ಜೀವನದಲ್ಲಿ ಪದೇ ಪದೇ ಸೋಲು, ಹಿನ್ನಡೆ, ನಿರಾಸೆಗಳು ಎದುರಾಗುತ್ತಿದೆಯಾ? ಇದಕ್ಕೆ ಕೆಲ ಕಾರಣಗಳಿವೆ. ನಿಮ್ಮಲ್ಲಿ ಈ ಐದು ಗುಣಗಳು ಇದೆಯಾ ಎಂದು ಪರೀಕ್ಷಿಸಿ, ಇದ್ದರೆ ನಿಮಗೆ ಸೋಲೇ ಇರುವುದಿಲ್ಲ.

ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಹಲವು ಬಾರಿ ಪದೇ ಪದೇ ಸೋಲು ನಿರಾಸೆಗೊಳಿಸುತ್ತದೆ. ಜೀವನ ಉತ್ಸಾಹವನ್ನೇ ಕುಗ್ಗಿಸುತ್ತದೆ. ಹಿನ್ನಡೆ, ನಿರಾಸೆಗಳಿಂದ ಕೈಚೆಲ್ಲಿ ಕುಳಿತ ಘಟನೆಗಳು ನಡೆದಿದೆ. ಹೀಗಾಗಿ ಚಾಣಕ್ಯ ಜೀವನ ಕುರಿತು ಹೇಳಿದ ಹಲವು ಸಲೆಹೆಗಳಲ್ಲಿ ಪ್ರಮುಖವಾಗಿ ಜೀವನದಲ್ಲಿ ಎದುರಾಗುವ ಸೋಲಿಗೆ ಕೆಲ ಕಾರಣಗಳಿವೆ. ಮನುಷ್ಯ ಐದು ಗುಣಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಸೋಲು ಇರುವುದಿಲ್ಲ ಎಂದಿದ್ದಾರೆ. ಕೆಲ ಅಭ್ಯಾಸ, ನಿರ್ಧಾರಗಳು, ಕೊರತೆಗಳು ಸೋಲಿಗೆ ಕಾರಣಾಗುತ್ತದೆ. ಇದನ್ನು ಮೆಟ್ಟಿನಿಲ್ಲಲು ಉಪಾಯಗಳಿವೆ.

ಸೋಲಾಗದಿರಲು ಇರಬೇಕಾದ ಮೊದಲ ಗುಣ

ಮನುಷ್ಯನ ಅತೀ ದೊಡ್ಡ ಶಕ್ತಿಗಳಲ್ಲಿ ಆತ್ಮವಿಶ್ವಾಸ ಪ್ರಮುಖ. ತನ್ನ ಮೇಲೆ ತನಗೆ ನಂಬಿಕೆ ಇರಬೇಕು. ಯಾವುದೇ ಸಂದರ್ಭದಲ್ಲೂ ಆತಂಕ, ಗಲಿಬಿಲಿ ಅಗತ್ಯವಿಲ್ಲ. ಪ್ರತಿ ಕೆಲಸವನ್ನು ಪೂರ್ಣ ಸಪರ್ಪಣಾ ಮನೋಭಾವದಿಂದ ಪ್ರಯತ್ನಿಸಿದರೆ ಯಶಸ್ಸು ಸುಲಭ. ಹಾಗಂತೆ ಇಂತವರಿಗೆ ಸೋಲೇ ಎದುರಾಗುವಿದಿಲ್ಲ ಎಂದಲ್ಲ. ಆದರೆ ಸೋಲನ್ನು ಪಾಠವಾಗಿ ತೆಗೆದುಕೊಂಡು ಮಂದೆ ಸಾಗುತ್ತಾರೆ.

ಚಾಣ್ಯ ಪ್ರಮುಖವಾಗಿ ಐದು ಗುಣಗಳಿದ್ದರೆ ಸೋಲು ಹಿಮ್ಮೆಟ್ಟಿಸಲು ಸಾಧ್ಯ ಎಂದಿದ್ದಾರೆ. ಹಲವು ಬಾರಿ ಪ್ರಯತ್ನ , ನಿರ್ಧಾರ ಎಲ್ಲವೂ ಸರಿಯಾಗಿದ್ದರು ಸೋಲು ಎದರಾಗುತ್ತದೆ. ಈ ವೇಳೆ ಎದೆಗುಂದದೆ ಮುಂದುವರಿಯಬೇಕು. ಈ ಗುಣವನ್ನು ರೂಢಿಸಿಕೊಳ್ಳಬೇಕು. ಚಾಣಕ್ಯ ಹೇಳಿದ ಐದು ಗುಣ ಇಲ್ಲಿದೆ.

  1. ಆತ್ಮವಿಶ್ವಾಸ
  2. ಕಠಿಣ ಪರಿಶ್ರಮ
  3. ಜ್ಞಾನ ಹಾಗೂ ಅನುಭವ
  4. ಉಳಿತಾಯ
  5. ಜಾಗರೂಕತೆ ಹಾಗೂ ಅರಿವು

ಗುರಿ ತುಲುಪುದು ಸುಲಭದ ಮಾತಲ್ಲ. ಆದರೆ ನಿರಂತರ ಪ್ರಯತ್ನ, ಕಠಿಣ ಪರಿಶ್ರಮ ಅತ್ಯಗತ್ಯ. ಈ ಅಭ್ಯಾಸಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ. ಕೆಲವು ಬಾರಿ ತಕ್ಷಣಕ್ಕೆ ಸಿಗುವುದಿಲ್ಲ. ಆದರೆ ಸಿಕ್ಕಿ ಸಿಗುತ್ತದೆ. ಜ್ಞಾನ ಹಾಗೂ ಅನುಭವ ಅತೀ ಮುಖ್ಯವಾಗಿದೆ. ಯಾವುದೇ ಕೆಲಸಕ್ಕೆ ಕೈ ಹಾಕುವ ಮೊದಲು ಜ್ಞಾನ ಹೊಂದಿರಬೇಕು. ಕೆಲಸದಲ್ಲಿನ ಅನುಭವ ಪರಿಪಕ್ವ ಮಾಡುತ್ತಾ ಹೋಗುತ್ತದೆ. ಇದರಿಂದ ಯಶಸ್ಸು ಸುಲಭವಾಗುತ್ತದೆ. ಕಲಿತ ವಿಷಯ ತಕ್ಷಣಕ್ಕೆ ಬಳಕೆಯಾಗದಿದ್ದರೂ, ಸರಿಯಾದ ಸಮಯ ಬಂದಾಗ ಕಷ್ಟದ ಸನ್ನಿವೇಶಗಳಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲು ಈ ಜ್ಞಾನ ನೆರವಾಗುತ್ತದೆ.

ಮನುಷ್ಯ ಜೀವನದಲ್ಲಿ ಆರ್ಥಿಕ ಸ್ಥಿರತೆ ಅತೀ ಅವಶ್ಯಕ. ಎಲ್ಲರೂ ಇದೇ ಆರ್ಥಿಕ ಸ್ಥಿರತೆಗಾಗಿ ಹೋರಾಡುತ್ತಾರೆ, ದುಡಿಯುತ್ತಾರೆ, ಶ್ರಮವಹಿಸುತ್ತಾರೆ. ದಿಢೀರಿ ಎದುರಾಗುವ ಖರ್ಚುಗಳು, ಸಮಸ್ಯೆಗಳಿಂದ ವಿಚಲಿತರಾಗಬಾರದು. ನಿರ್ವಹಿಸುವ ಗುಣ ಕಲಿತುಕೊಳ್ಳಬೇಕು. ಉಳಿತಾಯದ ಅಭ್ಯಾಸ ರೂಢಿಸಿಕೊಂಡರೆ ಅನಿರೀಕ್ಷಿತ ಹಾಗೂ ಭವಿಷ್ಯದ ಚಿಂತೆ ಇರುವುದಿಲ್ಲ. ಎಚ್ಚರಿಕೆ ವಹಿಸುವುದು ಅತೀ ಅಗತ್ಯ. ನೀವು ಎಲ್ಲಿದ್ದರೂ ಅಥವಾ ಏನೇ ಮಾಡುತ್ತಿದ್ದರೂ ಸುತ್ತಲಿನ ಪರಿಸ್ಥಿತಿಯತ್ತ ಗಮನ ಹರಿಸಬೇಕು. ಜಾಗರೂಕತೆಯಿಂದ ಇರುವುದರಿಂದ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಮತ್ತು ಸಂಭಾವ್ಯ ತೊಂದರೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.