ವಿದೇಶಗಳ ಪ್ರವಾಸ ನಮಗೆ ಲೈಫ್‌ಟೈಂ ನೆನಪುಗಳು, ಅನುಭವಗಳನ್ನು ನೀಡುವುದಷ್ಟೇ ಅಲ್ಲ, ಅವು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನೂ ಹೆಚ್ಚಿಸುತ್ತವೆ. ಪ್ರವಾಸವೆಂದರೆ ಲಕ್ಷುರಿ ಬಗ್ಗೆ ಯೋಚಿಸುವುದಕ್ಕಿಂತಾ ಆರಾಮಾಗಿ ಹೋಗಿ ಬರಲು ಏನೇನು ಮಾಡಬಹುದು ಎಂಬುದನ್ನು ಯೋಚಿಸಿ. ಈ ಟ್ರಾವೆಲ್ ಟಿಪ್ಸ್ ಅನುಸರಿಸಿ, ನಿಮ್ಮ ಹಾಲಿಡೇಯನ್ನು ಶೇ.100ರಷ್ಟು ಎಂಜಾಯ್ ಮಾಡಿ. 

1. ಟ್ರಾವೆಲ್ ಇನ್ಶೂರೆನ್ಸ್ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಯಾವಾಗಲೇ ನೀವು ಪ್ರಯಾಣ ಮಾಡಿದರೂ ಆರೋಗ್ಯವಾಗಿ ಮನೆಗೆ ಹಿಂದಿರುವುಗುವುದು ನಿಮ್ಮ ಮುಖ್ಯ ಗುರಿಯಾಗಿದ್ದೇ ಇರುತ್ತದೆ. ಟ್ರಾವೆಲ್ ಹೊರಡುವ ಮೊದಲೇ ನಿಮ್ಮ ಪ್ರಯಾಣ ಇನ್ಶೂರೆನ್ಸ್ ಹೊಂದಿದೆ ಎಂಬುದು ಖಚಿತಪಡಿಸಿಕೊಂಡರೆ ಚಿಂತೆಯಿಲ್ಲದೆ ತಿರುಗಾಟ ಮಾಡಿ ಬರಬಹುದು.

ಮೋದಿ ಭಾಷಣ ಮಾಡಿದ ಮ್ಯಾಡಿಸನ್ ಸ್ಕ್ವೇರ್ ಗೊತ್ತು, ಉಳಿದವು?

2. ಔಷಧಿಗಳು ಹಾಗೂ ಫಸ್ಟ್ ಏಯ್ಡ್ ಮರೆಯಬೇಡಿ.

ಎಲ್ಲಿಗೇ ಪ್ರಯಾಣ ಹೊರಟರೂ ಮೊದಲು ನೀವು ಯಾವುದಾದರೂ ಮೆಡಿಕೇಶನ್‌ಗಳನ್ನು ತೆಗೆದುಕೊಳ್ಳುತ್ತಿದ್ದರೆ ಅವನ್ನು ಪ್ಯಾಕ್ ಮಾಡಿಕೊಳ್ಳಿ. ಜೊತೆಗೆ ಸಾಮಾನ್ಯ ಕಾಯಿಲೆಗಳಾದ ಜ್ವರ, ಶೀತ, ಕೆಮ್ಮು, ವಾಂತಿ, ಬೇಧಿ, ಮೈಕೈ ನೋವಿನ ಮಾತ್ರೆಗಳನ್ನೂ ಇಟ್ಟುಕೊಳ್ಳಿ. ಇನ್ನು ಇನ್‌ಹೇಲರ್, ಇನ್ಸುಲಿನ್ ಮುಂತಾದವು ನಿಮ್ಮ ಅಗತ್ಯವಾಗಿದ್ದರೆ ಮರೆತು ಪ್ರಯಾಸ ಪಡಬೇಡಿ. ಇವೆಲ್ಲದರ ಜೊತೆಗೆ ನಿಮ್ಮ ಟ್ರಾವೆಲ್ ಬ್ಯಾಗ್‌ನಲ್ಲಿ ಬ್ಯಾಂಡ್ ಏಯ್ಡ್, ಪ್ಲಾಸ್ಟರ್, ಇನ್ಸೆಕ್ಟ್ ರೆಪೆಲ್ಲೆಂಟ್, ಮುಂತಾದವನ್ನೊಳಗೊಂಡ ಫಸ್ಟ್ ಏಯ್ಡ್ ಕಿಟ್ ಇಟ್ಟುಕೊಳ್ಳುವುದು ಒಳ್ಳೆಯದು. 

3. ವ್ಯಾಕ್ಸಿನೇಶನ್ ತಪ್ಪಿಸಿಕೊಳ್ಳಬೇಡಿ

ಯಾರಿಗೂ ಅವರ ಹಾಲಿಡೇ ಅನಾರೋಗ್ಯದಿಂದ ಹಾಳಾಗುವುದು ಇಷ್ಟವಿರುವುದಿಲ್ಲ. ಹೀಗಾಗಿ, ಯಾವುದೇ ದೇಶಕ್ಕೆ ಪ್ರಯಾಣ ಬೆಳೆಸುವ ಮುನ್ನ ಯಾವೆಲ್ಲ ವ್ಯಾಕ್ಸಿನೇಶನ್ ಮಾಡಿಸಿಕೊಳ್ಳುವುದು ಅಗತ್ಯ ಎಂದು ನೋಡಿಕೊಂಡು ವೈದ್ಯರನ್ನು ಭೇಟಿಯಾಗಿ. ಕೆಲ ವ್ಯಾಕ್ಸಿನೇಶನ್‌ಗಳನ್ನು ಸರಣಿಯಲ್ಲಿ ತೆಗೆದುಕೊಳ್ಳಬೇಕಾಗಿರುವುದರಿಂದ ಪ್ರಯಾಣಕ್ಕಿಂತ 20 ದಿನಗಳ ಮುಂಚೆಯೇ ಈ ಕೆಲಸ ಮುಗಿಸಿಕೊಳ್ಳಿ. ಕೆಲ ದೇಶಗಳು ನೀವು ವಿಮಾನವಿಳಿದ ಕೂಡಲೇ ವ್ಯಾಕ್ಸಿನೇಶನ್ ಆಗಿದೆಯೇ ಎಂದು ಪರೀಕ್ಷಿಸುತ್ತವೆ.

4. ಡಯಟ್ ಮರೆತುಬಿಡಿ

ವಿದೇಶದ ಖಾದ್ಯ ರುಚಿಯನ್ನು ಸವಿಯುವ ಅವಕಾಶ ಜೀವನದಲ್ಲಿ ಎಲ್ಲೋ ಒಂದೆರಡು ಬಾರಿ ಸಿಗಬಹುದು. ಹೀಗಾಗಿ, ನೀವು ವೇಗನ್ ಅಲ್ಲದಿದ್ದಲ್ಲಿ, ನಿಮಗೆ ಯಾವುದೇ ಫುಡ್ ಅಲರ್ಜಿ ಇಲ್ಲವೆಂದಲ್ಲಿ ಮನಸೋಇಚ್ಛೆ ಸಿಕ್ಕಿದ್ದೆಲ್ಲವನ್ನೂ ಸವಿಯಿರಿ. ಡಯಟ್ ಮರೆತುಬಿಡಿ. ಸಾಧ್ಯವಾದಷ್ಟು ಹಣ್ಣು ತರಕಾರಿಗಳು ಆಹಾರದಲ್ಲಿರುವಂತೆ ನೋಡಿಕೊಳ್ಳಿ. ಇದರಿಂದ ಹೆಚ್ಚು ಫ್ರೆಶ್ ಆಗಿರಬಲ್ಲಿರಿ. ನೀವು ಹೋದ ದೇಶದ ನೀರು ಕುಡಿಯಲು ಅಯೋಗ್ಯ ಎನಿಸಿದರೆ ಬೇಯಿಸಿದ ಆಹಾರಗಳನ್ನಷ್ಟೇ ಅಲ್ಲಿ ಸೇವಿಸಿ.

ರಾಜ್ಯದ 20 ಪ್ರವಾಸಿ ಸ್ಥಳಗಳು ಶೀಘ್ರ ವಿಶ್ವದರ್ಜೆಗೆ!

5. ನೀರು ನೀರು ನೀರು

ನಿಮ್ಮ ಪ್ರವಾಸದಲ್ಲಿ ನಡಿಗೆ ಹೆಚ್ಚಿದ್ದಷ್ಟೂ ನೀವು ಡಿಹೈಡ್ರೇಟೆಡ್ ಆಗುವ ಸಾಧ್ಯತೆಗಳು ಹೆಚ್ಚು. ಕಡೆಗದು ಹೊಟ್ಟೆನೋವು, ತಲೆನೋವು, ತಲೆ ತಿರುಗುವುದು, ಅತಿಸಾರದಲ್ಲಿ ಕೊನೆಯಾಗುತ್ತದೆ. ಹೀಗಾಗಿ, ನೀರನ್ನು ಕುಡಿಯುತ್ತಲೇ ಇರಿ. ಜೊತೆಗೊಂದಿಷ್ಟು ಎಲೆಕ್ಟ್ರೋಲೈಟ್ ಪ್ಯಾಕೆಟ್‌ಗಳನ್ನು ಕೊಂಡೊಯ್ಯುವುದನ್ನು ಮರೆಯಬೇಡಿ.

6. ದೈಹಿಕ ಚಟುವಟಿಕೆಗೆ ರೆಡಿಯಿರಿ

ಟ್ರಾವೆಲ್ ಹೋದಾಗ ದೇಹಕ್ಕೆ ಹೆಚ್ಚು ಕೆಲಸವಾಗುತ್ತದೆ. ಸುತ್ತಾಟದಲ್ಲಿ ಬ್ಯಾಗ್‌ನ ಭಾರ ಹೊರುವುದು, ನಡೆಯುವುದು, ವಿಚಾರಿಸುವ ಟೆನ್ಷನ್ ಎಲ್ಲ ಸೇರಿ ಬೇಗ ಸುಸ್ತಾಗಿಬಿಡಬಹುದು. ಹಾಗಾಗಿ, ಟ್ರಾವೆಲ್ ಬುಕ್ ಆದಾಗಿನಿಂದಲೇ ವಾಕಿಂಗ್, ಜಾಗಿಂಗ್ ಇತರೆ ಫಿಟ್ನೆಸ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. 

ಭಾರತದಲ್ಲೇ ಡೈವೋರ್ಸ್ ಅತಿ ಕಡಿಮೆ... ಹೆಚ್ಚಿರೋ ದೇಶಗಳಿವು!

7. ಸರಿಯಾದ ಬಟ್ಟೆಗಳನ್ನು ಪ್ಯಾಕ್ ಮಾಡಿ

ನೀವು ಹೋಗುತ್ತಿರುವ ದೇಶದಲ್ಲಿ ಹವಾಮಾನ ಹೇಗಿದೆ, ಯಾವ ಕಾಲ, ಅಲ್ಲಿನ ಸಂಸ್ಕೃತಿ ಎಂಥ ಬಟ್ಟೆಗಳನ್ನು ಬೇಡುತ್ತದೆ, ನೀವು ಹೋಗುವ ತಾಣದಲ್ಲಿ ಡ್ರೆಸ್ ಕೋಡ್ ಇದೆಯೇ, ಯಾವ ರೀತಿಯ ಶೂ ಧರಿಸಬೇಕು ಎಲ್ಲವನ್ನೂ ಮುಂಚೆಯೇ ವಿಚಾರಿಸಿ ಅದಕ್ಕೆ ಸರಿಯಾದ ಬಟ್ಟೆ ಹಾಗೂ ಶೂ ಪ್ಯಾಕ್ ಮಾಡಿಕೊಳ್ಳಿ. ವಿದೇಶಕ್ಕೆ ಹೋದಾಗ ಸ್ಟೈಲ್ ಆದ ಬಟ್ಟೆ ಹಾಕುವ ಆಸೆ ಬಹುತೇಕರಿಗೆ. ಹಾಗಂಥ ಅಲ್ಲಿ ಸ್ನೋ ಸುರಿವಾಗ ನೀವು ಶಾರ್ಟ್ಸ್ ಹಾಕಿದರೆ ಎಲ್ಲರೂ ನಿಮಗೇನಾಗಿದೆಯೋ ಎಂದು ನೋಡಿಯಾರು. ನೀವು ಕೂಡಾ ಚಳಿಯಲ್ಲಿ ನಡುಗಿ ಕಾಯಿಲೆ ಬೀಳುತ್ತೀರಿ. ಹಾಗಾಗಿ, ಎಲ್ಲಿ ಯಾವಾಗ ಎಂಥ ಬಟ್ಟೆ ಧರಿಸಬೇಕೆಂಬುದನ್ನು ಮೊದಲೇ ಯೋಜಿಸಿ ಪ್ಯಾಕ್ ಮಾಡಿ.