ನಾವು ಪ್ರತಿದಿನ ಸೇವಿಸೋ ಆಹಾರದಲ್ಲಿ ಅದೆಷ್ಟೋ ವಿಷಕಾರಿ ಪದಾರ್ಥಗಳು ನಮಗೆ ಗೊತ್ತಿಲ್ಲದೆಯೇ ದೇಹ ಸೇರುತ್ತವೆ. ಇವನ್ನು ಒಳಗೇ ಬಿಟ್ಟುಕೊಂಡು ನಮ್ಮ ಪಾಡಿಗೆ ನಾವು ಪ್ರತಿದಿನ ಮನಸೋ ಇಚ್ಛೆ ತಿಂದರೆ ಶೇಖರವಾದ ವಿಷವಸ್ತುಗಳು ನಿಧಾನವಾಗಿ ಬಾಲ ಬಿಚ್ಚಲಾರಂಭಿಸುತ್ತವೆ. ಜಡ, ಸುಸ್ತು ಎಂದು ಶುರುವಾದದ್ದು ಒಂದೊಂದೇ ಕಾಯಿಲೆಗಳಾಗಿ ಕಾಡಲಾರಂಭಿಸುತ್ತವೆ. ನೀರು ವಿಷಕಾರಿ ಪದಾರ್ಥಗಳನ್ನು ಹೊರಹಾಕುತ್ತದೆ. ಆದರೆ, ಅದನ್ನು ಒಂದಿಷ್ಟು ಆಸಕ್ತಿಕರ ಫ್ಲೇವರ್ ಸೇರಿಸಿ ಸಿದ್ಧಪಡಿಸಿ ಸೇವಿಸಿದರೆ ದೇಹದೊಂದಿಗೆ ಮನಸ್ಸಿಗೂ ಹಿತ. ಹೀಗಾಗಿ, ಲಿವರ್ ನ್ನು ಟಾಕ್ಸಿನ್ಸ್ ಮುಕ್ತ ಮಾಡಲು ಇಲ್ಲಿವೆ ಕೆಲ ಸಿಂಪಲ್ ಡಿಟಾಕ್ಸ್ ಡ್ರಿಂಕ್ಸ್.

ಸ್ಟ್ರಾಬೆರಿ ಸ್ಪಾ ವಾಟರ್
ಸ್ಟ್ರಾಬೆರಿ ರಸ ತೆಗೆದು ಅದಕ್ಕೆ ನೀರು, ಐಸ್ ಸೇರಿಸಿ ಮುಂಜಾನೆ ಕುಡಿಯಿರಿ. 

ನನ್ನ ನಂಬಿ, ಕೆಟ್ಟ ಫ್ಯಾಟ್ ಅಲ್ಲ ಗೋಡಂಬಿ!

ಸೇಬು ಸಿರಪ್
ಸೇಬು ಹಣ್ಣಿನ ರಸ ಹಾಗೂ ಚಕ್ಕೆಯನ್ನು ನೀರಿನಲ್ಲಿ ಒಂದೆರಡು ಗಂಟೆಗಳ ಕಾಲ ಹಾಕಿಡಿ. ಬಳಿಕ ಐಸ್ ಸೇರಿಸಿ ಸೇವಿಸಿ. ಇದು ಡಿಟಾಕ್ಸ್ ಮಾಡುವುದರೊಂದಿಗೆ ಹೆಚ್ಚು ಎನರ್ಜಿ ಕೂಡಾ ನೀಡುತ್ತದೆ.

ಎಳೆಸೌತೆ ರಸ
ಎಳೆ ಸೌತೆಕಾಯಿ ರಸಕ್ಕೆ ನಿಂಬೆರಸ, ಪುದೀನಾ, ಐಸ್ ಹಾಗೂ ನೀರು ಸೇರಿಸಿ ಪ್ರತಿದಿನ ಸೇವಿಸಿದಲ್ಲಿ ಹೊಟ್ಟೆ ಕೂಡಾ ಕರಗುತ್ತದೆ. 

ಕಲ್ಲಂಗಡಿ ಕಮಾಲ್
ಕಲ್ಲಂಗಡಿ ಹಣ್ಣಿನ ರಸ, ಪುದೀನಾ, ಶುಂಠಿ ಹಾಗೂ ನೀರು ರಿಫ್ರೆಶಿಂಗ್ ಜೊತೆಗೆ ಉತ್ತಮ ಡಿಟಾಕ್ಸ್ ಡ್ರಿಂಕ್ ಕೂಡಾ. ತೂಕ ಇಳಿಸಲೂ ಸಹಕಾರಿ. 

ಸ್ಥಿರ ಅರೋಗ್ಯಕ್ಕೆ ಅರಿಶಿನ ಟೀ!

ಆರೆಂಜ್ ಮ್ಯಾಜಿಕ್
ಕಿತ್ತಳೆ ಹಣ್ಣು, ಸೌತೆಕಾಯಿ, ನಿಂಬೆಹಣ್ಣನ್ನು ಅಡ್ಡಡ್ಡ ಹೆಚ್ಚಿ 4  ಗ್ಲಾಸ್ ನೀರಿನಲ್ಲಿ ಹಾಕಿ. ಅದಕ್ಕೆ ಪುದೀನಾ ಎಲೆ ಸೇರಿಸಿ ರಾತ್ರಿಯೇ ಫ್ರಿಡ್ಜ್ನಲ್ಲಿಡಿ. ಬೆಳಗ್ಗೆ ಎದ್ದೊಡನೆ ಸೇವಿಸಿ. ಇದು ಇಡೀ ದಿನ ನಿಮ್ಮನ್ನು ಹೆಚ್ಚು ಎನರ್ಜಿಯಿಂದ ಇಡುವುದು.