ಫಟಾ ಫಟ್ ಸಾರು ಮಾಡೋದು ಹೀಗೆ..?

First Published 29, Jul 2018, 10:47 AM IST
Easy way of cooking dal samber
Highlights

ಹಸಿದ ಹೊಟ್ಟೆಗೆ ಬೆಚ್ಚನೆಯ ಅನುಭವ ನೀಡೋ ತಿಳಿಸಾರು ಎಲ್ಲರಿಗೂ ಆಲ್‌ಟೈಮ್ ಫೇವರೆಟ್. ತುಸು ಬೇಳೆ, ಟೊಮೆಟೋ ಹಾಕಿದರೆ ಸಾಕು, ರುಚಿಯಾಗುವ ಈ ಸಾರನ್ನು ಮಾಡುವುದು ಹೇಗೆ?

ಸಾಮಾನ್ಯವಾಗಿ ಅಡುಗೆ ಕಲಿಯೋರು ಮಾಡೋದು ಬೇಳೆ ಸಾರನ್ನು. ನೀರ್ ನಿರಾಗಿದ್ದರೂ ಸಾರು ರುಚಿಯಾಗಿದೆ ಎಂದರೆ, ಅಡುಗೆಯಲ್ಲಿ ಪರ್ಫೆಕ್ಟ್ ಎಂದರ್ಥ. ಇಂಥ ಸಾರು ಮಾಡೋದು ಹೇಗೆ?

ಬೇಕಾಗುವ ಸಾಮಾಗ್ರಿ:

 • 2 ಸ್ಪೂನ್ ತೊಗರಿಬೇಳೆ 
 • ತೆಂಗಿನಕಾಯಿ ತುರಿ
 • ಸಾರಿನ ಪುಡಿ
 • ಅರಿಶಿಣ
 • ಎಣ್ಣೆ 
 • ಸಾಸಿವೆ
 • ಜೀರಿಗೆ
 • ಇಂಗು
 • ಬೆಲ್ಲದ ಚೂರು
 • ಕೊತ್ತಂಬರಿ ಸೊಪ್ಪು
 • ಕರಿಬೇವು
 • ಹುಣಸೆ ಹಣ್ಣು
 • ಉಪ್ಪು

ಮಾಡುವ ವಿಧಾನ: 

- ಒಗ್ಗರಣೆ : ಸಾಸಿವೆ, ಇಂಗು ಮತ್ತು ಕರಿಬೇವು ಹುರಿದು ಬಗ್ಗರಣೆ ಮಾಡಿ ಕೊಳ್ಳಿ.

- ಕಾದಿರುವ ನೀರಿಗೆ ಬೇಯಿಸಿದ ತೊಗರಿಬೇಳೆ ಹಾಗೂ ಟೊಮ್ಯಾಟೋ ಸೇರಿಸಿ ಕುದಿಸಿ. ಅದಕ್ಕೆ ಒಂದು ಚಿಟಿಕೆ ಅರಿಶಿಣ ಮತ್ತು ಎಣ್ಣೆ ಸೇರಿಸಿ.  ತೊಗರಿಬೇಳೆ ಚೆನ್ನಾಗಿ ಕುದ್ದ ನಂತರ ಉಪ್ಪು ಮತ್ತು ಹುಣಸೆ ರಸ ಹಾಕಿ. ಕೆಲ ಸಮಯದ ನಂತರ ಮಾಡಿದ ಒಗ್ಗರಣೆ ಸೇರಿಸಿ ಸ್ವಲ್ಪ ಸಮಯ ಕುದಿಸಿ. 

loader