Asianet Suvarna News Asianet Suvarna News

ಲಾಕ್ ಡೌನ್ ಎಫೆಕ್ಟ್; ಭಾರತದಲ್ಲಿ ಪೋರ್ನ್ ವೀಕ್ಷಣೆ ಪ್ರಮಾಣ ಏರಿದ್ದು ನೋಡಿದ್ರೆ!

ಪೋರ್ನ್ ವೀಕ್ಷಣೆ ಸಿಕ್ಕಾಪಟ್ಟೆ ಏರಿಕೆ/ ಇದಕ್ಕೆ ಕಾರಣ ಲಾಖ್ ಡೌನ್/ ಭಾರತದಲ್ಲಿ ಶೇ. 95 ರಷ್ಟು ಏರಿಕೆ/ ಕೆಲ ಪ್ರಿಮಿಯಂ ಗಳನ್ನು ಉಚಿತವಾಗಿ ನೀಡಿದ ಸೈಟ್ ಗಳು

Despite Being Blocked In India Pornhub Records 95 Percent Jump In India
Author
Bengaluru, First Published Apr 7, 2020, 10:38 PM IST

ಬೆಂಗಳೂರು(ಏ. 07)  ಲಾಕ್ ಡೌನ್ ಸಂದರ್ಭ ವಿದೇಶದಲ್ಲಿ ಅಶ್ಲೀಲ ಸಿನಿಮಾ ಸೈಟ್ ಗಳು ಪ್ರೀಮಿಯಂ ಗ್ರಾಹಕ ಸೇವೆಯನ್ನು ಉಚಿತವಾಗಿ ನೀಡಿದ್ದವು ಎಂಬುದು ಹಳೇ ಸುದ್ದಿ.   ಭಾರತದಲ್ಲಿ ಅಶ್ಲೀಲ ಚಿತ್ರಗಳ ಚಿತ್ರಗಳ ವೀಕ್ಷಣೆ ಶೇ. 95 ರಷ್ಟು ಹೆಚ್ಚಾಗಿದೆ! ಇದು ಹೊಸ ಸುದ್ದಿ. ಇದಕ್ಕೆ ಕಾರಣ ಲಾಕ್ ಡೌನ್!

ಪೋರ್ನ್ ಹಬ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೊಸದೊಂದು ಸಂಗತಿಯನ್ನು ಬಿಚ್ಚಿಟ್ಟಿದೆ. ಲಾಕ್  ಡೌನ್ ಪರಿಣಾಮ ಅಶ್ಲೀಲ ಚಿತ್ರಗಳ ವೀಕ್ಷಣೆ ಕೊರೋನಾಗಿಂತ ಜೋರಾಗಿ ಏರಿಕೆಯಾಗಿದೆ.    ಪೋರ್ನ್ ಹಬ್ ಹೇಳುವಂತೆ ಭಾರತದಲ್ಲಿ ಮಾ. 24 ರಂದು ಪೋರ್ನ್ ವೀಕ್ಷಣೆ ಪ್ರಮಾಣ ಶೇ. 23 ರಷ್ಟಿತ್ತು.  ಆದರೆ ಇದು ಮಾರ್ಚ್ 27ರ ವೇಳೆಗೆ ಶೇ. 95 ಕ್ಕೆ ಏರಿದೆ. 

ಪೋರ್ನ್ ಸೈಟ್ ಗಳನ್ನು ಬಿಡದ ಕೊರೋನಾ! ಆಗಿದ್ದೇನು

ಇದಾದ ಬಳಿಕ ಈ ಪ್ರಮಾಣ ಸ್ವಲ್ಪ ಕುಸಿಯುತ್ತ ಬಂದತು. ಏ. 1 ರಂದು ಇದು ಶೇ. 64 ಕ್ಕೆ ತಲುಪಿತು.  ಭಾರತ ಮಾತ್ರವಲ್ಲದೇ ಇಂಗ್ಲೆಂಡ್, ಇಟಲಿ, ರಷ್ಯಾ, ಅಮೆರಿಕ , ಸ್ಪೇನ್ ನಲ್ಲಿಯೂ ಪೋರ್ನ್ ವೀಕ್ಷಣೆ ಪ್ರಮಾಣ ಏರಿಕೆಯಾಗಿದೆ. ಆದರೆ ಭಾರತದಷ್ಟಲ್ಲ!

ಸಾವು ದಾಖಲಿಸಲು ಆರಂಭಗೊಂಡಾಗ ಪೋರ್ನ್‌ಹಬ್ ಆರಂಭದಲ್ಲಿ ಇಟಲಿ, ಅಮೆರಿಕ ಮತ್ತು ಸ್ಪೇನ್‌ಗೆ ಒಂದು ತಿಂಗಳವರೆಗೆ ಉಚಿತ ಪ್ರೀಮಿಯಂ ಚಂದಾದಾರಿಕೆಯನ್ನು ನೀಡಿತು. ಸಾಂಕ್ರಾಮಿಕ ರೋಗ ಹರಡುತ್ತಿದ್ದಂತೆ ಈ ಪ್ರಸ್ತಾಪವನ್ನು ಶೀಘ್ರದಲ್ಲೇ ಎಲ್ಲಾ ದೇಶಗಳಿಗೂ ವಿಸ್ತರಿಸಲಾಯಿತು.ಪೋರ್ನ್ ಹಬ್ ಕೇವಲ ಅಶ್ಲೀಲ ಚಿತ್ರಗಳನ್ನುಮಾತ್ರ ಜನರಿಗೆ ನೀಡುತ್ತಿಲ್ಲ. ಬದಲಾಗಿ ಮೈಂಡ್‌ಗೀಕ್ ಒಡೆತನದ ಅಶ್ಲೀಲ ವಿಡಿಯೋ ಪ್ಲಾಟ್‌ಫಾರ್ಮ್ ಉದ್ಯಮದಲ್ಲಿ ಕೆಲಸ ಮಾಡುವ ನಟರಿಗೆ ನೆರವು ನೀಡುತ್ತಿದೆ.  ವಿವಿಧ ಕಡೆ ಚ್ಯಾರಿಟಿ ಹಣ ಸಹ ನೀಡುತ್ತಿದೆ. ಜನರನ್ನು ಮನೆಯಲ್ಲಿಯೇ ಉಳಿಯುವಂತೆ ಮಾಡುವಲ್ಲಿ ನಾವು ಸಫಲರಾಗಿದ್ದೇವೆ ಎನ್ನುವುದು ಪೋರ್ನ್ ಹಬ್ ಮಾತು.

Follow Us:
Download App:
  • android
  • ios