22)

ಇವರು ಹೆಚ್ಚಾಗಿ ಗಮನ ಸೆಳೆಯುವ ಗುಣದವರಾಗಿದ್ದು, ಯಾವುದಾದರೂ ಒಂದು ವಿಚಾರದಲ್ಲಿ ಜನರ ಮಧ್ಯೆ ಇದ್ದು ಗಮನ ಸೆಳೆಯುತ್ತಿರುತ್ತಾರೆ. 

ವಿರ್ಗೊ (ಆಗಸ್ಟ್ 23 - ಸೆಪ್ಟೆಂಬರ್ 22)

ಇವರು ಜೀವನದಲ್ಲಿ ಪರಿಪೂರ್ಣರಾಗಿರುತ್ತಾರೆ. ತಿರಸ್ಕಾರವಾಗುವ ಬಗ್ಗೆ ಇವರಿಗೆ ಆತಂಕ ಹೆಚ್ಚು. ತಾನು ಮಾಡಿದ ಕೆಲಸದಿಂದ ತಮ್ಮನ್ನು ವರ್ಣಿಸಿಕೊಳ್ಳುತ್ತಾರೆ. ಅವರು ಬಯಸಿದಂತೆ ಜೀವನ ಸಾಗದಿದ್ದರೆ, ಆತಂಕಕ್ಕೊಳಗಾಗುತ್ತಾರೆ.

ಲಿಬ್ರಾ (ಸೆಪ್ಟೆಂಬರ್ 23- ಅಕ್ಟೋಬರ್ 22)

ಜೀವನವನ್ನು ಸುಲಭವಾಗಿ ಸಾಗಿಸುವರಾಗಿದ್ದು, ಕಷ್ಟವನ್ನು ಎದರಿಸುವ ಸಂದರ್ಭ ಬಂದರೆ ಧೈರ್ಯವೇ ಇರುವುದಿಲ್ಲ. ಅದರಿಂದ ಕೆಲವು ವಿಷಯವನ್ನು ಸುಲಭವಾಗಿಯೇ ಬಿಟ್ಟು ಕೊಡುತ್ತಾರೆ.

ಸ್ಕಾರ್ಪಿಯಾನ್(ಆಕ್ಟೋಬರ್ 23 - ನೆವೆಂಬರ್ 21)

ಹೆಚ್ಚು ಭಾವನಾತ್ಮಕ ರಾಶಿಯಾಗಿದ್ದು, ತನ್ನ ನೈಜ ಮುಖವನ್ನು ಬೇರೆಯವರಿಗೆ ತೋರಿಸಲು ಹೆದರುತ್ತಾರೆ. ತನ್ನ ಜೀವನದ ಕಹಿ ಕ್ಷಣವನ್ನು ನೆನೆಪಿಸಿಕೊಳ್ಳಲು ಇಚ್ಛಿಸುವುದೂ ಇಲ್ಲ.

ಸೆಜಿಟೇರಿಯಸ್ (ನೆವೆಂಬರ್ 22-ಡಿಸೆಂಬರ್ 21)

ಇವರು ಯಾರಿಂದನ್ನೂ ಮಾರ್ಗದರ್ಶನ ಪಡೆಯಲು ಬಯಸುವುದಿಲ್ಲ. ತನ್ನ ಸ್ವಂತ ಹಾದಿಯಲ್ಲಿ ನಡೆಯುವವರಾಗಿರುತ್ತಾರೆ. ಸ್ವತಂತ್ರ ಕಳೆದುಕೊಳ್ಳುವ ಆತಂಕದಲ್ಲಿರುತ್ತಾರೆ. 

ಕ್ಯಾಪ್ರಿಕಾರ್ನ್(ಡಿಸೆಂಬರ್ 22 - ಜನವರಿ 10)

ಸದಾ ಪರಿಪೂರ್ಣರಾಗಿರಲು ಬಯಸೋ ಇವರು ಸಾಧಿಸುವ ಛಲ ಹೊಂದಿರುತ್ತಾರೆ. ಆದರೆ, ಸಾಧಿಸೋ ಯಶಸ್ಸು ಹಾಗೂ ಸಾಧನೆ ಬಗ್ಗೆ ಇವರನ್ನು ಒಂದು ರೀತಿಯ ಭಯ ಕಾಡುತ್ತಿರುತ್ತದೆ. 

ಅಕ್ವೇರಿಯಸ್ (ಜನವರಿ 20 - ಫೆಬ್ರವರಿ 18)

ಇವರು ಶ್ರೀಸಾಮಾನ್ಯನಂತೆ ಬದುಕಲು ಇವರಿಗೆ ಇಷ್ಟವಿರೋಲ್ಲ. ತಾನು ತನ್ನು ಸ್ವಂತಿಕೆಯಿಂದ ಜನರು ಗುರುತಿಸಲಿ ಮತ್ತು ದೇಶದಲ್ಲಿ ಬದಲಾವಣೆ ತರಬೇಕೆಂದು ಬಯಸುತ್ತಾರೆ. ಅದರೆ, ಇಂಥ ಅಭಿಪ್ರಾಯ ವ್ಯಕ್ತಪಡಿಸಲು ಹೆದರುತ್ತಾರೆ. 

ಪೈಸಸ್ (ಫೆ 19 - ಮಾರ್ಚ್ 20)

ಇವರು ಜೀವನವೆಂದರೆ ಹೆದರುತ್ತಾರೆ. ಎಲ್ಲಿ ತಮ್ಮ ಬುದ್ಧೀವಂತಿಕೆ ಮತ್ತು ಸೃಜನಶೀಲತೆ ಕಡಿಮೆಯಾಗುತ್ತೋ ಎಂಬ ಭಯ ಇವರಿಗಿರುತ್ತದೆ. 

loader