ಮೇಷ
ನೀವು ಕಷ್ಟಪಟ್ಟು ದುಡಿದದ್ದೇ ಮೂರಾಬಟ್ಟೆ
ಯಾಗಿದೆ. ಅಂಥದ್ದರಲ್ಲಿ ನಿಮಗೆ ಬೇರೊಬ್ಬರು
ಪುಕ್ಕಟ್ಟೆ ಕೊಡುವ ಹಣವು ಬೇಕಾ? ಯೋಚಿಸಿ.

ವೃಷಭ
ಕೂಡಿಟ್ಟ ಹಣವು ಈಗ ನಿಮ್ಮ ಸಹಾಯಕ್ಕೆ
ಬರಲಿದೆ. ಮಗಳಿಂದ ಬರಲಿವ ಫೋನ್
ಕಾಲ್ ನಿಮ್ಮಲ್ಲಿ ಹೊಸ ಹುರುಪನ್ನು ತರಲಿದೆ.

ಮಿಥುನ
ಧಾರ್ಮಿಕ ಆಚರಣೆಗಳಲ್ಲಿ ಹೆಚ್ಚು ಆಸಕ್ತಿ
ತೋರುವಿರಿ. ವ್ಯಾಪಾರ-ವಾಣಿಜ್ಯಗಳ
ಸಂಬಂಧದಲ್ಲಿ ಗಣ್ಯರೊಂದಿಗೆ ಮಾತುಕತೆ.

ಕಟಕ
ಕೆಲಸದಲ್ಲಿ ದೃಢ ನಿಶ್ಚಯವಿರಲಿ. ವಿಶ್ವಾಸ
ಬೆಳೆಸಿಕೊಳ್ಳುವಂತೆ ನಿಮ್ಮ ನಡತೆಯಿರಲಿ.
ನಿಮ್ಮ ಸಂಗಾತಿಯ ಬೆಂಬಲವು ಹೆಚ್ಚಾಗಲಿದೆ.

ಸಿಂಹ
ನಿಮ್ಮ ತಾಳ್ಮೆಗೆ ತಕ್ಕ ಫಲ ಸಿಗಲಿದೆ. ಇಂತಹ
ದಿನಕ್ಕಾಗಿ ನೀವು ಸಾಕಷ್ಟು ದಿನಗಳಿಂದ
ಕಾಯುತ್ತಿದ್ದೀರಿ. ಅದು ಇವತ್ತೇ ಬಂದಿದೆ.

ಕನ್ಯಾ
ಹಣದ ವ್ಯವಹಾರದಲ್ಲಿ ನೀವು ನಂಬಿದ್ದವರೇ
ನಿಮ್ಮನ್ನು ಯಾಮಾರಿಸಿದ್ದಾರೆ. ಜೋಪಾನ
ವಾಗಿ ವ್ಯವಹರಿಸುವುದಕ್ಕೆ ಸೂಕ್ತವಾದ ಕಾಲ.

ತುಲಾ
ಹಿರಿಯರು ನಿಮ್ಮ ಮಾತನ್ನು ಒಪ್ಪರು. ಅವರ
ಅನುಭವವೇ ಅದಕ್ಕೆಲ್ಲಾ ಕಾರಣವಾಗಿದೆ.
ತುಲಾ ಹಾಗಂತ ದುಡುಕದಿರಿ. ತಾಳ್ಮೆಯಿಂದ ವರ್ತಿಸಿ.

ವೃಶ್ಚಿಕ
ಗ್ರಹಗತಿಗಳೆಲ್ಲವೂ ನಿಮ್ಮ ಪರವಾಗಿಯೇ ಇವೆ.
ಆದರೆ ನಿಮ್ಮಲ್ಲಿರುವ ದೋರಣೆಯ ಬುದ್ಧಿ
ಯನ್ನು ಸರಿಪಡಿಸಿಕೊಂಡರೆ ಒಳಿತಾಗುವುದು.

ಧನುಸ್ಸು
ಮಾನಸಿಕ ನೆಮ್ಮದಿಗಾಗಿ ಧ್ಯಾನ, ಯೋಗಗಳಲ್ಲಿ
ಮೊರೆ ಹೋದರೆ ಎಲ್ಲವೂ ಸರಿ ಹೋಗುತ್ತದೆ.
ಯಾರಲ್ಲೂ ವಿರೋಧವನ್ನು ಕಟ್ಟಿ ಕೊಳ್ಳಬೇಡಿ.

ಮಕರ
ಅನಾರೋಗ್ಯದ ಸಮಸ್ಯೆ ಇದ್ದರೂ ಹೆಚ್ಚೇನು
ಕಾಡದು. ವ್ಯರ್ಥ ಖರ್ಚು ಆಗಲಿದೆ. ನಿಮ್ಮ
ವ್ಯವಹಾರದಲ್ಲಿ ಸ್ವಲ್ಪ ಪ್ರಗತಿ ಕಾಣುವಿರಿ.

ಕುಂಭ
ನಿಮ್ಮ ಮನೆಯ ವಾಸ್ತುವಿನ ಬಗ್ಗೆ ಹೆಚ್ಚು ತಲೆ
ಕೆಡಿಸಿಕೊಳ್ಳುವುದು ಬೇಡ. ಜೀವನ ನಡೆದರೆ
ಸಾಕು ಎನ್ನುವ ಪರಿಸ್ಥಿತಿಯಲ್ಲಿ ಇದು ಬೇಕಾ?

ಮೀನ
ವ್ಯವಹಾರದಲ್ಲಿ ಪ್ರಗತಿ. ಸ್ವಲ್ಪ ಭಿನ್ನಾಭಿಪ್ರಾಯ
ಗಳಿಂದ ನಿಮ್ಮ ಮನಸ್ಸು ಹದಗೆಡಲಿದೆ. ಸ್ವಲ್ಪ
ಮೀನ ಧ್ಯಾನದಲ್ಲಿ ತೊಡಗಿಕೊಳ್ಳಿ. ಒಳಿತಾಗಲಿದೆ.