ಲಿಕ್ಕರ್‌ ಶಾಪ್‌ನಲ್ಲಿ ತನ್ನ ಮಗ ಬಿಯರ್ ಖರೀದಿ ಮಾಡ್ತಾ ಇರೋದನ್ನ ಗಮನಿಸಿದ ತಂದೆ ಸೀದಾ ಅಂಗಡಿಯ ಒಳಹೊಕ್ಕು ತನ್ನ ಕೈಲಿದ್ದ ಚಪ್ಪಲಿಯನ್ನು ತೆಗೆದುಕೊಂಡು ಬಾರಿಸಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

ನವದೆಹಲಿ (ಜೂ.8): ವೀಕೆಂಡ್‌ ಅಲ್ವಾ ಮಜಾ ಮಾಡೋಣ, ಒಂದ್‌ ಸ್ವಲ್ಪ ಚಿಲ್ಲಡ್‌ ಬಿಯರ್‌ ಕುಡಿಯೋಣ ಅನಿಸೋದು ಸಹಜ. ಆದ್ರೆ ಮನೆಯಲ್ಲಿ ಅದೆಲ್ಲಾ ಮಾಡೋಕೆ ಆಗಲ್ಲ. ಯಾಕಂದ್ರೆ ಅಪ್ಪನ ಹದ್ದಿನ ಕಣ್ಣು ಅಲ್ಲಿರುತ್ತೆ. ಲಿಕ್ಕರ್‌ ಶಾಪ್‌ನಲ್ಲಿ ಬಿಯರ್‌ ಖರೀದಿ ಮಾಡಿ ಯಾವುದಾದರೂ ಅಡ್ಡಾದಲ್ಲಿ ಕುಳಿತು ಕುಡಿಯೋಣ ಅನ್ನೋ ಪ್ಲಾನ್‌ ಮಾಡಿದ್ರೆ ಈ ವಿಡಿಯೋ ನೋಡ್ಲೇಬೇಕು. ಹರಿಯಾಣದಲ್ಲಿ ಅಪ್ಪನ ಕಣ್ಣು ತಪ್ಪಿಸಿ ಲಿಕ್ಕರ್‌ ಶಾಪ್‌ಗೆ ಮಂದಿದ್ದ ಪುತ್ರ, ಬಿಯರ್‌ ಖರೀದಿ ಮಾಡ್ತಾನೆ. ಮಗ ಬಿಯರ್‌ ಖರೀದಿ ಮಾಡೋದನ್ನ ರೆಡ್‌ಹ್ಯಾಂಡ್‌ ಆಗಿ ನೋಡಿದ ಅಪ್ಪ ಒಂದು ಕ್ಷಣ ಕೂಡ ತಡಮಾಡದೇ ಲಿಕ್ಕರ್‌ ಶಾಪ್‌ಗೆ ಒಳಹೊಕ್ಕಿದ್ದು ಮಾತ್ರವಲ್ಲದೆ, ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದು ಮಗನಿಗೆ ಮನಸೋಇಚ್ಛೆ ಬಾರಿಸಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇಡೀ ಘಟನೆಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಂದೆ ಅಚಾನಕ್‌ ಆಗಿ ಲಿಕ್ಕರ್‌ ಶಾಪ್‌ನ ಒಳ ಬಂದ ಬಳಿಕ ಮಗನ ರಿಯಾಕ್ಷನ್‌ ಕೂಡ ಮಜವಾಗಿದೆ.

ಪೆಡ್ಲರ್‌ ಮೀಡಿಯಾ ಇನ್ಸ್‌ಟಾಗ್ರಾಮ್‌ ಅಕೌಂಟ್‌ನಲ್ಲಿ ಈ ವೈರಲ್‌ ವಿಡಿಯೋವನ್ನು ಶೇರ್‌ ಮಾಡಿಕೊಳ್ಳಲಾಗಿದೆ. ಇಲ್ಲಿಯವರೆಗೂ 8.3 ಮಿಲಿಯನ್‌ ವೀವ್ಸ್‌ಗಳು ಈ ವಿಡಿಯೋಗೆ ಸಿಕ್ಕಿದೆ. ಲಿಕ್ಕರ್‌ ಶಾಪ್‌ನ ಒಳಗೆ ಬಂದು ತಂದೆ ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆಯುವ ಕ್ಷಣದಿಂದ ವಿಡಿಯೋ ಆರಂಭವಾಗುತ್ತದೆ. ಮದ್ಯದಂಗಡಿಯ ಬಾಗಿಲಿನಲ್ಲೇ ಮನಸೋಇಚ್ಛೆ ಮಗನನನ್ನು ದಂಡಿಸಿದ್ದಾರೆ. ಇನ್ನೊಂದೆಡೆ ಬಿಯರ್‌ ಕ್ಯಾನ್‌ಗಳನ್ನು ಕೈಯಲ್ಲಿ ಹಿಡಿದುಕೊಂಡಿರುವ ಪುತ್ರ, ತಂದೆಯ ಬಳಿ ಬಿಟ್ಟುಬಿಡುವಂತೆ ಮನವಿ ಮಾಡಿದ್ದಾನೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ, ನನ್ನನ್ನು ಬಿಡಿ ಎಂದು ಹೇಳುತ್ತಿರುವುದು ದಾಖಲಾಗಿದೆ. ಅಲ್ಲದೆ, ನಾನು ಕುಡಿಯೋದಿಲ್ಲ, ಫ್ರೆಂಡ್‌ಗಾಗಿ ಲಿಕ್ಕರ್‌ ಪರ್ಚೇಸ್‌ ಮಾಡುತ್ತಿದ್ದೇನೆ ಎಂದಿದ್ದಾನೆ. ಇದನ್ನು ತಿಳಿಯದೇ ಚಪ್ಪಲಿಯಲ್ಲಿ ಹೊಡೆಯಬೇಡಿ ಎಂದು ಬೇಡಿಕೊಂಡಿದ್ದಾನೆ. ತಂದೆ ಮಗಳ ಜಗಳವನ್ನು ಲಿಕ್ಕರ್‌ಶಾಪ್‌ನಲ್ಲಿಯೇ ಇದ್ದ ಹಲವು ವೀಕ್ಷಣೆ ಮಾಡುತ್ತಿರುವುದು ದಾಖಲಾಗಿದೆ.

ಒಂದೇ ದಿನದಲ್ಲಿ ವಿಚ್ಛೇದನ ಪಡೆದ ಚಂದನ್‌-ನಿವೇದಿತಾ, ನಾಲ್ಕು ವರ್ಷದ ದಾಂಪತ್ಯಕ್ಕೆ ಕೊನೆ!

ಇನ್ನು ಹೆಚ್ಚಿನವರು ಈ ವಿಡಿಯೋಗೆ ಸಾಕಷ್ಟು ಕಾಮೆಂಟ್‌ ಮಾಡಿದ್ದಾರೆ. ಒಳ್ಳೆಯದು, ನಿಮ್ಮ ಮಕ್ಕಳಿಗೆ ಸರಿಯಾದ ಶಿಕ್ಷೆ ನೀಡಿದ್ದೀರಿ. ನೀವು ಮಾಡಿದ್ದು ಸರಿಯಾಗಿದ್ದು, ಬೇರೆಯವರೂ ಕೂಡ ಇದರಿಂದ ಕಲಿಯಬೇಕು ಎಂದಿದ್ದಾರೆ.

ಗಂಡ್‌ಮಕ್ಳಿಗೆ ಇರೋದು ಈ ನಾಲ್ಕೇ ಮೂಡ್‌ ಅಂತೆ, ಜಮೀರ್‌ ಅಹ್ಮದ್‌ ಮುಖಭಾವದಲ್ಲಿ ನಿಮಗೆ ಯಾವುದು ಇಷ್ಟವಾಯ್ತು!

ಈ ತಂದೆಗೆ ತನ್ನ ಮಗನ ಮೇಲೆ ಇರುವ ಪ್ರೀತಿಯನ್ನು ನಾನು ಈ ವಿಡಿಯೋದಲ್ಲಿ ಕಾಣುತ್ತಿದ್ದೇನೆ. ತಂದೆಯಿಂದ ಅಷ್ಟೆಲ್ಲಾ ಪೆಟ್ಟು ತಿನ್ನುತ್ತಿದ್ದರೂ, ಆತ ಮಾತ್ರ ತಂದೆಯ ಎದುರು ತನ್ನ ಧ್ವನಿಯನ್ನು ರೈಸ್‌ ಮಾಡಲಿಲ್ಲ ಎನ್ನುವುದನ್ನು ಗಮನಿಸಿದ್ದಾರೆ.

Scroll to load tweet…