Asianet Suvarna News Asianet Suvarna News

ಡಾರ್ಕ್ ಟೂರಿಸಂ; ಕ್ರೂರವಾದ ಕಣ್ಣೀರ ಕಥೆ ಹೇಳುವ ತಾಣಗಳಿವು

ಕ್ರೂರತೆಯ, ದುರಂತಗಳ, ಸಾವುನೋವಿನ ಕತೆ ಹೇಳುವ ತಾಣಗಳು ಭಾರತದಲ್ಲಿ ಹಲವಿವೆ. ಇವುಗಳನ್ನೇ ಗುರಿಯಾಗಿಸಿಕೊಂಡು ಪ್ರವಾಸ ಮಾಡುವುದೇ ಡಾರ್ಕ್ ಟೂರಿಸಂ. 

destinations in India that can give you nightmares The rise of Dark Tourism
Author
Bangalore, First Published Sep 14, 2019, 12:38 PM IST

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಟೂರಿಸಂ ವಿಭಾಗದಲ್ಲಿ ಡಾರ್ಕ್ ಟೂರಿಸಂ ಕೂಡಾ ಒಂದು. ಸಾವುನೋವುಗಳು, ನಿಗೂಢತೆಯನ್ನು ಹೊಂದಿದಂಥ ತಾಣಗಳಿಗೆ ಟ್ರಾವೆಲ್ ಮಾಡುವುದು ಈ ಡಾರ್ಕ್ ಟೂರಿಸಂ ವಿಶೇಷ. ಸಾಮಾನ್ಯವಾಗಿ ಇತಿಹಾಸದಲ್ಲಿ ಆಸಕ್ತಿ ಹೊಂದಿದವರು, ನೆಲದಲ್ಲಿ ಸಮಾಧಿಯಾದ ಕತೆಯನ್ನು ಬಗೆಯುವ ಬಯಕೆಯವರು ಇಂಥ ತಾಣಗಳ ಭೇಟಿ ಇಷ್ಟ ಪಡುತ್ತಾರೆ. ಒಂದು ವೇಳೆ ನಿಮಗೂ ಇಂಥ ಸ್ಥಳಗಲಿಗೆ ಹೋಗುವ ಆಸಕ್ತಿಯಿದ್ದರೆ ಅಂಥ ಕೆಲವು ಜನಪ್ರಿಯ ಸ್ಥಳಗಳನ್ನಿಲ್ಲಿ ಪಟ್ಟಿ ಮಾಡಲಾಗಿದೆ.

1. ಜಲಿಯನ್‌ವಾಲಾ ಭಾಗ್, ಅಮೃತಸರ

1919, ಏಪ್ರಿಲ್ 13ರಂದದು ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯ  ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್ ಅಮೃತಸರದ ಜಲಿಯನ್ ವಾಲಾ ಭಾಗ್‌ನಲ್ಲಿರುವ ಸಾಮಾನ್ಯ ಜನರ ಮೇಲೆ ಗುಂಡು ಹಾರಿಸಲು ಆಜ್ಞೆ ಮಾಡಿದ್ದೇ ತಡ, ಈ ಉದ್ಯಾನದ ಎಲ್ಲ 5 ಗೇಟ್‌ಗಳಿಂದಲೂ ಸೇನೆ ನುಗ್ಗಿ ಸಿಕ್ಕಸಿಕ್ಕವರ ಮೇಲೆ ಗುಂಡು ಹಾರಿಸಿತು.  ತಮ್ಮ ಗುಂಡುಗಳೆಲ್ಲವೂ ಖಾಲಯಾಗುವವರೆಗೂ ಸೈನಿಕರು ಬಂದೂಕಿಗೆ ಕೆಲಸ ನೀಡಿದ ಪರಿಣಾಮ, ಸುಮಾರು 1000 ಜನ ಮೃತಪಟ್ಟು, 1500ಕ್ಕೂ ಹೆಚೇ್ಚು ಮಂದಿ ಗಾಯಗೊಂಡರು. ಇಂದಿಗೂ ಕೂಡಾ ಇಲ್ಲಿನ ಗೋಡೆಗಳಲ್ಲಿ ಗುಂಡುಗಳು ಹಾಗೂ ಗುಂಡಿನ ಗುರುತುಗಳನ್ನು ಕಾಣಬಹುದು.

ಸುಖ ಪ್ರಯಾಣಕ್ಕೆ ಸಪ್ತ ಸೂತ್ರಗಳು!

2. ಕಾಲಾ ಪಾನಿ, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು

1906ರಲ್ಲಿ ಭಾರತದ ಬ್ರಿಟಿಷ್ ಸರ್ಕಾರ ಕಾಲಾಪಾನಿ ಜೈಲನ್ನು ನಿರ್ಮಿಸಿದ್ದೇ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಟಾರ್ಚರ್ ಕೊಟ್ಟು ಅವರನ್ನು ಏಕಾಂಗಿಯಾಗಿಸಲೆಂದು. ಇಲ್ಲಿ ಎಷ್ಟು ಚಿತ್ರಹಿಂಸೆ ಮಾಡಲಾಗುತ್ತಿತ್ತಂದರೆ ಇದನ್ನು ಸಾವಿನ ಜೈಲು ಎಂದೇ ಕರೆಯಲಾಗುತ್ತಿತ್ತು. ಇಲ್ಲಿ ಹೋದವರಲ್ಲಿ ಹಿಂತಿರುಗಿ ಬಂದವರು ಬಹಳ ಅಪರೂಪ.  ಸೆಲ್ಲುಲಾರ್ ಜೈಲಿನಲ್ಲಿ ಇಂದಿಗೂ ಖೈದಿಗಳನ್ನು ಶಿಕ್ಷಿಸಲು ಬಳಸುತ್ತಿದ್ದ ಎಲ್ಲ ಉಪಕರಣಗಳನ್ನೂ ಕಾಣಬಹುದು. ಇಲ್ಲಿ ಭೇಟಿ ನೀಡಿದ ನಂತರ ಸ್ವಾತಂತ್ರ್ಯ ಹೋರಾಟಗಾರರು ಅನುಭವಿಸಿರಬಹುದಾದ ಚಿತ್ರಹಿಂಸೆ ಯೋಚಿಸಿ ನೀವು ಖಿನ್ನತೆಯನ್ನು ಅನುಭವಿಸುವುದು ಖಂಡಿತಾ. 

3. ರೂಪ್‌ಕುಂಡ್, ಉತ್ತರಾಖಂಡ್

ರಿಚ್ಚೀ ರಿಚ್ ಫೀಲಿಂಗ್ ಬೇಕೇ? ಕಡಿಮೆ ದುಡ್ಡಿದ್ರೂ ಈ ದೇಶಗಳಲ್ಲಿ ಎಂಜಾಯ್ ಮಾಡ್ಬೋದು!

ಉತ್ತರಾಖಂಡ್‌ನ ರೂಪ್‌ಕುಂಡ್ ನಿಗೂಢತೆಯನ್ನು ಹಿಡಿದಿಟ್ಟುಕೊಂಡಿದೆ. ಇಲ್ಲಿನ ಕೆರೆ ಅಸ್ಥಿಪಂಜರಗಳ ಕೆರೆಯೆಂದೇ ಕುಖ್ಯಾತಿ ಪಡೆದಿದ್ದು, ಸಮುದ್ರ ಮಟ್ಟದಿಂದ ಸುಮಾರು 5000 ಮೀಟರ್ ಎತ್ತರದಲ್ಲಿದೆ. ಈ ಕೆರೆಯಲ್ಲಿ ಸುಮಾರು 200 ಮನುಷ್ಯರ ಅಸ್ಥಿಪಂಜರಗಳಿದ್ದು, ಇವು 9ನೇ ಶತಮಾನಕ್ಕೆ ಸೇರಿದವರದ್ದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಬಹುಷಃ ಹಿಮಪಾತಕ್ಕೆ ಇವರು ಬಲಿಯಾಗಿರಬಹುದು ಎನ್ನಲಾಗುತ್ತದೆ. ವರ್ಷದ ಬಹುತೇಕ ಸಮಯ ಈ ಕೆರೆ ಮಂಜುಗಟ್ಟಿರುತ್ತದೆ. ಇದು ಕರಗಿದಾಗ ಕೂದಲು, ಮೂಳೆಗಳು, ಮಾಂಸದ ತುಣುಕುಗಳು ಕಾಣಸಿಗುತ್ತವೆ. 

4. ತಾಜ್ ಮಹಲ್, ಆಗ್ರಾ

ಇಂದು ವಿಶ್ವದ ಏಳು ಅದ್ಬುತಗಳಲ್ಲಿ ಒಂದೆನಿಸಿರುವ, ಯುನೆಸ್ಕೋದಿಂದ ವಿಶ್ವ ಪಾರಂಪರಿಕ ತಾಣ ಎಂದು ಕರೆಸಿಕೊಂಡಿರುವ ತಾಜ್‌ಮಹಲ್ ಇತಿಹಾಸ ಕೆಣಕಿದರೆ ಹಲವು ಜನರ ಆಕ್ರಂದನ ಕಿವಿಯಲ್ಲಿ ಮೊಳಗುತ್ತದೆ. ತಾಜ್ ಮಹಲ್ ಕಟ್ಟಿದ ಬಳಿಕ, ಇಂಥ ಇನ್ನೊಂದು ಕಟ್ಟಡ ಕಟ್ಟಕೂಡದೆಂದು ಕಾರ್ಮಿಕರ ಬೆರಳುಗಳನ್ನು ಕತ್ತರಿಸಲು ಶಹಜಹಾನ್ ಆಜ್ಞೆ ಹೊರಡಿಸಿದ್ದು, ಅದು ಪಾಲನೆಯಾದ ರೀತಿ ಎಲ್ಲವೂ ಕ್ರೂರಾತಿಕ್ರೂರ. ತಾಜ್ ಮಹಲ್‌ನ ಗೋರಿಯೊಳಗೆ ಶಹಜಹಾನ್ ಪತ್ನಿ ಮಮ್ತಾಜ್ ಮಹಲ್ ಮಲಗಿರುವುದು ಗೊತ್ತೇ ಇದೆ.

ವಿಭಿನ್ನ ಅನುಭವಕ್ಕೆ ಗುಜರಾತಿನ ಈ ತಾಣಗಳಿಗೆ ಮಿಸ್‌ ಮಾಡದೆ ವಿಸಿಟ್ ಮಾಡಿ!

5. ಕುಲಧಾರಾ ಹಳ್ಳಿ, ರಾಜಸ್ಥಾನ

19ನೇ ಶತಮಾನದ ಆರಂಭದಲ್ಲಿ 83 ಹಳ್ಳಿಗಳನ್ನೊಳಗೊಂಡ ಪಟ್ಟಣವಾಗಿದ್ದ ಕುಲಧಾರಾ ಇಂದು ಏಕಾಂಗಿ ಪಾಳುಪ್ರದೇಶ. ಪಲಿವಾಲ್ ಬ್ರಾಹ್ಮಣರಿಂದ ತುಂಬಿದ್ದ ಕುಲಧಾರಾ ನೀರಿನ ಅಭಾವದ ಕಾರಣದಿಂದಲೋ ಅಥವಾ ಜೈಸಲ್ಮೇರ್‌ನ ಮಂತ್ರಿ ಸಲೀಂ ಸಿಂಗ್ ಅದನ್ನು ವಶಪಡಿಸಿಕೊಂಡಿದ್ದರಿಂದಲೋ ರಾತ್ರೋ ರಾತ್ರಿ ಜಾಗ ಖಾಲಿ ಮಾಡಿ ಹೋದ ಪರಿಣಾಮ ಪಾಳು ಬಿದ್ದಿತು. ಇಂದು ಈ ಸ್ಥಳವನ್ನು ರಾಜಸ್ಥಾನ ಸರಕಾರ ಪ್ರವಾಸಿ ಸ್ಥಳವಾಗಿ ಮಾರ್ಪಡಿಸಿದೆ. 

6. ಯೂನಿಯನ್ ಕಾರ್ಬೈಡ್ ಸಬ್ಸಿಡಿಯರಿ ಪ್ಲ್ಯಾಂಟ್, ಭೋಪಾಲ್

ವಿಶ್ವದ ಕಾರ್ಖಾನೆಗಳ ಕೆಟ್ಟ ದುರಂತಗಳಲ್ಲಿ ಒಂದೆಂದು ಹೇಳುವ ಭೋಪಾಲ್ ಗ್ಯಾಸ್ ಟ್ರ್ಯಾಜಿಡಿ ಸುಮಾರು 3787 ಜನರ ಬಲಿ ಪಡೆದಿದೆ. 1984ರ ಡಿಸೆಂಬರ್ 3ರಂದು ಇಲ್ಲಿ ಅನಿಲ ಲೀಕ್ ಆದ ಪರಿಣಾಮ ಸುಮಾರು 5 ಲಕ್ಷ ಜನರು 42 ಟನ್‌ನಷ್ಟು ಅಪಾಯಕಾರಿ ಮಿಥೈಲ್ ಐಸೋಸೈನೇಟ್ ಗ್ಯಾಸ್‌ ಸೇವಿಸಬೇಕಾಯಿತು. ತಕ್ಷಣದಲ್ಲೇ ಶ್ವಾಸಕೋಶದಲ್ಲಿ ಸುಟ್ಟಂತಾಗುತ್ತಿದೆ ಎಂದ ಸುಮಾರು 1000 ಜನರು ಮೃತಪಟ್ಟರು. ಇಂದು ದೇಶದ ಡಾರ್ಕ್ ಟೂರಿಸಂನ ಬಹು ಖ್ಯಾತ ತಾಣ ಇದಾಗಿದೆ. 

ಬಾಲಿಯಲ್ಲಿ ನೋಡಲೇಬೇಕಾದ ಹಿಂದೂ ದೇವಾಲಯಗಳಿವು...
 

Follow Us:
Download App:
  • android
  • ios