‘ಒಂದು ವೇಳೆ ನಾನು ಕುಕ್ ಆಗಿರದಿದ್ರೆ ಒಬ್ಬ ಬ್ಯಾಂಕ್ ಉದ್ಯೋಗಿ ಆಗ್ತಿದ್ದೆ. ತಪ್ಪು ತಪ್ಪು ಲೆಕ್ಕ ಮಾಡ್ತಾ ಎಲ್ರಿಂದ ಉಗಿಸಿಕೊಂಡು ಹೖರಾಣಾಗ್ತಿದ್ದೆ’

ಹೀಗಂದು ಜೋರಾಗಿ ನಗ್ತಾರೆ ಕುನಾಲ್ ಕಪೂರ್.  ಅವರದ್ದು ಕಟ್ಟಾ ಪಂಜಾಬಿ ಫ್ಯಾಮಿಲಿ. ಆ ಜಾಯಿಂಟ್‌ ಫ್ಯಾಮಿಲಿಯದ್ದು ಒಂದು ಮಜಾ ಕತೆ. ಮನೆಯವರಿಗೆ ಕುನಾಲ್‌ ಸಹ ಬ್ಯಾಂಕಿಂಗ್‌ ಫೀಲ್ಡ್‌ ಗೆ ಬರಬೇಕು ಅಂತ ತುಂಬ ಆಸೆ ಇತ್ತು. ಆದರೆ ಕುನಾಲ್‌ಗೆ ಲೆಕ್ಕ ಅಂದ್ರೆ ದುಃಖ. ಯಾವತ್ತೂ ಲೆಕ್ಕದಲ್ಲಿ ಹಿಂದೆ. ಹೀಗಾಗಿ ಬ್ಯಾಂಕಿಂಗ್‌ ಫೀಲ್ಡ್‌ ಅಂದರೆ ದುಃಸ್ವಪ್ನ. ಆದರೆ ಅಡುಗೆಯಲ್ಲಿ ಆಸಕ್ತಿ. ಹಾಗಂತ ಅಡುಗೆ ಮನೆಗೆ ಅಡುಗೆಗೆ ಅಂತ ಹೋಗಿದ್ದು 14ನೇ ವಯಸ್ಸಿನಲ್ಲಿ. 

ಇವರ ಮನೆಯಲ್ಲಿ ತಾತನ ಕಟ್ಟಪ್ಪಣೆ ಇತ್ತು- ಪ್ರತೀ ದಿನ ಎಷ್ಟೇ ಬ್ಯುಸಿ ಇದ್ದರೂ ಮನೆಯ ಅಷ್ಟೂ ಜನ ಒಟ್ಟಿಗೇ ಊಟ ಮಾಡಬೇಕು ಅಂತ. ಅದು ನಿಯಮ. ಯಾರೂ ಅದನ್ನು ಮೀರುವ ಧೖರ್ಯ ಮಾಡುತ್ತಿರಲಿಲ್ಲ. ಕುನಾಲ್‌ಗೆ ಈ ಫ್ಯಾಮಿಲಿ ಡಿನ್ನರ್ ಬಹಳ ಇಷ್ಟ. ಇನ್ನೊಂದು ಮಜಾ ಅಂದ್ರೆ ವೀಕೆಂಡ್‌‌ನದ್ದು. ಆ ದಿನ ಅಡುಗೆ ಮನೆಯ ಸಂಪೂರ್ಣ ಜವಾಬ್ದಾರಿ ಇವರ ಅಪ್ಪ ಮತ್ತು ತಾತನದು. ಅವರ ಅಡುಗೆಯ ರುಚಿ ನೆನೆಸಿಕೊಂಡರೆ ಇಂದಿಗೂ ಬಾಯಲ್ಲಿ ನೀರೂರಿಸಿಕೊಳ್ಳುತ್ತಾರೆ ಕುನಾಲ್. ಇವರ ಅಡುಗೆಯ ಪ್ರೀತಿ ಶುರುವಾಗಿದ್ದು ಅಲ್ಲಿಂದಲೇ.

ಗೂಗಲ್ ಸಿಇಒ ಆಹಾರವಿದು...

ಕುನಾಲ್ ಮೊದಲ ಸಲ ಅಡುಗೆ ಮನೆಗೆ ಹೋದದ್ದು 14ನೇ ವಯಸ್ಸಲ್ಲಿ. ಮನೆಯವ್ರಿಗೆಲ್ಲ ಒಂದ್ ಬೆಸ್ಟ್‌ ಟೀ ಮಾಡಿ ಕೊಡ್ತೀನಿ ಅಂತ ಹೊರಟರು. ಆದರೆ ಅದು ಚಾಯ್ ಆಗದೇ ಮತ್ಯಾವುದೋ ರೂಪ ಪಡೆದು ಮನೆಯವರ ಕೈಯಲ್ಲಿ ಚೆನ್ನಾಗಿ ಪಾಠ ಹೇಳಿಸಿಕೊಂಡರು.

ಮುಂದೆ ಕುನಾಲ್‌ ಚೆಫ್‌ ಆಗೋದಕ್ಕೂ ಮುಂಚೆ ಹೊಟೇಲ್ ಮ್ಯಾನೇಜ್‌ಮೆಂಟ್ ಫೀಲ್ಡ್‌ಗೆ ಹೋಗ್ತೀನಿ ಅಂದಾಗ ಅಪ್ಪ ಮೊದಲ ಸಲ ಸುತಾರಾಂ ಒಪ್ಪಲಿಲ್ಲ. ಆದರೆ ಮಗನಿಗೆ ಹರ್ಟ್‌ ಮಾಡಬಾರದು ಅನ್ನುವ ಉದ್ದೇಶಕ್ಕೆ ಕೊನೆಯಲ್ಲಿ ಓಕೆ ಅಂದರು. ಆದರೆ ಇಂದು ಅವರಿಗೆ ಆ ಬಗ್ಗೆ ಹೆಮ್ಮೆ ಇದೆ.

ಕುನಾಲ್ ಚೆಫ್ ಆದಮೇಲೆ ಒಮ್ಮೆ ತಾತನಿಗೆ ಹಾಟ್ ಐಸ್ ಕ್ರೀಮ್ ಮಾಡಿಕೊಡುತ್ತೇನೆ ಅಂತಾರೆ. ತಾತನಿಗೆ ಜೋರು ನಗು. ಅವರಿಗೆ ಹಾಟ್ ಐಸ್ ಕ್ರೀಂ ಅನ್ನೋ ಬಗ್ಗೆ ಗೊತ್ತಿಲ್ಲ. ಹಿಂದೆ ಟೀ ಮಾಡಿ ಯಡವಟ್ಟು ಮಾಡಿದ್ದನ್ನೇ ನೆನಪಿಟ್ಟು ಬಿಸಿ ಐಸ್ ಕ್ರೀಂ ಮಾಡ್ಕೊಡ್ತಾನಂತೆ, ಹುಚ್ ಹುಡ್ಗ ಅಂತ ನಕ್ಕಿದ್ರು. ಆದ್ರೆ ಯಾವಾಗ ಅದೇ ಹುಚ್ ಹುಡ್ಗ ತಂದಿಟ್ಟ ಹಾಟ್ ಐಸ್ ಕ್ರೀಂ ಚಪ್ಪರಿಸಲು ಶುರು ಮಾಡಿದ್ರೋ, ತಾತನ ಮುಖಭಾವವೇ ಬದಲಾಯ್ತು. 'ನನ್ನ ಲೈಫ್‌ನಲ್ಲಿ ಇಂಥಾ ಟೇಸ್ಟಿ ಫುಡ್ ಇನ್ನೊಂದು ತಿಂದಿಲ್ಲ..' ಅಂತ ಉದ್ಗರಿಸಿದರು. ಆಗ ಕುನಾಲ್ ಅನ್ನ ಹಿಡಿಯೋರೇ ಇರಲಿಲ್ಲ. ನಾನು ಚೆಫ್ ಆಗಿದ್ದಕ್ಕೂ ಸಾರ್ಥಕ ಆಯ್ತು ಅಂದ್ಕೊಳ್ತಾರೆ.

ಡ್ರೈ ಕ್ಯಾಬೇಜ್ ರೆಸಿಪಿ

ಇಂದು ಕುನಾಲ್ ಭಾರತದ, ವಿಶ್ವದ ಜನಪ್ರಿಯ ಯುವ ಚೆಫ್.‌ ಮಾಸ್ಟರ್ ಚೆಫ್ ಇಂಡಿಯಾ, ಮಾಸ್ಟರ್ ಚೆಫ್ ಅಮೆರಿಕಾ ಸೀರೀಸ್‌ಗಳ ಮೂಲಕ ಮನೆ ಮಾತಾದವರು. ಇಷ್ಟೆಲ್ಲ ಆದ್ರೂ ಪಾರಂಪರಿಕ ಇಂಡಿಯನ್ ಅಡುಗೆಗಳ ಕ್ರೇಜ್. ಕುನಾಲ್ ಬ್ಲಾಗ್‌ನಲ್ಲಿ  ಟೇಸ್ಟಿ ಇಂಡಿಯನ್ ಹಾಗೂ ಮತ್ತಿತರ ಅಡುಗೆಗಳ ಅದ್ಭುತ ರೆಸಿಪಿ ಇದೆ. ಸ್ವತಃ ಕುನಾಲ್ ಈ ಅಡುಗೆ ಮಾಡ್ತಾರೆ. ಈ ಲಿಂಕ್ ಗೆ ವಿಸಿಟ್ ಮಾಡಿದ್ರೆ ಕುನಾಲ್ ಅಡುಗೆಗಳನ್ನು ನೀವೂ ಟ್ರೈ ಮಾಡಬಹುದು.