Cancer ರೋಗಿಗಿಳಿಗೆ....ಕೆಮೋಯಿಂದ ಕೂದಲುದುರಿದರೆ ಮದ್ದು!
ಕ್ಯಾನ್ಸರ್ ಪೇಶಂಟ್ ಎಂದರೆ ದೈಹಿಕ ನೋವಿನೊಂದಿಗೆ ಮಾನಸಿಕ ತಲ್ಲಣಗಳನ್ನೂ ಅನುಭವಿಸುತ್ತಿರುತ್ತಾರೆ. ಅದರ ಚಿಕಿತ್ಸೆಯಲ್ಲಿ ಬಹುಮುಖ್ಯವಾದುದು ಕೀಮೋಥೆರಪಿ. ಈ ಚಿಕಿತ್ಸೆ ಕಾಯಿಲೆಯಿಂದ ದೂರ ಮಾಡಲು ಉತ್ತಮ ಪರಿಣಾಮಗಳನ್ನು ಬೀರುತ್ತದೆಯಾದರೂ, ತಲೆಕೂದಲು ಉದುರಿ ಬೋಳಾಗುವುದು, ಕೇಮೋಥೆರಪಿ ಪಡೆವ ರೋಗಿಯ ದೊಡ್ಡ ತಲೆಬಿಸಿ. ಹೀಗೆ ಉದುರಿದ ಕೂದಲು ಬೇಗ ಬರಬೇಕೆಂದರೆ ಏನು ಮಾಡಬೇಕು?
ಕ್ಯಾನ್ಸರ್ ಪೇಶೆಂಟ್‌ಗಳು ಕಾಯಿಲೆ ಬಂದಾಗಿನಿಂದ ಹಿಡಿದು, ಚಿಕಿತ್ಸೆ ಪಡೆದು ಗುಣಮುಖರಾಗುವವರೆಗೂ ನೂರೆಂಟು ನೋವುಗಳನ್ನು ತಿಂದಿರುತ್ತಾರೆ. ಅದರಲ್ಲೂ ಕೀಮೋಥೆರಪಿ ಪಡೆಯುತ್ತಿರುವವರದು ಕ್ಯಾನ್ಸರ್‌ನಿಂದ ಹೊರಬರುತ್ತಿರುವ ಸಂತೋಷದ ಜೊತೆಗೇ ಕೂದಲುದುರಿ ವಿಕಾರವಾಗುವ ಭಯ, ದುಃಖ. ಕೀಮೋಥೆರಪಿಯಲ್ಲಿ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಔಷಧ ನೀಡಲಾಗುತ್ತದೆಯಾದರೂ, ಆ ಡ್ರಗ್ಸ್‌ಗೆ ಆರೋಗ್ಯಕಾರಿ ಕೋಶಗಳು ಹಾಗೂ ಕ್ಯಾನ್ಸರ್ ಕೋಶಗಳ ನಡುವಿನ ವ್ಯತ್ಯಾಸ ತಿಳಿಯದು.
ಇಲ್ಲಿನ ನೀರು ಕುಡಿದರೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ!
ಹೀಗಾಗಿ, ಅದು ಎರಡು ರೀತಿಯ ಕೋಶಗಳ ಮೇಲೂ ದಾಳಿ ನಡೆಸುತ್ತದೆ. ಈ ವಿಧಾನದಲ್ಲಿ ಹೇರ್ ಫೋಲಿಕಲ್‌ಗಳ ಮೇಲೆ ಕೂಡಾ ದಾಳಿ ನಡೆಯಬಹುದು. ಅದು ತಲೆಯ, ಕಣ್ಣ ರೆಪ್ಪೆಯ, ಹುಬ್ಬಿನ, ಕಂಕುಳಿನ ಸೇರಿದಂತೆ ದೇಹದ ಎಲ್ಲ ಭಾಗದಲ್ಲಿ ಕೂದಲುದುರಲು ಕಾರಣವಾಗುತ್ತದೆ. ಚಿಂತೆ ಬೇಡ. ಚಿಕಿತ್ಸೆ ಮುಗಿಯುತ್ತಿದ್ದಂತೆಯೇ ಉದುರಿದ ಕೂದಲು ಹುಟ್ಟುತ್ತದೆ. ಬಾಚುವಷ್ಟು ಕೂದಲು ಮತ್ತೆ ಬೆಳೆಯಲು ಕನಿಷ್ಠ ವರ್ಷವಾದರೂ ಬೇಕಾದೀತು. ಆದರೆ, ಹೀಗೆ ಉದುರಿದ ಕೂದಲು ಬೇಗ ಬೆಳೆಯುವಂತೆ ಮಾಡಲು ಕೆಲವು ದಾರಿಗಳಿವೆ. ಅವುಗಳನ್ನಿಲ್ಲಿ ಕೊಡಲಾಗಿದೆ.
1. ವಿಟಮಿನ್ಸ್ ಹಾಗೂ ಮಿನರಲ್ಸ್ ತೆಗೆದುಕೊಳ್ಳಿ
ವಿಟಮಿನ್‌ಗಳು ಹಾಗೂ ಮಿನರಲ್‌ಗಳು ಕೂದಲ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹೀಗಾಗಿ ವಿಟಮಿನ್ ಹಾಗೂ ಮಿನರಲ್‌ಗಳು ಹೇರಳವಾಗಿರುವ ಆಹಾರವನ್ನು ಸೇವಿಸಿ. ಇದರೊಂದಿಗೆ ವಿಟಮಿನ್ ಸಪ್ಲಿಮೆಂಟ್‌ಗಳನ್ನೂ ತೆಗೆದುಕೊಳ್ಳಬಹುದು. ದಪ್ಪವಾಗಿ ಕೂದಲು ಹುಟ್ಟಲು ಬಯೋಟಿನ್ ಎಂಬ ವಿಟಮಿನ್ ಬೇಕು. ಇನ್ನು ವಿಟಮಿನ್ ಇ ಹಾಗೂ ಸಿಗಳು ಕೂದಲ ಬುಡದ ಆರೋಗ್ಯ ಕಾಪಾಡುತ್ತವೆ. ವಿಟಮಿನ್ ಬಿ ನೆತ್ತಿಯ ಭಾಗದಲ್ಲಿ ರಕ್ತ ಸಂಚಲನ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.
2. ಪ್ರೋಟೀನ್ ಹೆಚ್ಚಿರುವ ಆಹಾರ ಸೇವಿಸಿ
ನಮ್ಮ ಕೂದಲು ಪ್ರೋಟೀನ್‌ನಿಂದಲೇ ಆಗಿರುವುದರಿಂದ ಕೂದಲಿಗೆ ಪ್ರಮುಖವಾಗಿ ಬೇಕಾದುದೇ ಪ್ರೋಟೀನ್. ನಿಮ್ಮ ಡಯಟ್‌ನಲ್ಲಿ ಸಸ್ಯಜನ್ಯ ಹಾಗೂ ಪ್ರಾಣಿಜನ್ಯ ಪ್ರೋಟೀನ್‌ಗಳನ್ನು ಸೇರಿಸಿ. ಮಾಂಸ, ಮೊಟ್ಟೆಗಳು, ಹಾಲು, ಟೋಫು ಹಾಗೂ ದಾಲ್‌ನಲ್ಲಿ ಹೇರಳ ಪ್ರೋಟೀನ್ ಇರುತ್ತದೆ. ಇವುಗಳನ್ನು ಅಡಿಗೆಯಲ್ಲಿ ಹೆಚ್ಚು ಸೇರಿಸಿ. ಸಕ್ಕರೆಯನ್ನು ಬಿಟ್ಟು ಬಿಡಿ.
ಸುಟ್ಟಿದ್ದನ್ನು ತಿಂದರೆ ಬರಬಹುದು ಕ್ಯಾನ್ಸರ್...!
3. ಐನೋಸಿಟಾಲ್ ಸೇವಿಸಿ
ಐನೋಸಿಟಾಲ್ ಎಂಬುದು ಒಂದು ಕಾರ್ಬೋಹೈಡ್ರೈಟ್ ಆಗಿದ್ದು, ಕೂದಲ ವೇಗದ ಬೆಳವಣಿಗೆಗೆ ಸಹಾಯಕವಾಗಿದೆ. ನೆತ್ತಿಯ ಕೋಶಗಳು ಆರೋಗ್ಯವಂತವಾಗಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಇವು ನೋಡಿಕೊಳ್ಳುತ್ತವೆ. ಹೀಗಾಗಿ ಐನೋಸಿಟಾಲ್ ಹೆಚ್ಚಿರುವ ಡ್ರೈಫ್ರೂಟ್ಸ್, ಸೊಪ್ಪು ತರಕಾರಿಗಳು, ಇಡಿ ಬೇಳೆಕಾಳುಗಳು, ಸಿಟ್ರಸ್ ಹಣ್ಣುಗಳನ್ನು ಹೆಚ್ಚು ಸೇವಿಸಿ.
4. ಎಸೆನ್ಶಿಯಲ್ ಆಯಿಲ್ ಬಳಸಿ
ಎಸ್ಸೆನ್ಶಿಯಲ್ ಆಯಿಲ್‌ಗಳು ಕೀಮೋ ಬಳಿಕ ಕೂದಲು ಮತ್ತೆ ಬೆಳೆಯುವುದನ್ನು ಪ್ರೋತ್ಸಾಹಿಸುತ್ತವೆ. ರೋಸ್‌ಮೆರಿ, ಲ್ಯಾವೆಂಡರ್ ಇತ್ಯಾದಿ ಎಣ್ಣೆಗಳನ್ನು ನೇರವಾಗಿ ನೆತ್ತಿಗೆ ಹಚ್ಚಿ ಪ್ರತಿದಿನ ಮಸಾಜ್ ಮಾಡಿ. ಇದು ಕೂದಲನ್ನು ಬುಡದಿಂದಲೇ ಬಲವಾಗಿಸುತ್ತದೆ.
5. ಫ್ಯಾಟಿ ಆ್ಯಸಿಡ್ ಬಳಕೆ ಹೆಚ್ಚಿಸಿ
ಒಮೆಗಾ 3 ಹಾಗೂ ಒಮೆಗಾ 6 ಫ್ಯಾಟಿ ಆ್ಯಸಿಡ್ ಸಪ್ಲಿಮೆಂಟ್ ತೆಗೆದುಕೊಳ್ಳಬಹುದು. ಇವು ಕೂದಲ ಬೆಳವಣಿಗೆಗೆ ವೇಗ ನೀಡುತ್ತವೆ. ಸಾಲ್ಮೋನ್ ಮೀನುಗಳು, ಫ್ಲ್ಯಾಕ್ಸ್ ಬೀಜಗಳು, ಹೆರಿಂಗ್ಸ್ ಮೀನುಗಳಲ್ಲಿ ಈ ಫ್ಯಾಟಿ ಆ್ಯಸಿಡ್ ಹೇರಳವಾಗಿರುತ್ತದೆ. ಆಹಾರದಲ್ಲಿ ಇವುಗಳ ಬಳಕೆ ಹೆಚ್ಚಿಸಿದರೂ ಆದೀತು.
ಇವುಗಳೆಲ್ಲದರ ಹೊರತಾಗಿಯೂ ಕೆಮಿಕಲ್‌ಗಳನ್ನು ತಲೆಗೆ ಬಳಸದಂತೆ ಎಚ್ಚರ ವಹಿಸಿ. ಯಾವುದೇ ಹೇರ್ ಸ್ಟೈಲಿಂಗ್, ಕಲರಿಂಗ್ ಉತ್ಪನ್ನಗಳನ್ನು ಬಳಸಬೇಡಿ. ಕೆಮಿಕಲ್‌ರಹಿತ ಉತ್ಪನ್ನಗಳಿಂದ ತಲೆ ತೊಳೆದುಕೊಳ್ಳಿ.
ಸುಮ್ ಸುಮ್ನೆ ತುರಿಸೋ ತಲೆಗೆ ಇಲ್ಲಿದೆ ಮನೆ ಮದ್ದು....
ಕೀಮೋ ಹಾಗೂ ಅದರ ಬಳಿಕದ ಕೂದಲ ಬೆಳವಣಿಗೆ ಕುರಿತ ಕೆಲ ಸಂಗತಿಗಳು ಇಲ್ಲಿವೆ...
- ಕೀಮೋ ಬಳಿಕ ಕೂದಲ ಟೆಕ್ಸ್ಚರ್ ಬದಲಾಗಬಹುದು. ಸಾಫ್ಟ್ ಕೂದಲು ಹೊಂದಿದವರಿಗೆ ಪೂರ್ಣ ಗುಂಗುರು ಕೂದಲು ಬರಬಹುದು. ಕೂದಲಿನ ಬಣ್ಣವೂ ಬದಲಾಗಬಹುದು.
- ತಲೆಗೆ ಕಟ್ಟಿಕೊಳ್ಳುವ ಬಟ್ಟೆಯು ಕೂದಲು ಬೆಳೆಯುವ ವೇಗ ಕಡಿಮೆಗೊಳಿಸುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಇದು ನಿಜವಲ್ಲ.
- ಕೀಮೋಥೆರಪಿ ಮಾಡಿಸಿಕೊಂಡವರಿಗೆಲ್ಲ ಕೂದಲುದುರಬೇಕೆಂದೇನಿಲ್ಲ.
ಜೊಜೊಬಾ ಎಣ್ಣೆ ಏನೂ ಜುಜುಬಿಯಲ್ಲ, ತ್ವಚಾ ಆರೋಗ್ಯಕ್ಕೆ ಬೇಕೇ ಬೇಕು...
- ಕೂದಲು ಕೇವಲ ಒಂದು ಭಾಗದಲ್ಲಿ ಅಥವಾ ಇಡೀ ದೇಹದಲ್ಲಿ ಉದುರಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.
- ಸಾಫ್ಟ್ ಕೂದಲು ಹೊಂದಿರುವವರಿಗೆ ಕೀಮೋ ಥೆರಪಿ ಮುಗಿದ 2 ವಾರಗಳಲ್ಲೇ ಕೂದಲು ಬೆಳೆಯಲು ಆರಂಭವಾಗಬಹುದು.