ಸುಟ್ಟಿದ್ದನ್ನು ತಿಂದರೆ ಬರಬಹುದು ಕ್ಯಾನ್ಸರ್...!

ಗಡಿ ಬಿಡಿಯಲ್ಲಿ ಅಡುಗೆ ಸೀದಿರುತ್ತದೆ. ಅಥವಾ ಸುಟ್ಟು ಹೋಗಿರುತ್ತದೆ. ಸುಟ್ಟು ಕರಕಲಾಗಿರುವ ಆಹಾರ ತಿಂದರೆ ಆರೋಗ್ಯಕ್ಕೆ ಹಾನಿ ಎಂದು ಹೇಳುತ್ತದೆ ಸಂಶೋಧನೆಯೊಂದು. 

Reason to never eat burnt food

ಬ್ರೆಡ್, ರೊಟ್ಟಿ...ಎಲ್ಲವನ್ನೂ ತುಸು ಹೆಚ್ಚು ಸುಟ್ಟರೂ ರುಚಿ ಕೆಡುತ್ತದೆ. ಆದರೆ, ಕೆಲವೊಮ್ಮೆ ಅನಿವಾರ್ಯವಾಗಿ ತಿಂದು ಬಿಡುತ್ತೇವೆ. ಆದರೆ, ಇಂಥ ಆಹಾರವನ್ನು ಪದೆ ಪದೇ ತಿನ್ನುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ ಎಂದು ಸಂಶೋಧನೆಯೊಂದು ದೃಢಪಡಿಸಿದೆ.

ಫಟಾ ಫಟ್ ಎಂದು ತಯಾರಿಸುವ ಮ್ಯಾಗಿಗಿದೆ ಇತಿಹಾಸ!

ಆಹಾರ ಪದಾರ್ಥಗಳು ಕಪ್ಪಾಗುವಷ್ಟು ಒಲೆ ಮೇಲಿಟ್ಟಾಗ ಆಸ್ಪಾರಾಜೀನ್ ಎಂಬ ಅಂಶ ಬಿಡುಗಡೆಯಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ. ಸುಟ್ಟ ಆಹಾರ ಪದಾರ್ಥಗಳು ನರಗಳನ್ನು ಆ್ಯಕ್ಟಿವ್ ಆಗಿ ಇಡುವಲ್ಲಿ ವಿಫಲವಾಗುತ್ತದೆ. ಡಿಎನ್‌ಎಯನ್ನೇ ಹಾಳು ಮಾಡಿ, ಜೀವಕೋಶಗಳನ್ನೇ ಹಾಳು ಮಾಡುವಷ್ಟು ಈ ಅಂಶಗಳು ಹಾನಿಯನ್ನುಂಟು ಮಾಡುತ್ತದೆ. 

ಆದ್ದರಿಂದ ಒಲೆ ಮೇಲಿಟ್ಟ ಆಹಾರ ಸುಡದಂತೆ ಅಥವಾ ಬುಡ ಹಿಡಿಯದಂತೆ ತಡೆಯಲು ಸಣ್ಣ ಉರಿಯಲ್ಲಿಯೇ ಅಡುಗೆ ಮಾಡುವುದನ್ನು ರೂಢಿಸಿಕೊಳ್ಳುವುದು ಒಳಿತು. ಇದರಿಂದ ಗ್ಯಾಸ್ ಉಳಿಯುವುದಲ್ಲದೇ, ಆಹಾರವೂ ಕರಕಲಾಗುವುದಿಲ್ಲ. ಇದು ಆರೋಗ್ಯವಂತ ಮನುಷ್ಯನಿಗೆ ಅಗತ್ಯವೆಂಬುವುದು WHO ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ. 

Latest Videos
Follow Us:
Download App:
  • android
  • ios