ಶುಭೋದಯ ಓದುಗರೆ : ಹೇಗಿದೆ ಇಂದಿನ ರಾಶಿ ಫಲ

life | Friday, March 30th, 2018
Suvarna Web Desk
Highlights

ಶುಭೋದಯ ಓದುಗರೆ : ಹೇಗಿದೆ ಇಂದಿನ ರಾಶಿ ಫಲ

ಮೇಷ ರಾಶಿ : ಆರೋಗ್ಯದ ದಿನ, ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ. ಚಿಂತೆ ಇರುವುದಿಲ್ಲ . ದೀಪ ದಾನವನ್ನು ಮಾಡಿ

ವೃಷಭ :ಆರೋಗ್ಯ ವೃದ್ಧಿಗಾಗಿ ಸಂಜೀವಿನಿ ಯಂತ್ರ ಧರಿಸಿ, ಕಾರ್ಯಸಿದ್ಧಿಗಾಗಿ ಮಹಾಲಕ್ಷ್ಮಿಗೆ ಕುಂಕುಮಾರ್ಚನೆ ಮಾಡಿಸಿ

ಮಿಥುನ : ವಿದ್ಯಾಭ್ಯಾಸದಲ್ಲಿ  ಮುನ್ನಡೆ, ಹರಿವಂಶ ಪಾರಾಯಣ ಮಾಡಿಸಿದಲ್ಲಿ ದುರ್ಗಮ ಕಾರ್ಯ ಸಾಧನೆ

ಕಟಕ : ನಿಮ್ಮ ಕಾರ್ಯ ಸಾಧನೆಗೆ ಚಂದ್ರ ಬಿಂಬವನ್ನು ದಾನ ಮಾಡಿ, ಗುರುವಿನ ಅನುಕೂಲವಿರುವುದರಿಂದ ಉತ್ತಮ ದಿನವಾಗಿರಲಿದೆ

ಸಿಂಹ : ಶಿವ ದೇವಸ್ಥಾನದಲ್ಲಿ ಗೋಧಿ ಪಾಯಸ ಮಾಡಿಸಿ ದಾಸೋಹ ಮಾಡಿಸಿದಲ್ಲಿ ಸರ್ವ ಕಾರ್ಯದಲ್ಲೂ ಯಶಸ್ಸು ಸಿಗಲಿದೆ

ಕನ್ಯಾ : ಹೆಸರು ಬೇಳೆ ಪಾಯಸವನ್ನು ಮಾಡಿಸಿ ವಿಷ್ಣು ದೇವಾಲಯದಲ್ಲಿ ನೈವೇದ್ಯ ಮಾಡಿದರೆ ನಿಮ್ಮ ಸರ್ವ ಕಷ್ಟ ನಿವಾರಣೆಯಾಗಲಿದೆ.

ತುಲಾ : ಮಹಾಲಕ್ಷ್ಮಿ ದೇವಸ್ಥಾನದಲ್ಲಿ ತಾಯಿಗೆ ಅಲಂಕಾರ ಮಾಡಿಸಿ, ಸುವಾಸಿನಿಯರಿಗೆ ಸೀರೆ ಉಡುಗೊರೆ ಕೊಟ್ಟರೆ ಎಂಥ ಕಷ್ಟವೂ ಪರಿಹಾರವಾಗುತ್ತದೆ

ವೃಶ್ಚಿಕ : ಸುಬ್ರಹ್ಮಣ್ಯ ಸ್ವಾಮಿಗೆ ಅಪೂಪ ನೈವೇದ್ಯ ಮಾಡಿಸಿದಲ್ಲಿ ಆರೋಗ್ಯ ತೊಂದರೆ ಶಮನವಾಗುತ್ತದೆ.

ಧನಸ್ಸು : ಬ್ರಹ್ಮಜ್ಞಾನಿಗಳಿಗೆ ಊಟ ಹಾಕಿ, ಸುಂದರಕಾಂಡ ಪಾರಾಯಣ ಮಾಡಿಸಿದಲ್ಲಿ ನಿಮ್ಮ ಇಷ್ಟ ನೆರವೇರುತ್ತದೆ.

ಮಕರ : ಕಬ್ಬಿಣದಾನ ಮಾಡಿ, ಶನೈಶ್ಚರ ದರ್ಶನ ಮಾಡಿದರೆ ಸೇವಕರು ಮಾತುಕೇಳುತ್ತಾರೆ.

ಕುಂಭ : ಬಡವರಿಗೆ, ಅನಾಥರಿಗೆ ಅನ್ನಹಾಕುವುದರಿಂದ ನೀವು ಸಂಕಲ್ಪಿಸಿದ ಕಾರ್ಯ ಸಿದ್ಧಿಯಾಗುತ್ತದೆ.

ಮೀನ : ಸಂಹಿತಾ ಪಾರಾಯಣ ಮಾಡಿಸಿದಲ್ಲಿ ಎಂಥ ಕಷ್ಟಗಳೂ, ಎಂಥ ಶತ್ರು ಸಮಸ್ಯೆಗಳೂ ಪರಹಾರ.

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk