ಮುಖದ ಕಾಂತಿ ಹೆಚ್ಚಾಗಬೇಕು, ಫಳ ಫಳ ಹೊಳೀಬೇಕು ಅಂತ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಆದರೆ, ಬ್ಯೂಟಿ ಪಾರ್ಲರ್‌ಗೆ ಹೋಗಿ ಸಾವಿರಾರು ರೂ. ಕೊಟ್ಟು ಅದೂ ಇದು ಅಂತ ಮಾಡಿಸಿಕೊಳ್ಳೋ ಬದಲು, ಮಾರುಕಟ್ಟೆಯಲ್ಲಿ ಲಭ್ಯವಿರೋ ಈ ಶೀಟ್ ಟ್ರೈ ಮಾಡಿ.

ಕ್ಷಣದಲ್ಲಿಯೇ ಮುಖದ ಕಾಂತಿ ಹೆಚ್ಚಿಸಲು ಮಾರುಕಟ್ಟಿಗೆ ಬಂದಿದೆ ಫೇಸ್ ಮಾಸ್ಕ್ ಶೀಟ್. ಇದು ಕೊರಿಯನ್ ದೇಶದಲ್ಲಿ ಚರ್ಮ ಆರೈಕೆಗಾಗಿ ಬಳಸುತ್ತಿದ್ದು, ಎಲ್ಲೆಡೆ ಜನರಿಗೆ ಲಭ್ಯವಾಗುತ್ತಿದ್ದು, ಜನಪ್ರಿಯವಾಗುತ್ತಿದೆ. ಯಾವ ಹಣ್ಣು, ಕ್ರೀಮ್ ಅಥವಾ ಸೌಂದರ್ಯವರ್ಧಕಗಳೂ ಇಲ್ಲದ ಮುಖದ ಕಾಂತಿಯನ್ನು ಈ ಶೀಟ್‌ನಿಂದ ಹೆಚ್ಚಿಸಿಕೊಳ್ಳಬಹುದು. ಇದು ಸಾಮಾನ್ಯ ಫೇಸ್ ಶೀಟ್ ಅಲ್ಲವೇ ಅಲ್ಲ. ತ್ವಚೆಗೆ ಅಗತ್ಯವಾದ ಅಂಶಗಳು ಈ ಶೀಟ್‌ನಲ್ಲಿದ್ದು, ಯಾವುದೇ ಅಡ್ಡ ಪರಿಣಾಮವನ್ನೂ ಬೀರದೇ ಮುಖದ ಕಾಂತಿ ಹೆಚ್ಚಿಸುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚರ್ಮದ ಸಮಸ್ಯೆ ನಿವಾರಣೆಯಾಗಿ, ಒಣ ಚರ್ಮ ಸಮಸ್ಯೆಯನ್ನು ಕೂಡಲೇ ಬಗೆಹರಿಸುತ್ತದೆ. ಡ್ರೈ ಚರ್ಮದಲ್ಲಿ ನೀರಿನಾಂಶ ಹೆಚ್ಚಿಸಿ, ತಕ್ಷಣವೇ ಕಾಂತಿ ಹೆಚ್ಚಿಸುತ್ತದೆ. ಮುಖಕ್ಕೆ ಅಂಟಿಸಿಕೊಳ್ಳಬೇಕಾದ ಈ ಶೀಟಿನಿಂದ ಚರ್ಮ ತೇವಾಂಶವನ್ನು ಹೀರಿಕೊಳ್ಳುತ್ತದೆ.

ಬಳಸೋದು ಹೇಗೆ?

ಈ ಶೀಟನ್ನು ಬಳಸುವ ಮುನ್ನ ಚರ್ಮವನ್ನು ಶುದ್ಧ ಮಾಡಿಕೊಳ್ಳಬೇಕು. ಒಣಗಿದ ಚರ್ಮದ ಮೇಲೆ 20-25 ನಿಮಿಷಗಳ ಕಾಲ ಬಿಡಬೇಕು ನಂತರ ಮಾಸ್ಕ್ ತೆಗೆದಾಗ ಮುಖದ ಮೇಲೆ ತೇವಾಂಶವಿರುತ್ತದೆ. ಅದನ್ನು ಮುಖದ ಮೇಲೆ ಅಂಟಿಸಿಕೊಂಡು, ಮಸಾಜ್ ಮಾಡಿಕೊಳ್ಳಬೇಕು. ಒಂದು ಶೀಟನ್ನು ಒಮ್ಮೆ ಮಾತ್ರ ಬಳಸಿಕೊಳ್ಳಬಹುದು. ಇದನ್ನು ವಾರಕ್ಕೆ 2-3 ಸಲ ಬಳಸಿದಾಗ ಮುಖದ ಕಾಂತಿ ಹೆಚ್ಚಿಸಿ, ಚರ್ಮವನ್ನು ಆರೋಗ್ಯವಾಗಿಡಬಹುದು.