Asianet Suvarna News Asianet Suvarna News

ಬಾಲಿಯಲ್ಲಿ ನೋಡಲೇಬೇಕಾದ ಹಿಂದೂ ದೇವಾಲಯಗಳಿವು...

ಇಂಡೋನೇಶ್ಯಾದ ಹಿಂದೂಗಳಲ್ಲಿ ಭಾರತೀಯರು, ಬಾಲಿೀಯರು ಹಾಗೂ ಜಾವನೀಸ್ ಇದ್ದಾರೆ. ಈ ಪ್ರತಿಯೊಂದು ವರ್ಗದ ಸಂಸ್ಕೃತಿಗೆ ಸರಿಯಾಗಿ  ಇಲ್ಲಿನ ದೇವಾಲಯಗಳ ವಿನ್ಯಾಸದಲ್ಲಿ ಕೂಡಾ ವಿಶೇಷತೆ ಹಾಗೂ ವಿಭಿನ್ನತೆಗಳಿವೆ. 

6 Must visit Hindu temples in Bali
Author
Bangalore, First Published Aug 26, 2019, 3:49 PM IST

ಬಾಲಿ ಎಂಬ ದ್ವೀಪ ರಾಷ್ಟ್ರದ ಸುತ್ತಮುತ್ತಲೂ ಸಾಕಷ್ಟು ಹಿಂದೂ ದೇವಾಲಯಗಳಿವೆ. ಬಾಲೀಯರ ಹಿಂದೂ ದೇಗುಲಗಳನ್ನು ಪುರ ಎನ್ನಲಾಗುತ್ತದೆ. ಇಲ್ಲಿನ ಹಿಂದುತ್ವವು ಭಾರತದ ವೇದ ಹಾಗೂ ಸ್ಥಳೀಯ ಆಸ್ಟ್ರೋನೇಶ್ಯನ್ನರ ಪ್ರಭಾವದ ಮಿಳಿತವಾಗಿದ್ದು, ಇವರ ದೇಗುಲ ವಿನ್ಯಾಸಗಳಲ್ಲೂ ಇದನ್ನು ಕಾಣಬಹುದು.

ಚೆನ್ನೈ ಸಾಗರದಲ್ಲಿ ಕಂಡ ನೀಲಿ ಅಲೆಗಳ ರಹಸ್ಯ!

ಬಾಲೀಯರ ದೇವಾಲಯಗಳು ಸಾಮಾನ್ಯವಾಗಿ ತೆರೆದ ಭೂಮಿಯಲ್ಲಿ ಎರಡಾದ ಗೇಟ್ ಹೊಂದಿ, ಮೇರು ಪಗೋಡ ಶೈಲಿಯ ಚಾವಣಿ ಹೊಂದಿರುತ್ತದೆ. ಕೆಲವೊಂದು ಸಾರ್ವಜನಿಕ ಪೂಜೆ ಪುನಸ್ಕಾರಗಳಿಗಾದರೆ, ಮತ್ತಷ್ಟು ಖಾಸಗಿ ದೇವಾಯಲಯಗಳು. ಬಾಲಿಯ ಬಹುತೇಕ ಪ್ರತಿ ಮನೆಯೂ ಹಲವಾರು ದೇವಾಲಯಗಳನ್ನು ಹೊಂದಿರುತ್ತದೆ. ಹಾಗಾಗಿಯೇ, ಈ ದೇಶವನ್ನು 'ಸಾವಿರ ಪುರಗಳ ದ್ವೀಪ' ಎನ್ನಲಾಗುತ್ತದೆ. ಬಾಲಿಗೆ ಹೋದರೆ ಈ ಪ್ರಮುಖ ದೇವಾಲಯಗಳನ್ನು ನೋಡಿಯೇ ಬನ್ನಿ. 

ಬೇಸಾಖಿ

ಇಂಡೋನೇಶ್ಯಾದ ಜೀವಂತ ಜ್ವಾಲಾಮುಖಿ ಮೌಂಟ್ ಆಗಂಗ್ ಮೇಲೆ ಇರುವ ಬೇಸಾಖಿ ಸುಮಾರು 23 ಬೇರೆ ಬೇರೆ ದೇಗುಲಗಳ ಸಂಕೀರ್ಣ. ಪೆನಟರನ್ ಆಗಂಗ್ ಪುರ ಇವುಗಳಲ್ಲಿ ದೊಡ್ಡದು ಹಾಗೂ ಪ್ರಮುಖವಾದುದು. ಇಲ್ಲಿನ ಅಫರ್ ದೇವಾಯಲದಲ್ಲಿ ಜಲಚರಜೀವಿಗಳ ದೇವಿ ಧನುವನ್ನು ಪೂಜಿಸಲಾಗುತ್ತದೆ. 11 ಮಹಡಿಯ ಈ ದೇಗುಲದ ವಿನ್ಯಾಸ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುವುದರಲ್ಲಿ ಅನುಮಾನವಿಲ್ಲ. ದೇವಾಲಯದ ಪ್ರವೇಶದ್ವಾರದುದ್ದಕ್ಕೂ ಆಲದ ನೆರಳು ಹರಡಿದ್ದು, ಚೆಂದದ ಉದ್ಯಾನ ಹಾಗೂ ಬೌದ್ಧ ಸ್ತೂಪಗಳು, ಕೆರೆ, ದೇಗುಲ ಎಲ್ಲವೂ ಈ ಪ್ರದೇಶದ ಸೌಂದರ್ಯ ಇಮ್ಮಡಿಗೊಳಿಸಿವೆ. ಇಲ್ಲಿ 3 ದೇವಾಲಯಗಳಿದ್ದು, ಬ್ರಹ್ಮನ ಕಪ್ಪು ಕಮಲ ದೇವಾಲಯ, ಆಹಾರದ ದೇವಿ ಭೋಗವತಿ ಕೂಡಾ ಇಲ್ಲಿ ಪೂಜಿಸಲ್ಪಡುತ್ತಾರೆ. 

ದುಬೈ ನಿವಾಸಿಯ ಖಾಸ್‌ಬಾತ್‌!

ತನಾ ಲಾಟ್

ಈ ದೇಗುಲವು ಸಮುದ್ರದ ನಡುವಿನ ಬಂಡೆಹಾಸಿನಲ್ಲಿದ್ದು, ಅಲೆಗಳು ಕಡಿಮೆ ಇದ್ದಾಗ ಮಾತ್ರ ಇಲ್ಲಿಗೆ ಭೇಟಿ ನೀಡಬಹುದು. 15ನೇ ಶತಮಾನದಲ್ಲಿ ಮೀನುಗಾರನೊಬ್ಬ ಈ ದೇವಾಲಯವನ್ನು ಕಟ್ಟಿಸಿದನೆಂಬ ಪ್ರತೀತಿಯಿದ್ದು, ಇಲ್ಲಿ ನಿಂತು ಸೂರ್ಯಾಸ್ಥ ನೋಡಲು ಪ್ರವಾಸಿಗರು ಮುಗಿ ಬೀಳುತ್ತಾರೆ. ಇದು ಬಾಲಿಯಲ್ಲಿ ಭೇಟಿ ನೀಡಲೇಬೇಕಾದ ದೇವಾಲಯಗಳಲ್ಲೊಂದಾಗಿದ್ದು, ಸೂರ್ಯಾಸ್ಥ ನೋಡದೆ ಹಿಂದಿರುಗಿದರೆ ಲೈಫ್‌ಟೈಂ ಅನುಭವವೊಂದನ್ನು ಮಿಸ್ ಮಾಡಿಕೊಳ್ಳುತ್ತೀರಿ.

ಲುಹುರ್ ಉಲುವಾಟು

ಸಮುದ್ರ ಬದಿಯ ಹೆಬ್ಬಂಡೆ ತೀರದ ಮೇಲೆ ಇರುವ ಕಾರಣದಿಂದಲೇ ಈ ಲುಹುರ್ ದೇವಾಲಯ ನೋಡಲೇಬೇಕಾದದ್ದೆನಿಸಿಕೊಳ್ಳುತ್ತದೆ. ಇಲ್ಲಿ ರಾತ್ರಿಯ ಹೊತ್ತಿನಲ್ಲಿ ಮೊಳಗುವ ಮಂತ್ರಗಳನ್ನು ಕೇಳುತ್ತಾ, ಫೈರ್ ಡ್ಯಾನ್ಸ್ ವೀಕ್ಷಿಸುತ್ತಾ, ಮುಖವಾಡ ಧರಿಸಿದ ನಟರ ಅಭಿನಯ ನೋಡುತ್ತಾ ಕಳೆವ ಸೊಬಗೇ ಬೇರೆ. ಹಗಲಾದರೆ, ಬಂಡೆಗೆ ಬಂದಪ್ಪಳಿಸುವ ಅಲೆಗಳನ್ನೇ ನೋಡುತ್ತಾ ಧ್ಯಾನಸ್ಥರಾಗಬಹುದು. ಇದೊಂತರಾ ಸಮುದ್ರ ಆಕಾಶ ಒಂದಾದ ಸ್ಥಳದಂತೆ ಭಾಸವಾಗುತ್ತದೆ. 

ಇವುಗಳನ್ನು ಮಾಡದೇ ಹೋದ್ರೆ ಕೂರ್ಗ್ ಟ್ರಿಪ್ ಕಂಪ್ಲೀಟೇ ಆಗಲ್ಲ!

ಗೋವಾ ಗಜಾ

ಗೋವಾ ಗಜಾ ಎಂದರೆ ಆನೆಯ ಗುಹೆ ಎಂದರ್ಥ. ಇಲ್ಲಿನ ಎಲಿಫೆಂಟ್ ರಿವರ್ ಬಳಿ ಇರುವ ಗೋವಾ ಗಜ ದೇಗುಲ ತನ್ನ ಕಲ್ಲಿನ ಪ್ರವೇಶದ್ವಾರದ ಮೇಲೆ ತುಂಬಿರುವ ಹಲವಾರು ಮುಖಗಳಿಂದಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲೇ ಹತ್ತಿರದಲ್ಲಿ ಬೌದ್ಧ ಸ್ತೂಪಗಳ ಅವಶೇಷಗಳನ್ನು ಕಾಣಬಹುದು. ಚೆಂದದ ಕಣಿವೆ ಸ್ಥಳದಲ್ಲಿ ಇರುವ ಈ ದೇವಾಲಯ ಇತಿಹಾಸದ ಕಾರಣದಿಂದ ಹಾಗೂ ಹಿಂದೂಗಳು ಮತ್ತು ಬೌದ್ಧರಿಬ್ಬರಿಗೂ ಪ್ರಮುಖವಾದುದಾದ್ದರಿಂದ ಭೇಟಿಗೆ ಅರ್ಹವಾಗಿದೆ.

ಲುಹುರ್ ಲೆಂಪುಯಾಂಗ್

ಮೌಂಟ್ ಲೆಂಪುಯಾಂಗ್ ಮೇಲೆ ಕುಳಿತ ಪುರು ಲುಹುರ್ ದೇವಾಲಯದ ಪ್ರಮುಖ ಆಕರ್ಷಣೆಯೇ ಅದರ ಹಾಗೂ ಸುತ್ತಲಿನ ಸೌಂದರ್ಯ. ಇದು ಪರ್ವತದ ಮೇಲಿರುವುದರಿಂದ ಸ್ವಲ್ಪ ಮೇಲಿನವರೆಗೆ ನಡೆಯಬೇಕಾದರೂ, ಮೇಲೆ ಮೋಡಗಳ ಮಧ್ಯೆ ನಿಂತ ದೇವಾಲಯದ ಸ್ವರ್ಗ ಸದೃಶ ದೃಶ್ಯಾವಳಿ ಆ ಎಲ್ಲ ಸುಸ್ತನ್ನೂ ಪರಿಹರಿಸಿ ರಿಫ್ರೆಶ್ ಮಾಡಬಲ್ಲದು. 

ಉಲುನ್ ಧನು ಬ್ರತನ್

ಸರೋವರದ ನಟ್ಟ ನಡುವೆ ನಿಂತ ಉಲುನ್ ಧನು ಬ್ರತನ್ ಬಹಳ ಎತ್ತರದ ಪ್ರದೇಶವಾದ್ದರಿಂದ ಸಿಕ್ಕಾಪಟ್ಟೆ ತಣ್ಣನೆಯ ಪ್ರದೇಶ ಕೂಡಾ. ಇಲ್ಲಿ ಸುತ್ತಮುತ್ತ ಸ್ಟ್ರಾಬೆರಿ ಬೆಳೆಯುವುದರಿಂದ ಪ್ರವಾಸಿಗರು ತಾಜಾ ಹಣ್ಣನ್ನು ಸವಿಯುತ್ತಾ ತಿನ್ನಬಹುದು. 

 

Follow Us:
Download App:
  • android
  • ios