ಮೇಷ ರಾಶಿಯವರಿಗೆ ಪ್ರಗತಿಯ ದಿನ : ಉಳಿದ ರಾಶೀ ಹೇಗಿದೆ..?

First Published 5, Apr 2018, 6:56 AM IST
Dina Bhavishya April
Highlights

ಮೇಷ ರಾಶಿಯವರಿಗೆ ಪ್ರಗತಿಯ ದಿನ : ಉಳಿದ ರಾಶೀ ಹೇಗಿದೆ..?

ಮೇಷ

ಪ್ರಯಾಣವಿದೆ. ಹೊಸ ಸ್ಥಳಗಳಿಗೆ ಭೇಟಿ.

ಪ್ರಮುಖರೊಡನೆ ಮಾತುಕತೆ ನಡೆಸಲಿದ್ದೀರಿ.

ವ್ಯವಹಾರದಲ್ಲಿ ಪ್ರಗತಿ ಕಾಣುವ ದಿನ.

 

ವೃಷಭ

ಮಾಡಿದ್ದೆಲ್ಲವೂ ಒಳಿತಾಗುವ ದಿನ. ಆತುರ

ಬೇಡ. ಆಲೋಚನೆಗಳು ಸರಿಯಾಗಿರಲಿ.

ನಿಮ್ಮ ನಿರ್ಧಾರಕ್ಕೆ ಇವು ಪುಷ್ಠಿ ಕೊಡಲಿದೆ.

 

ಮಿಥುನ

ಹೆಚ್ಚಿನ ಒತ್ತಡದಲ್ಲೂ ನೆಮ್ಮದಿಯಿಂದ ಕೆಲಸ

ಮಾಡುವ ಗುಣವೇ ಇಂದು ನಿಮಗೆ ಸಹಕಾರಿ

ಯಾಗಲಿದೆ. ಧೈರ್ಯವಾಗಿ ಮುಂದಡಿ ಇಡಿ.

 

ಕಟಕ

ನಿಮ್ಮನ್ನು ಯಾರೂ ದ್ವೇಷಿಸುವುದಿಲ್ಲ. ಎಲ್ಲರೂ

ಸ್ನೇಹಿತರಾಗುವ ದಿನವಿಂದು ಹಿರಿಯರ ಸ್ಮರಣೆ

ಒಳಿತು. ಕಲಹವು ನಿಮ್ಮ ಬಳಿ ಸುಳಿಯದು.

 

ಸಿಂಹ

ಅಧ್ಯಾತ್ಮ ಜೀವನದಲ್ಲಿ ಸಂತೃಪ್ತಿ. ಕೆಲಸ-

ಕಾರ್ಯಗಳಿಗೆ ಪ್ರೋತ್ಸಾಹವು ದೊರೆಯಲಿದೆ.

ನಿರಾಳತೆ ಅನುಭವಿಸುವಿರಿ. ಖುಷಿಯ ದಿನ.

 

 

ಕನ್ಯಾ

ಕಾರ್ಯಕ್ಷೇತ್ರದಲ್ಲಿ ಸ್ವಲ್ಪ ಹೆಣಗಾಡಿದ ಬಳಿಕ

ಜಯ ಸಾಧಿಸುತ್ತೀರಿ. ಮಾನಸಿಕ ನೆಮ್ಮದಿಗೆ

ಧ್ಯಾನ-ಯೋಗ ಮಾಡುವುದು ಲೇಸು.

 

ತುಲಾ

ಚಮ್ಮಾರ, ಬಡಗಿಗಳಿಗೆ ಉತ್ತಮ ಅವಕಾಶ.

ವಾಹನಗಳ ವ್ಯಾಪಾರಿಗಳಿಗೂ ಒಳ್ಳೆಯ ಲಾಭ.

ಸರ್ಕಾರಿ ಹಣವು ನಿಮ್ಮ ಖಾತೆಗೆ ಸೇರಲಿದೆ.

 

ವೃಶ್ಚಿಕ

ಏಕಪಕ್ಷೀಯ ಸ್ವಭಾವ ಎದೆಗುದದೇ ಇರಿ.

ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳು

ವಾಗ ಯಾವುದೇ ಒತ್ತಡಕ್ಕೆ ಮಣಿಯದಿರಿ.

 

ಧನುಸ್ಸು

ನೀವಂದುಕೊಂಡಂತೆ ನಿಮ್ಮ ಎಲ್ಲ ಕೆಲಸಗಳೂ

ನಿರಾತಂಕವಾಗಿ ನೆರವೇರುವವು. ಗ್ರಹಗತಿಗೆ

ಮನೆಯ ವಾತಾವರಣವೂ ಪೂರಕವಾಗಿವೆ.

 

ಮಕರ

ಹೊಗಳಿಕೆಗಳಿಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ

ನಿಮ್ಮ ಸಮಚಿತ್ತ ಮನಸ್ಸಿನಿಂದ ಕಾರ್ಯ

ಪ್ರವೃತ್ತರಾಗಿರಿ. ಅದೇ ನಿಮ್ಮ ದೊಡ್ಡತನ.

 

ಕುಂಭ

ನಿಮ್ಮ ಪತ್ನಿಯ ಸಹಕಾರದಿಂದ ಕಷ್ಟ ಕಾಲಕ್ಕೆ

ಎಂದು ಕೂಡಿಟ್ಟ ಹಣವು ಈಗ ಉಪಯೋಗಕ್ಕೆ

ಬರಲಿದೆ. ವೃಥಾ ಖರ್ಚು ಒಳ್ಳೆಯದೇ ಅಲ್ಲ.

 

ಮೀನ

ಕೃಷಿಕರು ಯೋಚಿಸಿ ನಿರ್ಧಾರಗಳನ್ನು ತೆಗೆದು

ಕೊಂಡರೆ ಒಳಿತು. ಒಳ್ಳೆಯ ದಿನಗಳು ಆದಷ್ಟು

ಬೇಗ ಬರಲಿವೆ. ತಾಳ್ಮೆಯಿಂದ ಕಾಯಬೇಕಷ್ಟೆ.

loader